/newsfirstlive-kannada/media/media_files/2026/01/20/dks-in-delhi-2026-01-20-15-47-28.jpg)
ದೆಹಲಿಯಲ್ಲಿ ಖರ್ಗೆ ನಿವಾಸದಲ್ಲಿ ಸಭೆಯಲ್ಲಿ ಭಾಗಿಯಾಗಿದ್ದ ಡಿಕೆಶಿ
ಎಂಥಾ ಇಂಟ್ರಸ್ಟಿಂಗ್​​ ಅಂದ್ರೆ ಸಂಡೆ ಡೆಲ್ಲಿ ಕ್ಲೈಮೇಟ್​​ ಸುಂದರ, ಅತಿ ಸುಂದರ ಅಂದ್ರು.. ಆದ್ರೆ, ಪಟ್ಟದ ಸಿಹಿ ಘಳಿಗೆ ಬಯಸಿದ್ದ ಡಿಕೆಶಿಗೆ ಕ್ಲೈಮ್ಯಾಕ್ಸ್​​ ಉಲ್ಟಾ ಹೊಡೆದಿದೆ.. ನಾಳೆ ಬಿಟ್ಟು ನಾಡಿದ್ದು ಬಜೆಟ್​​​ ಪೂರ್ವ ಜಂಟಿ ಅಧಿವೇಶನ ಆರಂಭ ಆಗ್ತಿದೆ.. ಅಲ್ಲಿ ಒಂದು ವಾರ ಟೈಂ ಲ್ಯಾಪ್ಸು.. ಅಲ್ಲಿಗೆ ಸಿಎಂ ಕುರ್ಚಿ ಕಸರತ್ತು ಮುಂದಿನ ತಿಂಗಳಿಗೆ ಮುಂದೂಡಿಕೆ ಆದಂತಾಯ್ತು.. ಒಂಥರಾ ತಾಳ್ಮೆ ಸಂಯಮದ ಪರೀಕ್ಷೆ ಕಾಲ..
ಮಾಯಾಜಿಂಕೆಯ ಮಹಾಬೇಟೆ ತಪ್ಪಿದ ಹಳಹಳಿ ಡಿಕೆಶಿಯ ಮನದಲ್ಲಿ ಹೊಯ್ದಾಡ್ತಿದೆ.. ನಾಲ್ಕು ದಿನ ಡೆಲ್ಲಿಯಲ್ಲೇ ಠಿಕಾಣಿ ಹೂಡಿದ್ರೂ ಆಸೆಗಳು ಕರಗಿ ನಿರಾಸೆಗೆ ದೂಡಿದಂತೆ ಕಾಡ್ತಿದೆ.. ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದ ಡಿಕೆಶಿಗೆ ಒಲವಿನ ಪೂಜಾ ಫಲ ಸಿಗ್ಲಿಲ್ವೋ ಏನೋ ಅನ್ನೋ ಡೌಟು ಹೊಡೀತಿದೆ.. ನಿನ್ನೆ ಡೆಲ್ಲಿಯಿಂದ ರಿಟರ್ನ್​​ ಆದ ಕಾಂಗ್ರೆಸ್​​​ನ ಕನಕನಿಗೆ ವಾರದ ಅಧಿವೇಶನ ಅಡ್ಡಿಗೆ ತಳ್ಳಿದೆ..
ಡಿಕೆ ಪಟ್ಟದಾಟಕ್ಕೆ ಡೆಲ್ಲಿಯಲ್ಲಿ ಕೂಡಿಬಾರದ ಕ್ಲೈಮೇಟ್​​​​!
ಮುಂದಿನ ತಿಂಗಳಿಗೆ ಮುಂದೂಡಿಕೆ ಆಯ್ತಾ ಕ್ಲೈಮ್ಯಾಕ್ಸ್​​?
ಕರ್ನಾಟಕ ಸಿಂಹಾಸನ ಪಟ್ಟಗಿಟ್ಟಿಸಲು ಶರಪಂಜರ ಹೆಣೆದ ಚತುರ್ದಶ ವಿದ್ಯಾ ಪಾರಂಗತ ಕೆಪಿಸಿಸಿ ಕಟ್ಟಪ್ಪ, ಶಬ್ಧವೇಧಿಯ ಯುದ್ಧ ವಿದ್ಯಾರ್ಜನೆ ಆರಂಭಿಸಿದ್ದಾರೆ.. ಆದ್ರೆ, ಸರ್ವಶಕ್ತ ಡೆಲ್ಲಿ ಕಮಾಂಡರ್​ಗಳು ಯಾವುದಕ್ಕೂ ಜಗ್ತಿಲ್ಲ, ಯಾವ ಮಾತಿಗೂ ಮಣೀತಿಲ್ಲ.. ಅಟ್​​ಲಿಸ್ಟ್​​ ಕರೆದು ಮಾತ್ನಾಡ್ತಿನಿ ಅಂದೋರು ಈಗ ಅಧಿವೇಶನ ಆಗ್ಲಿ ಅಂತಿದ್ದಾರೆ..
ದೆಹಲಿಯಲ್ಲಿ ಸಂಡೆ ವೆದರ್​​​​ ಫಸ್ಟ್​ಕ್ಲಾಸ್​​ ಅಂದ ಡಿಕೆಶಿಗೆ ಮರುದಿನವೇ ವಿಸಿಟ್​​​ ಮುಗಿಸಿದ್ದಾರೆ.. ಈ ಬಗ್ಗೆ ಮಾತ್ನಾಡಿದ ಡಿಸಿಎಂ ಡಿಕೆಶಿ, ಯಾಱರನ್ನ ಭೇಟಿ ಮಾಡಬೇಕೋ ಮಾಡಿದ್ದೇನೆ.. ಪಕ್ಷಕ್ಕೆ ಒಳ್ಳೆಯದು ಆಗಬೇಕು ಅಂದ್ರು.. ಆದ್ರೆ, ನಿಮ್ಮ ವಿಚಾರ ಏನಾಯ್ತು ಎಂಬ ಪ್ರಶ್ನೆಗೆ, ಪಕ್ಷ ಏನು ಹೇಳುತ್ತೆ.. ಅದನ್ನ ನಾನು ಸಿದ್ದರಾಮಯ್ಯ ಇಬ್ಬರು ಒಪ್ಪಿಕೊಂಡು ಒಮ್ಮತದ ತೀರ್ಮಾನದಲ್ಲಿ ಹೋಗ್ತೀವಿ ಅಂದ್ರು..
‘ಪಕ್ಷ ಮತ್ತು ಶಾಸಕರು ಹಿತದೃಷ್ಟಿಯಿಂದ ಕಾಯುತ್ತಿದ್ದೇವೆ’
ಹಣೆ ಬರಹದಲ್ಲಿ ಬರೆದಿದ್ರೆ ಸಿಎಂ ಆಗ್ತಾರಂದ್ರು ಅಣ್ತಮ್ಮ!
ಬಮುಲ್​​ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್​​, ಮಾತು ಪಕ್ಷದ ಮೇಲಿನ ಕಾಳಜಿ ಮತ್ತು ವಾರ್ನಿಂಗ್​​ ರೂಪದಲ್ಲಿ ಕಾಣಿಸ್ತಿದೆ.. ಸೂಕ್ತ ಸಂದರ್ಭದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ತೇವೆ ಅಂತ ಮೈಸೂರಿನಲ್ಲಿ ರಾಹುಲ್​​ ಕೊಟ್ಟ ಭರವಸೆ ಬಾಯ್ಬಿಟ್ಟ ಸುರೇಶ್​, ಪಕ್ಷ ಆಲ್ ರೆಡಿ ತಾಳ್ಮೆಯಿಂದ ಇರಿ ಎಂದು ಹೇಳಿದೆ.. ಹೀಗಾಗಿ ಪಕ್ಷ ಮತ್ತು ಶಾಸಕರು ಹಿತದೃಷ್ಟಿಯಿಂದ ಕಾಯ್ತಿದ್ದೇವೆ ಅಂದ್ರು.. ಅಲ್ಲದೆ, ಅಧಿಕಾರ ಸುಲಭವಾಗಿ ಸಿಗಲ್ಲ, ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಸಿಎಂ ಆಗ್ತಾರೆ ಎಂಬ ವಿಶ್ವಾಸ ತೋರಿದ್ರು..
ಇನ್ನು, ಅಧಿವೇಶನ ಆರಂಭಕ್ಕೆ 2 ದಿನ ಮೊದಲೇ ಡಿಸಿಎಂ ಡಿಕೆಶಿ ವಿದೇಶಿ ಯಾತ್ರೆಗೆ ತೆರಳಿದ್ದಾರೆ.. ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಲು ಇವತ್ತು ದಾವೋಸ್​​​​ಗೆ ತೆರಳಿದ್ದಾರೆ.. ಭಾನುವಾರವೇ ಸಚಿವ ಎಂಬಿ ಪಾಟೀಲ್​​​ ನೇತೃತ್ವದಲ್ಲಿ ಉನ್ನತ ನಿಯೋಗದ ಜೊತೆ ತೆರಳಿದೆ.. ಆದ್ರೆ ಡಿಕೆಶಿ, ತಮ್ಮ ವಯಕ್ತಿಕ ರಾಜಕೀಯಕ್ಕಾಗಿ ವಿಳಂಬ ಮಾಡಿದ್ರೂ ಅನ್ನೋ ಚರ್ಚೆ ಹಬ್ಬಿತ್ತು.. ಒಟ್ಟಾರೆ, ಸಂಕ್ರಮಣದ ಶುಭಫಲದ ನಿರೀಕ್ಷೆಯಲ್ಲಿದ್ದ ಡಿಸಿಎಂ, ಇನ್ನೆಷ್ಟು ದಿನ ಕಾಯೋದು ಅನ್ನೋ ಚಿಂತೆಯ ಗೆರೆ ಹಣೆಯ ಮೇಲೆ ಎಳೆದಿದೆ..
/filters:format(webp)/newsfirstlive-kannada/media/media_files/2026/01/17/apex-bank-president-post-fight-1-2026-01-17-16-16-33.jpg)
ಶಿವಪ್ರಸಾದ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us