/newsfirstlive-kannada/media/media_files/2025/11/22/cm-siddaramaiah-and-rahul-gandhi02-2025-11-22-18-23-26.jpg)
ಕಾಂಗ್ರೆಸ್ ಹೈಕಮ್ಯಾಂಡ್ ಮುಂದೆ ಡಿಕೆಶಿ ಪ್ರಶ್ನೆ!
ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ತಮ್ಮ ಸ್ವಕ್ಷೇತ್ರ ಕನಕಪುರದ ಪ್ರವಾಸ ಕೈಗೊಂಡಿದ್ದರು. ಕನಕಪುರದ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಜೊತೆ ಕುಳಿತು ಪೋಟೋಗೆ ಪೋಸ್ ನೀಡಿದ್ದರು. ಬಳಿಕ ಕನಕಪುರದಲ್ಲೇ ಇರುವ ತಮ್ಮ ಮನೆ ದೇವರು ಕೆಂಕೇರಮ್ಮ ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದರು. ನಿನ್ನ ಮನೆ ಮಗನ ಮೇಲೆ ಕೃಪೆ ತೋರು ಕೆಂಕೆರಮ್ಮ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿ ದೇವರಿಗೆ ಪ್ರಾರ್ಥನೆ ಮಾಡಿದ್ದರು. ಡಿ.ಕೆ.ಶಿವಕುಮಾರ್ ಈಗ ತಮ್ಮ ರಾಜಕೀಯ ಜೀವನದ ಬಹುದೊಡ್ಡ ನಿರ್ಣಾಯಕ ಘಟ್ಟದಲ್ಲಿದ್ದಾರೆ. ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮನೆ ದೇವರ ಆಶೀರ್ವಾದ ಮುಖ್ಯ ಎಂದು ಮನೆ ದೇವರಿಗೆ ಭಕ್ತಿಯಿಂದ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/25/dcm-dks-prayer-at-kenkeramma-2025-11-25-17-59-52.jpg)
40 ವರ್ಷದ ಕನಸು ನನಸು ಮಾಡಿಕೊಳ್ಳಬೇಕೆಂದು ಪಣತೊಟ್ಟು ಡಿಕೆಶಿ ಹೋರಾಡುತ್ತಿದ್ದಾರೆ. ಸಿಎಂ ಗಾದಿ ಡಿಕೆಶಿಗೆ ಒಲಿಯುತ್ತೋ ಇಲ್ಲವೋ ಎಂದು ಇಡೀ ರಾಜ್ಯದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುವವರೆಗೂ ಯಾವುದೇ ಶಾಸಕರು ಡಿಕೆಶಿ ಪರ ಬಹಿರಂಗ ಲಾಬಿ ಮಾಡಲು ಮುಂದೆ ಬಂದಿರಲಿಲ್ಲ. ಆದರೇ, ಈಗ ತಂಡ ತಂಡವಾಗಿ ಕಾಂಗ್ರೆಸ್ ಶಾಸಕರು ಡಿಕೆಶಿ ಪರ ಅಖಾಡಕ್ಕಿಳಿಯುತ್ತಿದ್ದಾರೆ. ಇದು ಕಾಂಗ್ರೆಸ್ ನೊಳಗಿನ ಕುರ್ಚಿ ಕದನವನ್ನು ಇಂಟರೆಸ್ಟಿಂಗ್ ಆಗುವಂತೆ ಮಾಡಿದೆ.
ಡಿಸಿಎಂ ಡಿಕೆಶಿ ಕಾಂಗ್ರೆಸ್ ಹೈಕಮ್ಯಾಂಡ್ ಮುಂದೆ ಸ್ಪಷ್ಟವಾಗಿ ಸಿಎಂ ಸ್ಥಾನವನ್ನು ತಮಗೆ ಈಗ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ 2013 ರಿಂದ 2018ರವರೆಗೆ ಸಿಎಂ ಆಗಿ ಪೂರ್ತಿ ಐದು ವರ್ಷ ಆಳ್ವಿಕೆ ನಡೆಸಿದ್ದರು. 2023 ರಿಂದ ಇಲ್ಲಿಯವರೆಗೂ ಎರಡೂವರೆ ವರ್ಷ ಸಿಎಂ ಆಗಿ ಆಳ್ವಿಕೆ ನಡೆಸಿದ್ದಾರೆ. ಒಟ್ಟಾರೆ ಏಳೂವರೆ ವರ್ಷ ಸಿಎಂ ಆಗಿ ಆಳ್ವಿಕೆ ನಡೆಸಿದ್ದಾರೆ. 2023ರ ವಿಧಾನಸಭಾ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದೇನೆ. ಒಕ್ಕಲಿಗ ಸಮುದಾಯವು ನಾನು ಸಿಎಂ ಆಗುತ್ತೇನೆ ಎಂದು ನನ್ನ ಮಾತುಗಳನ್ನು ನಂಬಿ ಕಾಂಗ್ರೆಸ್ ಗೆ ಮತ ನೀಡಿದೆ . ಹೀಗಾಗಿ ನಾನು ಸಿಎಂ ಆಗುವ ಸರದಿ ಯಾವಾಗ ಬರುತ್ತೆ ಎಂದು ತಿಳಿಸಿ ಎಂದು ಕಾಂಗ್ರೆಸ್ ಹೈಕಮ್ಯಾಂಡ್ ಗೆ ಡಿಕೆಶಿ ಸ್ಪಷ್ಟವಾಗಿ ಹೇಳಿದ್ದಾರಂತೆ. ಜೊತೆಗೆ ನಾನು ಸಿಎಂ ಆಗುವ ಟೈಮ್ ಯಾವಾಗ ಬರುತ್ತೆ ಎಂದು ತಿಳಿಸಿ ಎಂದು ಕೇಳಿದ್ದಾರೆ.
ಈ ಪ್ರಶ್ನೆಗಳಿಗೆ ಈಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರ ನೀಡಬೇಕಾಗಿದೆ. ಈ ಉತ್ತರವೇ ಕಾಂಗ್ರೆಸ್ ಒಳಗಿನ ಕಿತ್ತಾಟಕ್ಕೂ ಬ್ರೇಕ್ ಹಾಕಲಿದೆ. ಡಿಕೆಶಿಗೂ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲು ಸಹಾಯ ಮಾಡುತ್ತೆ.
/filters:format(webp)/newsfirstlive-kannada/media/media_files/2025/11/07/sugar-cane-farmers-cm-meeting-successful02-2025-11-07-18-17-01.jpg)
ಸಿದ್ದರಾಮಯ್ಯ ಅಹಿಂದ ವರ್ಗಗಳ ನಾಯಕ. ಅಹಿಂದ ವೋಟ್ ಬ್ಯಾಂಕ್ ಸಿದ್ದರಾಮಯ್ಯ ಬೆನ್ನ ಹಿಂದೆ ಇದೆ . ಆದರೇ, ಡಿಕೆಶಿ ಒಕ್ಕಲಿಗ ಶಾಸಕರ ಜೊತೆಗೆ ಬೇರೆ ಸಮುದಾಯಗಳ ಶಾಸಕರು ತಮ್ಮ ಬೆನ್ನ ಹಿಂದೆ ಇದ್ದಾರೆ. ಮೊದಲ ಭಾರಿಗೆ ಶಾಸಕರಾದವರ ಬೆಂಬಲವೂ ತಮಗಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೇ, ಡಿಕೆಶಿ ಬೆನ್ನ ಹಿಂದೆ ಎಷ್ಟು ಮಂದಿ ಶಾಸಕರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ . ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮಗೆ ಈ ಭಾರಿ ಬಹುಮತ ಸಿಗಬಹುದೆಂಬ ನಿರೀಕ್ಷೆಯಲ್ಲಿ ಡಿಕೆಶಿ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಈ ಭಾರಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯಾರು ಸಿಎಂ ಆಗಬೇಕು ಎಂಬ ಬಗ್ಗೆ ಸೀಕ್ರೆಟ್ ವೋಟಿಂಗ್ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಡಿಕೆಶಿ ಮನವಿ ಕೂಡ ಮಾಡಿದ್ದಾರಂತೆ. ಸೀಕ್ರೆಟ್ ವೋಟಿಂಗ್ ನಡೆದರೇ, ಬಹುಸಂಖ್ಯಾತ ಕಾಂಗ್ರೆಸ್ ಶಾಸಕರು ತಮ್ಮ ಪರ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ಡಿಕೆಶಿಯಲ್ಲಿದೆ.
ಆದರೇ, ಕಾಂಗ್ರೆಸ್ ಹೈಕಮ್ಯಾಂಡ್ ಈಗಿನ ಸ್ಥಿತಿಯಲ್ಲಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಇಳಿಸುವ ತೀರ್ಮಾನ ಕೈಗೊಳ್ಳುತ್ತಾ ಎಂಬುದೇ ಈಗಿರುವ ಪ್ರಶ್ನೆ.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಕಿತ್ತಾಟ, 1989 ರಿಂದ 1994ರ ಅವಧಿಯಲ್ಲಿ ಎಸ್.ಎಂ.ಕೃಷ್ಣಗೆ ಸಿಎಂ ಹುದ್ದೆ ನೀಡದ ಕಾರಣಕ್ಕಾಗಿ 1994 ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಧೂಳೀಪಟವಾಗಿ ಜನತಾದಳ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಕಾರಣವಾಯಿತು . ಈಗ ಕಾಂಗ್ರೆಸ್ ನೊಳಗೆ ನಡೆಯುತ್ತಿರುವ ಈ ಸಿಎಂ ಸ್ಥಾನದ ಕಿತ್ತಾಟವೂ ವಿಪಕ್ಷ ಎನ್‌ಡಿಎ ಗೆ ವರವಾಗಬಹುದು ಎಂಬ ಚರ್ಚೆಯೂ ಕೂಡ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us