ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ 2ನೇ ವಿಕೆಟ್ ಪತನವಾದಂತೆ ಆಗಿದೆ.
ರಾಜಣ್ಣ ರಾಜೀನಾಮೆಗೆ ಕಾರಣ ಏನು..?
ಆಗಸ್ಟ್ 7 ರಂದು ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಬಿಜೆಪಿ ವಿರುದ್ಧ ಕಳೆದ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಮತಗಳ್ಳತನ ಮಾಡಿದೆ ಎಂದು ಆರೋಪಿಸಿದ್ದರು. ಅದರಲ್ಲೂ ವಿಶೇಷವಾಗಿ ಕರ್ನಾಟಕ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಹೊರಾಟ ನಡೆಸುವ ಪ್ಲಾನ್ ಮಾಡಿತ್ತು. ಆದರೆ ರಾಹುಲ್ ಗಾಂಧಿ ಆರೋಪದ ವಿಚಾರವಾಗಿ ಮಾಧ್ಯಮಗಳು ತುಮಕೂರಲ್ಲಿ ಕೆಎನ್ ರಾಜಣ್ಣ ಅವರಿಗೆ ಪ್ರಶ್ನೆ ಮಾಡಿದ್ದವು. ಅದಕ್ಕೆ ರಾಜಣ್ಣ ಅವರ ಪ್ರತಿಕ್ರಿಯೆ ಹೀಗಿತ್ತು..
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ KN ರಾಜಣ್ಣ ರಾಜೀನಾಮೆ ಅಂಗೀಕಾರ
ರಾಜಣ್ಣರ ರಾಜೀನಾಮೆಗೆ ಕಾರಣವಾದ ಹೇಳಿಕೆ..
‘ನೋಡ್ರಿ.. ಸುಮ್ನೆ ಇದೆಲ್ಲ ಮಾತನ್ನಾಡೋಕೆ ಹೋಗಬಾರದು. ಈ ವೋಟರ್ ಲಿಸ್ಟ್ಗಳನ್ನು ಯಾವ ಕಾಲದಲ್ಲಿ ಮಾಡಿರೋದು. ನಮ್ಮದೇ ಸರ್ಕಾರ ಇರುವಾಗ ಮಾಡಿರೋದು. ಆವಾಗ ಎಲ್ಲರೂ ಕಣ್ಮುಚ್ಚಿಕೊಂಡು ಕೂತಿರುತ್ತಾರಾ? ಮಾತಾಡಿದ್ರೆ ಮಾತನಾಡಬೇಕಾಗುತ್ತದೆ. ಏನು ಬೇಡ..’
‘ಆಯ್ತಲ್ವಾ ಈಗ.. ಅಕ್ರಮಗಳು ನಡೆದಿರೋದು ಸತ್ಯ. ಅದರಲ್ಲಿ ಯಾವುದೇ ಸುಳ್ಳುಗಳು ಇಲ್ಲ. ಆದರೆ ಅಕ್ರಮಗಳು ನಮ್ಮ ಕಣ್ಮುಂದೆಯೇ ನಡೆದಿಲ್ವಾ.. ನಮಗೇ ಅವಮಾನ ಆಗಬೇಕು. ಯಾಕೆಂದರೆ ನಾವು ಅದನ್ನು ನೋಡಿಕೊಳ್ಳಲಿಲ್ಲ. ಆದ್ದರಿಂದ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು..’
‘ಮೊದಲು ಚುನಾವಣಾ ಆಯೋಗ ಡ್ರಾಪ್ಟ್ ಮಾಡಿ ವೋಟರ್ ಲಿಸ್ಟ್ಗಳನ್ನು ಪಬ್ಲಿಷ್ ಮಾಡುತ್ತೆ. ಅವರು ಪಬ್ಲಿಷ್ ಮಾಡಿದಾಗ ನಾವೆಲ್ಲ ಏನು ಮಾಡ್ತಿದ್ವಿ. ಅವರು ವೋಟ್ಗಳನ್ನು ಬದಲಾವಣೆ ಮಾಡಿಕೊಂಡು ಪ್ರಧಾನಮಂತ್ರಿ ಆಗಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಮೊದಲು ನಾವು ನೋಡಿಕೊಳ್ಳಬೇಕಾಗಿತ್ತು. ಈ ವಿಚಾರದಲ್ಲಿ ತಪ್ಪು ಆಗಿದೆ..’
‘ಮಹದೇವಪುರದಲ್ಲಿ ಒಬ್ಬಳೇ ಮೂರು ಕಡೆಗಳಲ್ಲಿ ವೋಟ್ ಮಾಡಿದ್ದಾಳೆ. 20, 15 ಜನ ಇರುವ ರೂಮ್ಗಳಲ್ಲಿ 60 ಜನರನ್ನ ಸೇರಿಸಿದ್ದಾರೆ. ಅವರಿಗೆ ಅಡ್ರೆಸ್ ಕೂಡ ಇಲ್ಲ. ಅವರ ತಂದೆಯ ಹೆಸರು ಕೂಡ ಇಲ್ಲ. ಈ ರೀತಿಯ ಅಕ್ರಮಗಳು ನಡೆದಿವೆ. ಆದರೆ ಚುನಾವಣಾ ಆಯೋಗ ಡ್ರಾಪ್ಟ್ ಪಬ್ಲಿಷ್ ಮಾಡಿದಾಗ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಈಗ ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವು ಹೊರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು
ಕೆಎನ್ ರಾಜಣ್ಣ, ಕಾಂಗ್ರೆಸ್ ಹಿರಿಯ ನಾಯಕ
ಇದನ್ನೂ ಓದಿ:BREAKING ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ