ನಮಗೂ ಸಿದ್ದರಾಮಯ್ಯರಿಗೂ 50 ವರ್ಷಗಳ ಬಾಂಧವ್ಯ ಇದೆ. ರಾಜ್ಯದಲ್ಲಿ ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯ ಎಲ್ಲಿವರೆಗೆ ಚನ್ನಾಗಿ ಇರುತ್ತೋ ಅಲ್ಲಿವರೆಗೆ ನೀವು ಮುಖ್ಯಮಂತ್ರಿಯಾಗಿರಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಿಂದ ಕನಿಷ್ಠ ಒಂದು ರೀತಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ, ಅಭಿಮಾನ ಸೇರಿ ಎಲ್ಲವೂ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನಂತ್ರ ಮುಂದೇನು ಎನ್ನುವುದು ನನ್ನ ಯೋಚನೆ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.
ಸಂವಿಧಾನ ಪರವಾಗಿ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು. ಆದರೆ ಈ ರಾಜ್ಯವನ್ನು ನಡೆಸಿಕೊಂಡು ಬಂದವರ ಪೈಕಿ ನಿಜಕ್ಕೂ ಆದರ್ಶ, ಪ್ರೀತಿ, ಅಭಿಮಾನದಿಂದ ಜನರು ನೋಡಿದಂತ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು. ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ, ಒತ್ತಾಯಕ್ಕೆ ಮಣಿಬೇಕಾಗಿಲ್ಲ. ಅಂತಹ ಸಂದರ್ಭ ಬಂದರೆ ನೋಡೇ ಬಿಡೋಣ ಎಂದು ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us