/newsfirstlive-kannada/media/media_files/2025/10/14/siddaramaiah-dinner-meeting-1-2025-10-14-08-26-41.jpg)
ಸಿಎಂ ಸಿದ್ದರಾಮಯ್ಯರಿಂದ ಭೋಜನಕೂಟದ ಸಭೆ
ಭೋಜನಕೂಟ.. ರಾಜಕೀಯದಲ್ಲಿ ಇದು ಬರೀ ಊಟಕ್ಕೆ ಸೀಮಿತವಾಗಿಲ್ಲ. ಸಚಿವರು, ಶಾಸಕರು ಒಂದೆಡೆ ಸೇರಿದ್ರೆ ಡಿನ್ನರ್‌ನಲ್ಲಿ ಮೇಯ್ನ್ ಡಿಶ್ ಪಾಲಿಟಿಕ್ಸ್ ಆಗಿರುತ್ತೆ. ಇದು ನಿಜವೂ ಹೌದು. ನಿನ್ನೆ ಸಿಎಂ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಿದೆ. ಬದಲಾವಣೆ ಬಿರುಗಾಳಿ ಮಧ್ಯೆ ಸಚಿವ ಸಂಪುಟದ ಸರ್ಜರಿಯ ಸುಳಿವು ಸಿಕ್ಕಿದೆ. ಸಚಿವರ ಭೋಜನಕೂಟವನ್ನ ಕಮಲ ಪಡೆ ಟೀಕಿಸಿದೆ.
ಕ್ರಾಂತಿ.. ಕ್ರಾಂತಿ.. ಕ್ರಾಂತಿ.. ಕಾಂಗ್ರೆಸ್ ಪಾಳಯದ ಕೆಲವರಿಗೆ ಇಷ್ಟವಾದ ಪದ.. ಹಲವರಿಗೆ ಕಷ್ಟವಾಗಿರೋ ಬೆಳವಣಿಗೆ. ಇದ್ರ ಮಧ್ಯೆ ನಿನ್ನೆ ನಡೆದ ಡಿನ್ನರ್ ಮೀಟಿಂಗ್ ಸಚಿವರ ಸಾಧನೆಗಳನ್ನ ಅರಿಯುವ ವೇದಿಕೆಯೂ ಆಗಿದೆ. ಜೊತೆಗೆ ವರ್ಷಾಂತ್ಯದಲ್ಲಿ ಸಂಪುಟ ಕ್ರಾಂತಿಗೆ ಮುನ್ನುಡಿ ಬರೆಯುವ ಬಗ್ಗೆ ಸುಳಿವು ಸಿಕ್ಕಿದೆ.
ಡಿನ್ನರ್ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆ!
ಸಚಿವರ ಸಾಧನೆಗಳ ಮಾಹಿತಿ ಪಡೆದು ದೆಹಲಿಗೆ ರವಾನೆ!
ನಿನ್ನೆ ಸಚಿವರಿಗೆ ಸಿಎಂ ನೀಡಿದ್ದ ಡಿನ್ನರ್‌ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರವೇ ಮೇಯ್ನ್ ಡಿಶ್ ಆಗಿತ್ತು. ಹೈಕಮಾಂಡ್ ನಿರ್ದೇಶನದಂತೆ ನಡೆದ ಭೋಜನಕೂಟದಲ್ಲಿ ಸಚಿವರ ಕಾರ್ಯಸಾಧನೆಗಳ ಕಲೆಹಾಕಲು ಇದು ವೇದಿಕೆಯಾಗಿತ್ತು. ಹಲವು ಮಹತ್ವದ ಚರ್ಚೆಗಳಲ್ಲಿ ಸಂಪುಟ ಸರ್ಜರಿಯೇ ಪ್ರಮುಖ ಟಾಪಿಕ್ ಆಗಿತ್ತು. ಸಚಿವರ ಸಾಧನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಸಚಿವರ ಸಾಧನೆಯ ವರದಿಯನ್ನ ಹೈಕಮಾಂಡ್ ನಾಯಕರಿಗೆ ತಲುಪಿಸಿದ್ದಾರೆ. ಜೊತೆಗೆ ಸಂಪುಟ ಪುನಾರಚನೆ ಸಿದ್ಧವಾಗಿರಿ ಅಂತ ಮಿನಿಸ್ಟರ್ಸ್‌ನ ಮಾನಸಿಕವಾಗಿ ಸಜ್ಜುಗೊಳಿಸಿದ್ದಾರೆ.
ಸಭೆಯಲ್ಲಿ ಸಚಿವರು ಹೇಳಿದ್ದೇನು?
1. ಕಾಂಗ್ರೆಸ್​​ ಹೈಕಮಾಂಡ್ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ
2. ಸಚಿವರಾಗಿ ಎರಡುವರೆ ವರ್ಷ ಸರ್ಕಾರದ ಇಮೇಜ್ ಹೆಚ್ಚಳ
3. ಲೋಕಸಭೆ, ಬೈ ಎಲೆಕ್ಷನ್​ನಲ್ಲಿ ಉತ್ತಮ ಫಲಿತಾಂಶ ಬಂದಿದೆ
4. ಮತದಾರರಲ್ಲಿ ಸರ್ಕಾರದ ಪರ ಉತ್ತಮ ಅಭಿಪ್ರಾಯ ಇದೆ
5. ಸಚಿವರಾಗಿ ಶಾಸಕರು, ಕಾರ್ಯಕರ್ತರ ಮನವಿ ಆಲಿಸಿದ್ದೇವೆ
6. ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ
7. ಬಿಜೆಪಿಯವರ ಅಪಪ್ರಚಾರಕ್ಕೆ ತಕ್ಕ ತಿರುಗೇಟು ನೀಡಿದ್ದೇವೆ
ಸಂಪುಟ ಪುನಾರಚನೆಯೋ? ಸರ್ಜರಿಯೋ? ನಮ್ಮ ಕಾಂಗ್ರೆಸ್​​ ಹೈಕಮಾಂಡ್ ನೀಡುವ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ ಅಂತ ಸಚಿವರು ಸಿಎಂಗೆ ಮಾತು ನೀಡಿದ್ದಾರೆ. ಸಚಿವರಾಗಿ ಎರಡುವರೆ ವರ್ಷಗಳ ಕಾಲ ನಾವು ಸರ್ಕಾರದ ಇಮೇಜ್‌ನ ಹೆಚ್ಚಿಸಿದ್ದೇವೆ. ಇದರಿಂದಾಗಿ ಲೋಕಸಭೆ ಮತ್ತು ಬೈ ಎಲೆಕ್ಷನ್​ನಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಫಲಿತಾಂಶ ಬಂದಿದೆ. ಮತದಾರರಲ್ಲಿ ಸರ್ಕಾರದ ಪರ ಉತ್ತಮ ಅಭಿಪ್ರಾಯ ಇದೆ. ಅಲ್ಲದೇ ಸಚಿವರಾಗಿ ಶಾಸಕರು, ನಮ್ಮ ಪಕ್ಷದ ಕಾರ್ಯಕರ್ತರ ಮನವಿಗಳನ್ನ ಆಲಿಸಿದ್ದೇವೆ ಅಂತ ಸಚಿವರು ಸಿಎಂ ಮುಂದೆ ಹೇಳಿದ್ದಾರೆ. ಇನ್ನು, ನಮ್ಮ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಗ್ಯಾರಂಟಿಗಳು ಮತ್ತು ನಮ್ಮ ಸರ್ಕಾರದ ಬಗ್ಗೆ ಬಿಜೆಪಿಯವರ ಮಾಡಿರುವ ಅಪಪ್ರಚಾರಕ್ಕೆ ನಾವು ತಕ್ಕ ತಿರುಗೇಟು ನೀಡಿದ್ದೇವೆ ಅಂತ ಸಿಎಂ ಮುಂದೆ ಸಚಿವರೆಲ್ಲಾ ತಮ್ಮ ಕಾರ್ಯಸಾಧನೆಗಳನ್ನ ತೆರೆದಿಟ್ಟಿದ್ದಾರೆ.
ಡಿಸೆಂಬರ್‌ನಲ್ಲಿ ಸಂಪುಟ ಸರ್ಜರಿ.. ರಾಮಲಿಂಗಾರೆಡ್ಡಿ ಸುಳಿವು
ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ ಎಂದ ಎಂ.ಬಿ.ಪಾಟೀಲ್
ಡಿನ್ನರ್ ಮೀಟಿಂಗ್ ಬಳಿಕ ವಷ್ಯಾಂತ್ಯದ ಕ್ರಾಂತಿಯ ಬಗ್ಗೆ ಬಹುದೊಡ್ಡ ಅಪ್‌ಡೇಟ್ ಸಿಕ್ಕಿದೆ. ಡಿಸೆಂಬರ್ ತಿಂಗಳಿನಲ್ಲಿ ಸಂಪುಟ ಪುನಾರಚನೆ ಆಗಲಿದೆ ಅಂತ ಸಚಿವ ರಾಮಲಿಂಗಾರೆಡ್ಡಿ ಸುಳಿವು ನೀಡಿದ್ದಾರೆ. ಆದ್ರೆ, ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ ಅಂತ ಸಚಿವ ಎಂ.ಬಿ. ಪಾಟೀಲ್ ಅದೇ ಹಳೇ ವಾದವನ್ನ ಮಂಡಿಸಿದ್ದಾರೆ.
ಬಿಹಾರ ಎಲೆಕ್ಷನ್‌ಗೆ ಫಂಡಿಂಗ್ ಬಗ್ಗೆ ಚರ್ಚೆ.. ಸಿ.ಟಿ ರವಿ ಊಹೆ
ಕ್ರಾಂತಿ ಇಲ್ಲ ಅಂದ್ರೆ ವಾಂತಿಗೆ ಸಭೆ ಕರೆದಿದ್ರಾ?ಅಶೋಕ್ ಪ್ರಶ್ನೆ
ಕ್ರಾಂತಿ.. ಸರ್ಜರಿ ಚರ್ಚೆಯ ಮಧ್ಯೆ ಸಿಎಂ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್‌ನ ವಿರೋಧಪಕ್ಷ ಬಿಜೆಪಿ ಬೇರೆಯದ್ದೇ ಆ್ಯಂಗಲ್‌ನಲ್ಲಿ ನೋಡಿದೆ. ಬಿಹಾರ ಎಲೆಕ್ಷನ್‌ಗೆ ಫಂಡಿಂಗ್ ಮಾಡಲು ಡಿನ್ನರ್ ಸಭೆಯಲ್ಲಿ ಚರ್ಚೆ ನಡೆದಿದೆ ಅಂತ ಪರಿಷತ್ ಸದಸ್ಯ ಸಿ.ಟಿ.ರವಿ ಊಹಿಸಿದ್ದಾರೆ. ಕ್ರಾಂತಿ ಇಲ್ಲ ಅಂದ್ರೆ, ವಾಂತಿ ಮಾಡಲು ಡಿನ್ನರ್ ಸಭೆ ಕರೆದಿದ್ರಾ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಗೇಲಿ ಮಾಡಿದ್ದಾರೆ. ಬಿಹಾರದ ಅಸೆಂಬ್ಲಿ ಎಲೆಕ್ಷನ್ ಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು 300 ಕೋಟಿ ರೂಪಾಯಿ ಸಂಗ್ರಹಿಸಲು ನೀಡಲು ಈ ಭೋಜನಕೂಟದ ಸಭೆ ನಡೆಸಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.
ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ಡಿಕೆಶಿ ‘ಲಾಯಲ್ಟಿ’ ಟಕ್ಕರ್!
ಕುರ್ಚಿ ಕಿತ್ತಾಟ.. ಅಧಿಕಾರ ಹಂಚಿಕೆ ಫೈಟ್ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ಪುಸ್ತಕ ಪ್ರಹಾರ ಮಾಡಿದ್ದಾರೆ. ಡಿಕೆಶಿ ಆಪ್ತ ಡೈರೆಕ್ಟರ್ ರಘು ರಚಿಸಿರೋ A Symbol of Loyalty ಎಂಬ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ‘ವ್ಯಕ್ತಿ ಪೂಜೆ ಬಿಡೋಣ, ಪಕ್ಷ ಪೂಜೆ ಮಾಡೋಣ ಎಂಬ ಡಿಕೆ ಮಾತನ್ನೇ ಪುಸ್ತಕದ ಅಡಿಬರಹವಾಗಿ ಮುದ್ರಿಸಿರೋದು ಕಿಚ್ಚು ಹೊತ್ತಿಸಿದೆ. ಇದು ಸಿದ್ದು ಅಂಡ್ ಟೀಂಗೆೆ ಕನಕಪುರ ಕಲಿ ಕೊಟ್ಟಿರುವ ಟಕ್ಕರಾ ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಲಾಯಲ್ಟಿ ಪ್ರಶ್ನೆಯೋ? ಕ್ರಾಂತಿಯೋ? ಸರ್ಜರಿಯೋ? ಅಥವಾ ಇದೆಲ್ಲಾ ವದಂತಿಯೋ? ಇದಕ್ಕೆಲ್ಲಾ ವರ್ಷಾಂತ್ಯದಲ್ಲಿ ಉತ್ತರ ಸಿಗಬಹುದೇನೋ? Who Knows..
ಡಿನ್ನರ್ ಮೀಟಿಂಗ್‌ನಲ್ಲಿ ಯಾವೆಲ್ಲಾ ವಿಷಯಗಳ ಚರ್ಚೆ?
1. ಸಚಿವ ಸಂಪುಟ ಪುನಾರಚನೆ
2. ಪುನಾರಚನೆಗೆ ‘ಸಿದ್ಧ’ ಸಂದೇಶ
3. RSS ಚಟುವಟಿಕೆಗೆ ನಿರ್ಬಂಧ
4. ಸಚಿವರ ರಿಪೋರ್ಟ್ ಕಾರ್ಡ್
5. ಜಿಬಿಎಂ ಚುನಾವಣೆಗೆ ಸಿದ್ಧತೆ
6. ಸ್ಥಳೀಯ ಚುನಾವಣೆ ತಯಾರಿ
7. ಬಿಹಾರ ವಿಧಾನಸಭಾ ಚುನಾವಣೆ
8. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ
ಶಿವಪ್ರಸಾದ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ