Advertisment

"ನನ್ನ ಹುಳುಕು ಏನಿದೆ ಎಲ್ಲವನ್ನು ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುವೆ: ಮುಂದೆ ಜೆಡಿಎಸ್ 8-9 ಸ್ಥಾನಗಳಿಗೆ ಕುಸಿಯಲಿದೆ" ಎಂದ ಡಿ.ಕೆ.ಶಿ

ರಾಜ್ಯ ರಾಜಕಾರಣದಲ್ಲಿ ಇಂದು ಮತ್ತೆ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ವಾಕ್ ಸಮರವೇ ನಡೆದಿದೆ. ಇಬ್ಬರದ್ದೂ ದಶಕಗಳ ವೈರತ್ವ. ಮಧ್ಯೆ ಒಂದೂವರೆ ವರ್ಷ ಮಾತ್ರವೇ ಸ್ನೇಹ. ಈಗ ಮತ್ತೆ ಹಳೇ ವೈರತ್ವದ ದಿನಗಳನ್ನು ನೆನಪಿಸುವಂತೆ ಇಬ್ಬರೂ ಚಾಲೆಂಜ್‌ ಹಾಕಿದ್ದಾರೆ.

author-image
Chandramohan
DKS V_S HDK

ಡಿಕೆಶಿ ವರ್ಸಸ್ ಎಚ್‌ಡಿಕೆ ಟಾಕ್ ವಾರ್‌

Advertisment
  • ಡಿಕೆಶಿ ವರ್ಸಸ್ ಎಚ್‌ಡಿಕೆ ಟಾಕ್ ವಾರ್‌
  • ರಾಜ್ಯದಲ್ಲಿ ಮತ್ತೆ ಹಳೇ ಬದ್ದವೈರಿಗಳ ಟಾಕ್ ವಾರ್ ಶುರು
  • ಒಂದೇ ದಿನ ಟಾಕ್ ವಾರ್ ನಡೆಸಿದ ಎಚ್‌ಡಿಕೆ ಅಂಡ್ ಡಿಕೆಶಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ ವಿವಾದ ಇರಬೇಕು. ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ. ಕುಮಾರಸ್ವಾಮಿ ನನ್ನ ವಿರುದ್ಧ ಇರುವ ದಾಖಲೆ ತಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ  ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

Advertisment

ನಗರದ ಸಿಟಿ ಸಿವಿಲ್ ಕೋರ್ಟ್ ಬಳಿ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.

"ಶಿವಕುಮಾರ್ ಜೊತೆ ಮಾತನಾಡಲು ಆಗುತ್ತಾ, ಆ ಯೋಗ್ಯತೆ ಉಳಿಸಿಕೊಂಡಿದ್ದಾರಾ" ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದಾಗ, “ಕುಮಾರಸ್ವಾಮಿ ಬಳಿ ಸಾಕ್ಷಿಗುಡ್ಡೆ ಇದ್ದರೆ, ಜನಕ್ಕೆ, ರಾಜ್ಯಕ್ಕೆ ಒಳ್ಳೆಯದು ಮಾಡಿದ್ದರೆ ಅದನ್ನು ದಾಖಲೆ ಸಮೇತ ಬಂದು ಹೇಳಲಿ. ಜನ ಅವರಿಗೆ ಮತ ಕೊಟ್ಟು ದೊಡ್ಡ ಹುದ್ದೆ ನೀಡಿದ್ದಾರೆ. ಸಾರ್ವಜನಿಕವಾಗಿ ಬಂದು ಉತ್ತರ ನೀಡಲಿ. ಕೇವಲ ಸುಳ್ಳು ಆರೋಪ ಮಾಡುತ್ತಾ, ಬೇರೆಯವರಿಗೆ ಹೆದರಿಸುತ್ತಾ ಹೋಗುವುದಲ್ಲ. ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆ, ತೆಗೆಯುತ್ತೇನೆ ಎಂದು ಹೇಳಿದಂತೆ ಅಲ್ಲ. ಬಹಿರಂಗ ಚರ್ಚೆಗೆ ಬರಲಿ. ಇದರಲ್ಲಿ ಅವಮಾನ ಆಗುವಂತದ್ದು ಏನೂ ಇಲ್ಲ. ಅವರು ಸಿಎಂ ಆಗಿದ್ದಾಗ ನಾನು ಸಾತನೂರಿಗೆ ಚರ್ಚೆಗೆ ಹೋಗಲಿಲ್ಲವೇ? "ನಾನು ಏನು ಮಾಡಿದ್ದೇನೆ, ನನ್ನ ಹುಳುಕು ಏನಿದೆ ಎಂಬುದನ್ನು ನೀನು ಹೇಳು, ನಿನ್ನದು ಏನಿದೆ ಎಂದು ನಾನು ಹೇಳುತ್ತೇನೆ. ನಂತರ ಜನ ತೀರ್ಮಾನ ಮಾಡುತ್ತಾರೆ” ಎಂದು ಸವಾಲು ಹಾಕಿದರು.

“ಅವರು ನನ್ನ ಯಾವ ವಿಚಾರ ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅವರ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲಾ. ಈ ಡಿ.ಕೆ. ಶಿವಕುಮಾರ್ ಅದಕ್ಕೆಲ್ಲಾ ಹೆದರುವ ಮಗ ಅಲ್ಲ” ಎಂದು ಪುನರುಚ್ಛರಿಸಿದರು.

Advertisment

ಇದನ್ನು ಓದಿ :  ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಸಿಕೊಳ್ಳಬೇಡಿ ಎಂದ ಎಚ್‌ಡಿಕೆ: ಮುಂದೆ ಕಡಿಮೆ ಖರ್ಚಿನಲ್ಲಿ ಖಾತಾ ಮಾಡಿಕೊಡುವ ಭರವಸೆ!

ಎರಡೂವರೆ ವರ್ಷಗಳ ನಂತರ ನಮ್ಮ ಸರ್ಕಾರ ಬರುತ್ತದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಡೈಲಾಗ್ ಎಷ್ಟು ಸಾರಿ ಹೇಳಿ ಆಗಿದೆ. ಕೇಳಿ, ಕೇಳಿ ಸಾಕಾಗಿದೆ. ಇವರ ನಾಯಕತ್ವದಲ್ಲಿ ಇವರ ಪಕ್ಷ 18 ಸ್ಥಾನಕ್ಕೆ ಇಳಿದಿದೆ. ಮುಂದಿನ ಬಾರಿ 8 ಅಥವಾ 9 ಸ್ಥಾನಗಳಿಗೆ ಕುಸಿಯಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್   ತಿರುಗೇಟು ನೀಡಿದರು.

ಲೋಕಸಭೆ ಮತ್ತು BBMP ಚುನಾವಣೆ ಮೇಲೆ ಕಾಂಗ್ರೆಸ್​ ಹದ್ದಿನ ಕಣ್ಣು; ದೊಡ್ಡವರ ಕಥೆ ನಾನು ನೋಡಿಕೊಳ್ತೀನಿ ಎಂದ ಡಿ.ಕೆ. ಶಿವಕುಮಾರ್


ಇದನ್ನು ಓದಿ  ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಸಿಕೊಳ್ಳಬೇಡಿ ಎಂದ ಎಚ್‌ಡಿಕೆ: ಮುಂದೆ ಕಡಿಮೆ ಖರ್ಚಿನಲ್ಲಿ ಖಾತಾ ಮಾಡಿಕೊಡುವ ಭರವಸೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
DKS V/S HDK TALK WAR
Advertisment
Advertisment
Advertisment