/newsfirstlive-kannada/media/media_files/2026/02/03/kanakosatava-2026-dks-1-2026-02-03-13-15-48.jpg)
ಕನಕೋತ್ಸವದಲ್ಲಿ ಭಾಗಿಯಾದ ಕಾಂಗ್ರೆಸ್ ಶಾಸಕರು
ತಮ್ಮ ಸ್ವಂತ ವಿಧಾನಸಭಾ ಕ್ಷೇತ್ರವಾದ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಕನಕೋತ್ಸವದ ನಡೆಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಲ ಪ್ರದರ್ಶನ ಮಾಡಿದ್ರಾ ಎಂಬ ಚರ್ಚೆ ಈಗ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಸಿಎಂ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಡಿ.ಕೆ. ಶಿವಕುಮಾರ್ ಯತ್ನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.
ಸದ್ಯ ಕನಕೋತ್ಸವದ ಬಗ್ಗೆಯೇ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲೂ ಕನಕೋತ್ಸವದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ತಮಗಿರುವ ಶಾಸಕರ ಶಕ್ತಿ ಪ್ರದರ್ಶನ ಮಾಡಿದ್ರಾ ಎಂಬ ಚರ್ಚೆ ಶುರುವಾಗಿದೆ.
===========
ಕಾಂಗ್ರೆಸ್​ನಲ್ಲಿ ಚರ್ಚೆ ಏನು?
ಚರ್ಚೆ-1
ಕನಕೋತ್ಸವ ಕಾರ್ಯಕ್ರಮಕ್ಕೆ ಶಾಸಕರನ್ನ ಕರೆಸಿ ಒಗ್ಗಟ್ಟು ಪ್ರದರ್ಶನ
ಚರ್ಚೆ-2
ಸುಮಾರು 50ಕ್ಕೂ ಹೆಚ್ಚು ಶಾಸಕರನ್ನ ಜೊತೆಗೂಡಿಸಿ ಬಲ ಪ್ರದರ್ಶನ
ಚರ್ಚೆ-3
ಸಚಿವ ಸ್ಥಾನದಿಂದ ವಂಚಿತರಾದ ಶಾಸಕರ ಜೊತೆಯಲ್ಲೂ ಮಾತುಕತೆ
ಚರ್ಚೆ-4
ಈ ಮೂಲಕ ನಿಮ್ಮ ಜೊತೆಗೆ ನಾನಿದ್ದೇನೆ ಅನ್ನೋ ಸಂದೇಶ ರವಾನೆ
ಚರ್ಚೆ-5
ನಿಮ್ಮ ಮಗನ ಕೈನಲ್ಲೇ ಮೇಕೆದಾಟು ಯೋಜನೆಯ ಭೂಮಿ ಪೂಜೆ ಭಾಗ್ಯ
ಚರ್ಚೆ-6
ಕ್ಷೇತ್ರದ ಜನರಿಗೂ ನಾನು ಶೀಘ್ರ ಸಿಎಂ ಆಗುತ್ತೇನೆ ಎಂಬ ಸಂದೇಶ
ಸಿಎಂ ಆಪ್ತರೂ ಅಲರ್ಟ್
ಡಿ.ಕೆ. ಶಿವಕುಮಾರ್ ನಡೆಯ ಬಗ್ಗೆ ಸಿಎಂ ಆಪ್ತರು ಕೂಡ ನಿಗಾ ವಹಿಸಿದ್ದಾರೆ. ಶಾಸಕರ ಜೊತೆಗಿನ ಡಿ.ಕೆ. ಶಿವಕುಮಾರ್ ಮಾತುಕತೆಯ ಬಗ್ಗೆ ನಿಗಾ ವಹಿಸಿದ್ದಾರೆ. ಕನಕೋತ್ಸವದ ನೆಪದಲ್ಲಿ ಬಲಪ್ರದರ್ಶನ ಮಾಡಿದ್ದೇಕೆ ಅನ್ನೋ ಚರ್ಚೆ ನಡೆಯುತ್ತಿದೆ. ಜೊತೆಗೆ ಕನಕೋತ್ಸವವನ್ನ ಈ ಹಿಂದೆ ಮಾಡಿದ್ರಾ ಅನ್ನೋ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕನಕೋತ್ಸವದಲ್ಲಿ ಭಾಗಿಯಾದ ಶಾಸಕರು ಯಾಱರು?, ಅವರ ಜೊತೆ ಚರ್ಚೆ ಏನಾಯ್ತು? ಶಾಸಕರನ್ನ ಕರೆಸಿಕೊಂಡು ಡಿ.ಕೆ. ಶಿವಕುಮಾರ್ ಕೊಟ್ಟ ಸಂದೇಶ ಏನು? ಈ ಎಲ್ಲದರ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಆಪ್ತ ಬಣದ ನಾಯಕರು ಕೂಡ ಕಲೆ ಹಾಕುತ್ತಿದ್ದಾರೆ.
/filters:format(webp)/newsfirstlive-kannada/media/media_files/2026/02/03/kanakosatava-2026-dks-2026-02-03-13-22-46.jpg)
===========
ಕನಕೋತ್ಸವದಲ್ಲಿ ಭಾಗಿಯಾದ ಕಾಂಗ್ರೆಸ್ ಶಾಸಕರು
1.ಗಣೇಶ್ ಹುಕ್ಕೇರಿ,(ಚಿಕ್ಕೋಡಿ-ಸದಲಗ)
2.ದರ್ಶನ್ ದೃವನಾರಾಯಣ್( ನಂಜನಗೂಡು)
3.ಬಸವರಾಜ್ ಶಿವಗಂಗಾ(ಚನ್ನಗಿರಿ)
5.ರಾಜ ವೆಂಕಟಪ್ಪ ನಾಯಕ್(ಸುರಪುರ)
6.ಅನಿಲ್ ಚಿಕ್ಕ ಮಾದು(HD. ಕೋಟೆ)
7.ಮಂತರ್ ಗೌಡ(ಕೊಡಗು)
8.ನಂಜೇಗೌಡ, ಮಾಲೂರು ಎಂಎಲ್ಎ
9.ಎಸ್ .ಟಿ ಸೋಮಶೇಖರ್ ಯಶವಂತಪುರ MLA
10.ಬಾಬಾ ಸಾಹೇಬ್ ಪಾಟೀಲ್ (ಕಿತ್ತೂರು MLA)
11.ರಂಗನಾಥ್ (ಕುಣಿಗಲ್) ಎಂಎಲ್ಎ
12.ರಾಮಲಿಂಗ ರೆಡ್ಡಿ (ಸಚಿವರು)
13.ಶ್ರೀನಿವಾಸ್, ನೆಲಮಂಗಲ ಎಂಎಲ್ಎ
14.ಎ.ಸಿ ಶ್ರೀನಿವಾಸ್, ಪುಲಿಕೇಶಿನಗರ ಎಂಎಲ್ಎ
15.ಬಿ .ಆರ್ ಪಾಟೀಲ್ ಆಳಂದ mla
16.ನಾಗೇಂದ್ರ, ಬಳ್ಳಾರಿ ಗ್ರಾಮೀಣಾ mla
17.ಶರತ್ ಬಚ್ಚೇಗೌಡ, ಹೊಸಕೋಟೆ mla
18.ಲತಾ ಮಲ್ಲಿಕಾರ್ಜುನ್(ಹರಪ್ಪನಹಳ್ಳಿ mla)
19.ಕೆ.ಎಂ. ಶಿವಲಿಂಗೇಗೌಡ, ಅರಸೀಕೆರೆ mla
20.ಪೊನ್ನಣ್ಣ. ವಿರಾಜಪೇಟೆ mla
21.ವಿಶ್ವಾಸ್ ವೈದ್ಯ ಸವದತ್ತಿ mla
22.H. V. ವೆಂಕಟೇಶ್, ಪಾವಗಡ mla
23.ಭೀಮಣ್ಣ ನಾಯಕ್ ಶಿರಸಿ, mla
24.D.T. ರಾಜೇಗೌಡ ಶೃಂಗೇರಿ mla
25.ಉದಯ್ ಕದಲೂರು, ಮದ್ದೂರು mla
26. ಸ್ಪೀಕರ್ ಯು ಟಿ ಖಾದರ್
27. ಹೆಚ್.ಸಿ. ಬಾಲಕೃಷ್ಣ, ಮಾಗಡಿ
28. ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ
29. ಅಪ್ಪಾಜಿ ನಾಡಗೌಡ
30. ಶ್ರೀನಿವಾಸ್ ಮಾನೆ
31. ಯಾಸೀರ್ ಪಠಾಣ್
32. ಪ್ರಕಾಶ್ ಕೋಳಿವಾಡ
33. ರವಿ ಗಣಿಗ
34. ಪ್ರದೀಪ್ ಈಶ್ವರ್
35. ಹೆಚ್. ಮುನಿಯಪ್ಪ, ಸಚಿವ
36. ರಹೀಮ್ ಖಾನ್ , ಸಚಿವ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us