/newsfirstlive-kannada/media/media_files/2026/01/22/ashok-versus-pradeep-eshwar-2026-01-22-12-47-25.jpg)
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡದೇ, ಒಂದೇ ಸಾಲಿನಲ್ಲಿ ಭಾಷಣ ಮಂಡಿಸಿ ಸದನದಿಂದ ನಿರ್ಗಮಿಸಿದ್ದಾರೆ. ರಾಜ್ಯಪಾಲರ ಈ ನಡೆ ಬಗ್ಗೆ ಈಗ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಶಾಸಕರು ಪರ -ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿ ಸದಸ್ಯರು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡರೇ, ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿ ಟೀಕಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ . ಆರ್ಟಿಕಲ್ 173 ಕಾನೂನು ಅನ್ನು ಉಲ್ಲಂಘನೆ ಮಾಡಿದ್ದಾರೆ. ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ರಾಜ್ಯಪಾಲರನ್ನು ಟೀಕಿಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನರೇಗಾ ಬದಲು ವಿಬಿ ರಾಮ್ ಜಿ ಕಾಯಿದೆಯನ್ನು ಜಾರಿಗೆ ತಂದು ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕುತ್ತಿದ್ದಾರೆ. ರಾಜ್ಯಸರ್ಕಾರ ಶೇ.40 ರಷ್ಟು, ಕೇಂದ್ರ ಶೇ.60 ರಷ್ಟು ಕೊಡಬೇಕಾಗಿದೆ. ಬಿಜೆಪಿ ಪಕ್ಷ ಮೂಲಭೂತ ಹಕ್ಕು ಅನ್ನು ಕಿತ್ತುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/17/bjp-leader-r-ashoka-2025-11-17-16-21-44.jpg)
ಆದರೇ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆ ಕಲಾಪದಲ್ಲೇ ಇದು ಕರಾಳ ದಿನ. ಕಾಂಗ್ರೆಸ್ ಸರ್ಕಾರ ಈ ರೀತಿ ವಿಧಾನ ಮಂಡಲ ಅಧಿವೇಶನ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೇತುವೆಯಾಗಿ ರಾಜ್ಯಪಾಲರು ಕೆಲಸ ಮಾಡಿದ್ದಾರೆ. ಹಂಸರಾಜ್ ಭಾರದ್ವಾಜ್ ಸಹ ಇದೇ ರೀತಿ ಮಾಡಿದ್ದರು. ಸಂವಿಧಾನ ಪ್ರಕಾರ ರಾಜ್ಯಪಾಲರು ಬಂದು ಹೋಗಿದ್ದಾರೆ . ಕಾಂಗ್ರೆಸ್ ನವರು ಸದನದಲ್ಲಿ ರಾಜ್ಯಪಾಲರಿಗೆ ಘೇರಾವ್ ಹಾಕಿದ್ದಾರೆ . ಹೆಚ್ ಕೆ ಪಾಟೀಲ್ ಅಂತ ಹಿರಿಯರು ಅಡ್ಡಿ ಮಾಡಿದ್ದಾರೆ ಎಂದು ಟೀಕಿಸಿದ್ದರು.
ಇಷ್ಟು ಜನರ ಮೇಲೆ ಸ್ವೀಕರ್ ಕ್ರಮ ತೆಗೆದುಕೊಳ್ಳಬೇಕು. ಕಾನೂನು ನಲ್ಲಿ ಆ ರೀತಿ ಇದೆ . ನಾನು ಸ್ಪೀಕರ್ ಗೆ ಒತ್ತಾಯ ಮಾಡುತ್ತೇನೆ. ಗರ್ವನರ್ ಕಚೇರಿಯನ್ನು ಕಾಂಗ್ರೆಸ್ ಆಫೀಸ್ ಮಾಡುವುದಕ್ಕೆ ಆಗುತ್ತಾ? ಹೆಚ್. ಕೆ. ಪಾಟೀಲ್ ಅವರಿಗೆ ಪ್ರಮಾಣವಚನ ಭೋಧಿಸಿರುವುದು ಇದೇ ರಾಜ್ಯಪಾಲರು. ಇಡೀ ಸದನಕ್ಕೆ ಕಾಂಗ್ರೆಸ್ ಅಪಮಾನ ಮಾಡಿದ್ದಾರೆ. ಸಂವಿಧಾನ ಮೌಲ್ಯಗಳ ಅಪಮಾನ ಮಾಡಿದ್ದಾರೆ.
ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಹಲವಾರು ಆದೇಶ ಆಗಿದೆ . ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ಗವರ್ನರ್ ಅಧಿಕಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಅಂತ ಸುಪ್ರೀಂಕೋರ್ಟ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us