ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ನೀಡಿಕೆ, ದಿನಕ್ಕೆ ಕೂಲಿ ಎಷ್ಟು ಗೊತ್ತಾ?

ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.

author-image
Chandramohan
prajwal revanna jail (2)

ಪ್ರಜ್ವಲ್ ಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ

Advertisment
  • ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ
  • ಪ್ರಜ್ವಲ್ ಜೈಲಿನಲ್ಲಿ ದಿನಗೂಲಿ ನೌಕರನಂತೆ ಕೂಲಿ ಪಡೆಯಬೇಕು
  • ಪ್ರಜ್ವಲ್ ಗೆ ಯಾವ ಕೆಲಸ ನೀಡ್ತಾರೆ ಅಂತ ಕುತೂಹಲ

    ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ.  ಪ್ರಜ್ವಲ್ ರೇವಣ್ಣಗೆ ಜೈಲ್ಲಿ‌ನಲ್ಲಿ ಏನು ಕೆಲಸ ಕೊಡಬೇಕು ಎಂಬುದರ ಬಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ  ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ  ಆರಂಭವಾಗಿದೆ. ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣಗೆ ಜೈಲ್ಲಿನಲ್ಲಿ ಕೆಲಸವನ್ನು ನೀಡಲಿದ್ದಾರೆ.  
ಸದ್ಯ ಪ್ರಜ್ವಲ್  ವಿದ್ಯಾಭ್ಯಾಸ ಮೇಲೆ ಕೆಲಸ ನೀಡಲು ಚಿಂತನೆ ನಡೆದಿದೆ. ಅಪರಾಧಿ ಪ್ರಜ್ವಲ್ ಬಿ.ಇ. ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ವ್ಯಾಸಂಗಕ್ಕೆ ಹೊಂದಿಕೊಳ್ಳುವ ಕೆಲಸ ನೀಡಲು ಜೈಲು ಅಧಿಕಾರಿಗಳ ಪ್ಲ್ಯಾನ್ ಮಾಡಿದ್ದಾರೆ.  ಸಜಾಬಂಧಿ ಖೈದಿಗಳು ಕಡ್ಡಾಯವಾಗಿ ಜೈಲ್ಲಿ‌ನಲ್ಲಿರುವ  ಯಾವುದಾದರೊಂದು ಕೆಲಸ ಮಾಡಬೇಕು. ಜೈಲಿನಲ್ಲಿ ಬೇಕರಿ, ತೋಟಗಾರಿಕೆ, ಗ್ರಂಥಾಲಯ ನಿರ್ವಹಣೆ, ಶಿಕ್ಷಣ, ಮಗ್ಗ, ಸಣ್ಣ ಪುಟ್ಟ ಕೈಗಾರಿಕೆ ಕೆಲಸ , ಅಡುಗೆ ಮನೆ ನಿರ್ವಹಣೆ, ಅಡ್ಮಿನಿಸ್ಟ್ರೇಶನ್ ನೋಡಿಕೊಳ್ಳುವುದು, ಸ್ಕಿಲ್ ಡೆವಲಪ್ಮೆಂಟ್ ಮುಂತಾದ ಕೆಲಸಗಳು ಇವೆ . ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ  ದಿನಕ್ಕೆ 540  ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ 615 ರೂಪಾಯಿ ಕೂಲಿ  ನಿಗದಿಯಾಗಲಿದೆ. 
ಜೈಲಿನ  ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ   ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ  ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ. 

bangalore central jail


 ಜೈಲು ಕಾಯ್ದೆ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸವನ್ನು ಸಜಾ ಬಂಧಿಗಳು ಮಾಡಬೇಕು ಅಥವಾ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ಮಾಡ್ತೀನಿ ಅಂತ ಜೈಲು ಅಧಿಕಾರಿಗಳಿಗೆ ತಿಳಿಸಬೇಕು.   ಸದ್ಯ ಸಜಾ ಖೈದಿಯಾಗಿರುವ ಪ್ರಜ್ವಲ್ ಯಾವ ಕೆಲಸ ಜೈಲಿನಲ್ಲಿ ಮಾಡ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Prajwal Revanna
Advertisment