/newsfirstlive-kannada/media/media_files/2026/01/09/dks-assam-observer-2026-01-09-18-48-08.jpg)
ಸಂಕ್ರಮಣದ ಹಬ್ಬ ಹತ್ತಿರವಾಗ್ತಿದ್ದಂತೆ ರಾಜ್ಯ ಕಾಂಗ್ರೆಸ್​​​​ನಲ್ಲಿ ಬದಲಾವಣೆ ಗಾಳಿ ಏಳುವ ಸೂಚನೆ ಸಿಕ್ಕಿತ್ತು.. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ.. ಇನ್ನೇನೂ ಕೈಗೆ ಬಂದ ತುತ್ತನ್ನು ಬಾಯಿಗೆ ಇಟ್ಟುಕೊಳ್ಳುವಷ್ಟರಲ್ಲಿ ಹೈಕಮಾಂಡ್​ ಹೊಸ ದಾಳ ಉರುಳಿಸಿದೆ. ಇದು ಕಾಂಗ್ರೆಸ್​ನ ಟ್ರಬಲ್​ ಶೂಟರ್​​ ಮುಖದಲ್ಲಿ ಬೇಸರ ಮೂಡಿಸಿದೆ. ಮತ್ತೊಂದೆಡೆ ಡಿಕೆಶಿ ಹೆಗಲಿಗೆ ಅಸ್ಸಾಂ ಜವಾಬ್ದಾರಿ ಒಪ್ಪಿಸ್ತಿದ್ದಂತೆ ಸಿದ್ದು ಬಣ ಕೂಡ ಅಲರ್ಟ್​ ಆಗಿದೆ.
ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬ.. ಸಂಕ್ರಾಂತಿಯನ್ನು ಸಂಕ್ರಮಣ ಅಂತಾನೂ ಕರೆಯುತ್ತಾರೆ.. ಸಂಕ್ರಮಣ ಅಂದ್ರೆ.. ಚಲನೆ.. ವರ್ಗಾವಣೆ.. ಅಥವಾ ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ಹೋಗುವಿಕೆ ಎಂಬ ಅರ್ಥ ಇದೆ.. ಸದ್ಯ ರಾಜ್ಯ ಕಾಂಗ್ರೆಸ್​ನಲ್ಲಿ ಸಂಕ್ರಮಣದ ವಾತಾವರಣ ಗೋಚರಿಸಿತ್ತು. ರೆಕಾರ್ಡ್​​ರಾಮಯ್ಯರ ಕನಸು ನನಸಾಯ್ತು.. ಇನ್ನೇನಿದ್ದರೂ ನನ್ನ ಸರದಿ ಎಂದು ನಿರೀಕ್ಷೆಗಣ್ಣಿನಿಂದ ಕಾಯ್ತಿದ್ದ ಡಿಕೆಶಿಗೆ ಹೈಕಮಾಂಡ್​ನ ನಡೆ ಮೂಡ್​​ಔಟ್​​ ಮಾಡಿದೆ.
ರಾಜ್ಯದ ನಾಯಕತ್ವ ಬದಲಾವಣೆ ಚರ್ಚೆಗೆ ‘ಕೈ’ಕಮಾಂಡ್​​ ಟ್ವಿಸ್ಟ್​​
‘ಸಂಕ್ರಮಣ’ದ ನಿರೀಕ್ಷೆಯಲ್ಲಿದ್ದ ಡಿಸಿಎಂ ಡಿಕೆಶಿ ಫುಲ್​​ ಅಪ್​ಸೆಟ್​​​
ಗ್ಯಾರಂಟಿ ಸರ್ಕಾರಕ್ಕೆ ಎರಡೂವರೆ ವರ್ಷವೂ ಆಯ್ತು.. ಸಿಎಂ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ್ದು ಆಯ್ತು.. ಇನ್ನೇನ್ನು ತಮ್ಮ ಸಿಎಂ ಸ್ಥಾನದ ಹಾದಿ ಕ್ಲೀಯರ್​​ ಆಯ್ತು ಎಂದು ಡಿಕೆಶಿ ಅಂದು ಕೊಳ್ಳುವಷ್ಟರಲ್ಲಿ ಹೈಕಮಾಂಡ್​ ಹೊಸ ದಾಳ ಉರುಳಿಸಿದೆ. ಅಸ್ಸಾಂ ಚುನಾವಣಾ ವೀಕ್ಷಕರನ್ನಾಗಿ ಕಾಂಗ್ರೆಸ್​ ಹೈಕಮಾಂಡ್​​, ಡಿಸಿಎಂ ಡಿಕೆಶಿಯವರನ್ನ ನೇಮಕ ಮಾಡಿದೆ. ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ಅಸ್ಸಾಂ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ 3-4 ತಿಂಗಳು ಅಸ್ಸಾಂನತ್ತ ಡಿಕೆಶಿ ಚಿತ್ತ ಹರಿಸಬೇಕಿದೆ. ಇದರಿಂದಾಗಿ ಅಪ್​ಸೆಟ್​​ ಆಗಿರುವ ಡಿಕೆಶಿ ಬೇರೆ ದಾರಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬೇಸರ ಹೊರಹಾಕಿದ್ರಾ ಎಂಬ ಮಾತುಗಳು ಕೇಳಿ ಬರ್ತಿವೆ.
ಅಸ್ಸಾಂ ಸವಾಲು ಗೆದ್ರೆ.. ಡಿಸಿಎಂ ಡಿಕೆಶಿಗೆ ಒಲಿಯುತ್ತಾ ಪಟ್ಟ?
ಕರ್ನಾಟಕದ ನಾಯಕತ್ವ ಬದಲಾವಣೆ ವಿಷ್ಯ ಕಾಂಗ್ರೆಸ್​​ ಹೈಕಮಾಂಡ್​ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನುಂಗೋಕು ಆಗದೇ.. ಬೇಡ ಅನ್ನೋಕೇ ಆಗದೇ ಅಡಕತ್ತರಿಯಲ್ಲಿ ಸಿಲುಕಿದೆ.
ಹೈಕಮಾಂಡ್ ಲೆಕ್ಕಾಚಾರ ಏನು?
ಅಸ್ಸಾಂ ಉಸ್ತುವಾರಿ ಕೊಟ್ಟು ಸಿಎಂ ಸ್ಥಾನದ ಚರ್ಚೆಗೆ ಬ್ರೇಕ್
ಅಸ್ಸಾಂ ಅಭ್ಯರ್ಥಿಗಳ ಸ್ಕ್ರೀನಿಂಗ್ ಕಮಿಟಿಯಲ್ಲಿ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ ಜೊತೆ ಕೆಲಸ ಮಾಡಲಿರುವ ಡಿಸಿಎಂ ಡಿಕೆಶಿ
ಅಲ್ಲಿ ಚುನಾವಣೆ ಗೆದ್ದು ಸಾಮರ್ಥ್ಯ ಸಾಬೀತುಪಡಿಸುವ ಸವಾಲು
ಮಹಾರಾಷ್ಟ್ರ, ಗೋವಾ, ತೆಲಂಗಾಣದಲ್ಲಿ ಈ ಹಿಂದೆ ಮಿಶ್ರ ಫಲ
ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯದ ಚುನಾವಣೆ ಜವಾಬ್ದಾರಿ
ಸಿಎಂ ಬದಲಾವಣೆ ಬಗ್ಗೆ ಡಿಕೆಶಿ ಬೆಬಲಿಗರೂ ಚರ್ಚಿಸದಂತೆ ಪ್ಲಾನ್
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅಸ್ಸಾಂ ಚುನಾವಣೆ ನಡೀಬಹುದು
ಅಲ್ಲಿವರೆಗೂ ಸಿಎಂ ಸ್ಥಾನದ ಬಲದಾವಣೆ ಚರ್ಚೆ ಆಗದಂತೆ ಬ್ರೇಕ್
ಅಸ್ಸಾಂ ಉಸ್ತುವಾರಿ ಕೊಟ್ಟು ಸಿಎಂ ಸ್ಥಾನದ ಚರ್ಚೆಗೆ ಹೈಕಮಾಂಡ್​ ಬ್ರೇಕ್​​ ಹಾಕಿರುವ ಮಾತು ಕೇಳಿ ಬಂದಿದೆ. ಅಸ್ಸಾಂ ಅಭ್ಯರ್ಥಿಗಳ ಸ್ಕ್ರೀನಿಂಗ್ ಕಮಿಟಿಯಲ್ಲಿ ಪ್ರಿಯಾಂಕಾ ಗಾಂಧಿ ಇದ್ದಾರೆ. ಇವರ ಜೊತೆ ಡಿಕೆಶಿ ಕೂಡ ಕೆಲಸ ಮಾಡಲಿದ್ದಾರೆ. ಅಸ್ಸಾಂ ಚುನಾವಣೆ ಗೆದ್ದು ಸಾಮರ್ಥ್ಯ ಸಾಬೀತುಪಡಿಸುವ ಸವಾಲು ಡಿಕೆಶಿ ಎದುರಾಗಿದೆ. ಯಾಕಂದ್ರೆ ಮಹಾರಾಷ್ಟ್ರ, ಗೋವಾ, ತೆಲಂಗಾಣದಲ್ಲಿ ಈ ಹಿಂದೆ ಮಿಶ್ರ ಫಲ ಸಿಕ್ಕಿತ್ತು. ಇದೇ ಮೊದಲ ಬಾರಿಗೆ ಡಿಕೆಶಿಗೆ ಈಶಾನ್ಯ ರಾಜ್ಯದ ಚುನಾವಣೆ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಸಿಎಂ ಬದಲಾವಣೆ ಬಗ್ಗೆ ಡಿಕೆಶಿ ಬೆಬಲಿಗರೂ ಚರ್ಚಿಸದಂತೆ ತಂತ್ರ ಎಣೆದಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅಸ್ಸಾಂ ಚುನಾವಣೆ ನಡೀಬಹುದು. ಅಲ್ಲಿವರೆಗೂ ಸಿಎಂ ಸ್ಥಾನದ ಬಲದಾವಣೆ ಚರ್ಚೆ ಆಗದಂತೆ ಹೈಕಮಾಂಡ್​ ಈ ಮೂಲಕ ಬ್ರೇಕ್​ ಹಾಕಿದೆ.
ಡಿಕೆಶಿಗೆ ಅಸ್ಸಾಂ ಜವಾಬ್ದಾರಿ.. ಸಿದ್ದರಾಮಯ್ಯ ಟೀಂ ಅಲರ್ಟ್​!
ಪಕ್ಷ ಸಂಘಟನೆಯಲ್ಲಿ ಡಿಕೆಶಿ ಚುತುರ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಹೀಗಾಗಿ ಡಿಕೆಶಿಗೆ ಅಸ್ಸಾಂ ಚುನಾವಣೆ ಜವಾಬ್ದಾರಿ ಕೊಡ್ತಿದ್ದಂತೆ. ಇತ್ತ ಸಿದ್ದರಾಮಯ್ಯ ಟೀಂ ಕೂಡ ಅಲರ್ಟ್​ ಆಗಿದೆ. ಶೀಘ್ರದಲ್ಲೇ ಸಚಿವ ಸತೀಶ್​​ ಜಾರಕಿಹೊಳಿ ದೆಹಲಿ ಯಾತ್ರೆ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ನಡುವೆ ಮಾಜಿ ಸಚಿವ ಕೆ.ಎನ್​.ರಾಜಣ್ಣರನ್ನು ಭೇಟಿಯಾಗಿ ಸತೀಶ್​ ಜಾರಕಿಹೊಳಿ.. ಸುಮಾರು 40 ನಿಮಿಷಗಳ ಕಾಲ ಕ್ಲೋಸ್​ಡೋರ್​ ಮೀಟಿಂಗ್​ ಮಾಡಿರೋದು ಕೂತೂಹಲ ಹೆಚ್ಚಿಸಿದೆ.
ಅದೇನೆ ಇರಲಿ.. ಸಿದ್ದರಾಮಯ್ಯ ಸಿಎಂ ಆಗಿ ದಾಖಲೆ ಮಾಡ್ತಿದ್ದಂತೆ.. ರಾಜ್ಯ ಕಾಂಗ್ರೆಸ್​ ಮತ್ತು ನಾಯಕತ್ವ ಬದಲಾವಣೆ ಮುನ್ನೆಲೆಗೆ ಬರುವ ಲಕ್ಷಣ ಗೋಚರಿಸಿತ್ತು. ಆದ್ರೀಗ ಹೈಕಮಾಂಡ್​​​ ತನ್ನ ಜಾಣ, ಎಚ್ಚರಿಕೆ ನಡೆಯಿಂದ ತಾತ್ಕಾಲಿಕ ಬ್ರೇಕ್ ಹಾಕಿದೆ. ಹೀಗಾಗಿ ಡಿಕೆಶಿಯ ಕಾಯದೇ ಬೇರೇ ಮಾರ್ಗವಿಲ್ಲ..
ಹರೀಶ್​ ಕಾಕೋಳ್​​ ನ್ಯೂಸ್​ಫಸ್ಟ್​​ ಬೆಂಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us