/newsfirstlive-kannada/media/media_files/2025/11/26/rahul-gandhi-and-dks-2025-11-26-14-33-55.jpg)
ರಾಹುಲ್ ಗಾಂಧಿಯಿಂದ ಡಿಕೆಶಿಗೆ ಮೇಸೇಜ್!
ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸದ್ಯ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಎರಡೂವರೆ ವರ್ಷದ ಹಿಂದೆಯೂ ಸಿಎಂ ಸ್ಥಾನಕ್ಕೇರಲು ದೆಹಲಿಯಲ್ಲಿ ಪ್ರಯತ್ನ ನಡೆಸಿದ್ದರು. ಆಗ ಕಾಂಗ್ರೆಸ್ ಹೈಕಮ್ಯಾಂಡ್ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಿತ್ತು. ಡಿಕೆಶಿ ಡಿಸಿಎಂ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈಗ ಐದು ವರ್ಷದ ಅವಧಿಯ ಪೈಕಿ ಅರ್ಧ ಅವಧಿಯನ್ನು ಸಿದ್ದರಾಮಯ್ಯ ಪೂರ್ಣಗೊಳಿಸಿದ್ದಾರೆ.
ಈಗ ಮತ್ತೆ ಸಿಎಂ ಸ್ಥಾನಕ್ಕೇರಲು ಡಿಸಿಎಂ ಡಿಕೆಶಿ ಪ್ರಯತ್ನ ಆರಂಭಿಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಈಗ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ವಿಷಯದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನೇರವಾಗಿ ಭೇಟಿಯಾಗಲು ಡಿಸಿಎಂ ಡಿಕೆಶಿ ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿ ಅವರ ಭೇಟಿಗೆ ಅಪಾಯಿಂಟ್ ಮೆಂಟ್ ಕೂಡ ಕೇಳಿದ್ದಾರೆ. ಇದರಿಂದಾಗಿ ರಾಹುಲ್ ಗಾಂಧಿ ವಾಟ್ಸಾಫ್ ನಲ್ಲೇ ಡಿಕೆಶಿ ಗೆ ಮೇಸೇಜ್ ಮಾಡಿದ್ದಾರೆ. ಸ್ವಲ್ಪ ಕಾಯಿರಿ. ನಾನು ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ರಾಹುಲ್ ಗಾಂಧಿ, ಡಿಕೆಶಿಗೆ ಮೇಸೇಜ್ ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಹುಲ್ ಗಾಂಧಿ ಭೇಟಿಗೆ ಡಿಸಿಎಂ ಡಿಕೆಶಿ ಯತ್ನಿಸುತ್ತಿದ್ದಾರೆ. ರಾಜ್ಯದ ಸಿಎಂ ಹುದ್ದೆಯನ್ನು ತಮಗೆ ನೀಡಬೇಕೆಂದು ಹಕ್ಕು ಮಂಡಿಸಲು ಡಿಕೆಶಿ ಕಾಯುತ್ತಿದ್ದಾರೆ. ಡಿಕೆಶಿಗೆ ಸ್ವಲ್ಪ ಕಾಯಿರಿ, ನಾನು ನೇರವಾಗಿ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಮೇಸೇಜ್ ಅನ್ನು ರಾಹುಲ್ ಗಾಂಧಿ ಕಳಿಸಿದ್ದಾರೆ . ರಾಹುಲ್ ಗಾಂಧಿ ಕಾಲ್ ಗಾಗಿ ಡಿಸಿಎಂ ಡಿಕೆಶಿ ಕಾಯುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/11/26/rahul-gandhi-and-dks-1-2025-11-26-14-35-36.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us