/newsfirstlive-kannada/media/media_files/2025/12/06/putin-meets-modi-2025-12-06-18-47-44.jpg)
ವಾಡ್ಲಿಮಿರ್ ಪುಟಿನ್ ದೆಹಲಿಯಲ್ಲಿ ರಾಹುಲ್ ರನ್ನು ಭೇಟಿಯಾಗಲಿಲ್ಲವೇಕೆ?
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪುಟಿನ್ ಭೇಟಿಗೆ ಅವಕಾಶ ಸಿಕ್ಕಿಲ್ಲ. ಇದಕ್ಕೆ ರಾಹುಲ್ ಗಾಂಧಿ ನೇರವಾಗಿ ಪ್ರಧಾನಿ ಮೋದಿ ಕಾರಣ ಎಂದು ಆರೋಪಿಸಿದ್ದಾರೆ. ವಿದೇಶೀ ಗಣ್ಯರು ನಮ್ಮ ದೇಶಕ್ಕೆ ಅತಿಥಿಗಳಾಗಿ ಬಂದಾಗ, ವಿರೋಧ ಪಕ್ಷದ ನಾಯಕರಿಗೂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಈ ಹಿಂದೆ ಅವಕಾಶ ನೀಡಲಾಗುತ್ತಿತ್ತು. ಆದರೇ ಮೋದಿ ಸರ್ಕಾರ ಈಗ ಆ ಸಂಪ್ರದಾಯಕ್ಕೂ ಬ್ರೇಕ್ ಹಾಕಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಆದರೇ, ಇದಕ್ಕೆ ಕೇಂದ್ರ ಸರ್ಕಾರವು ತಕ್ಕ ಪ್ರತ್ಯುತ್ತರ ನೀಡಿದೆ. ವಿದೇಶಿ ಗಣ್ಯರು, ರಾಷ್ಟ್ರಾಧ್ಯಕ್ಷರು ಭಾರತಕ್ಕೆ ಬಂದಾಗ, ಅವರು ಯಾರು ಅನ್ನು ಭೇಟಿ ಆಗಬೇಕೆಂದು ನಿರ್ಧರಿಸುವುದು ಕೇಂದ್ರ ಸರ್ಕಾರ ಅಲ್ಲ. ಆಯಾ ವಿದೇಶಿ ಅತಿಥಿಗಳೇ ತಾವು ಯಾರು ಅನ್ನು ಭೇಟಿಯಾಗಲು ಬಯಸುತ್ತೇವೆ ಎಂದು ನಿರ್ಧರಿಸುತ್ತಾರೆ. ಅವರು ಬಯಸಿದರೇ, ವಿರೋಧ ಪಕ್ಷದ ನಾಯಕರನ್ನು, ಬೇರೆ ಗಣ್ಯರನ್ನು ಭೇಟಿಯಾಗಬಹುದು. ಕೇಂದ್ರ ಸರ್ಕಾರವು ನಮ್ಮ ದೇಶದ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಎಂದು ವಿದೇಶಿ ಗಣ್ಯರಿಗೆ, ಅತಿಥಿಗಳಿಗೆ ಹೇಳಲು ಆಗಲ್ಲ.
ಈ ಹಿಂದೆ ಬೇರೆ ಬೇರೆ ಗಣ್ಯರು ಭಾರತಕ್ಕೆ ಬಂದಾಗ, ತಾವಾಗಿಯೇ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುವ ಬಯಕೆ ವ್ಯಕ್ತಪಡಿಸಿ ಭೇಟಿಯಾಗಿದ್ದಾರೆ. 2014ರ ನಂತರವೂ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಭಾರತಕ್ಕೆ ಬಂದಿದ್ದರು. ಆ ವೇಳೆ ಶೇಖ್ ಹಸೀನಾ ಅವರು ದೆಹಲಿಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಇದೇ ರೀತಿ ಇನ್ನೂ ಮೂರು ದೇಶಗಳ ಗಣ್ಯರು ಕೂಡ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ.
ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾದಾಗಿನಿಂದ ಹಲವಾರು ವಿದೇಶಿ ನಾಯಕರು ಅವರನ್ನು ಭೇಟಿ ಮಾಡಿದ್ದಾರೆ. ಶೇಖ ಹಸೀನಾ (2024), ಮಲೇಷಿಯಾದ ಅನ್ವರ್ ಇಬ್ರಾಹಿಂ (2024), ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್(2025) ಹಾಗೂ ಮಾರಿಷಸ್‌ನ ಪ್ರಧಾನಿ ನವೀನ್ ಚಂದ್ರ ರಾಮಗೂಲಮ್ ಅವರು, ರಾಹುಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ವಿದೇಶಿ ಗಣ್ಯರ ಭೇಟಿಯ ಸಮಯದಲ್ಲಿ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಬೇಕು ಎಂದು ಹೇಳುವ ಯಾವುದೇ ನಿಯಮವಿಲ್ಲ. ಇದು ಸಂಪ್ರದಾಯ ಆಗಿರಬಹುದು. ಆದರೆ, ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂದು ಎಲ್ಲಿಯೂ ಹೇಳಿಲ್ಲ ಎಂದು ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಗೆ ತಿರುಗೇಟು ನೀಡಿದೆ.
/filters:format(webp)/newsfirstlive-kannada/media/media_files/2025/12/06/putin-meets-sonia-gandhi-2025-12-06-18-48-11.jpg)
ಈ ಹಿಂದೆ ಯುಪಿಎ ಸರ್ಕಾರದ ವೇಳೆ ಸೋನಿಯಾ, ರಾಹುಲ್ ರಿಂದ ಪುಟಿನ್ ಭೇಟಿ
ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾದರು. ಇದು ಒಂದು ಪ್ರಮುಖ ಸಾಂವಿಧಾನಿಕ ಸಂದರ್ಭವಾಗಿತ್ತು. ರಾಷ್ಟ್ರಪತಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಉಪಾಧ್ಯಕ್ಷ ಜಗದೀಪ್ ಧನಖರ್, ಮಾಜಿ ಸಿಜೆಐ ಬಿ.ಆರ್. ಗವಾಯಿ ಮತ್ತು ಅನೇಕ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಆದರೆ, ಅಲ್ಲಿ ಎದ್ದು ಕಂಡಿದ್ದು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅನುಪಸ್ಥಿತಿ.
ಇದಕ್ಕೂ ಮೊದಲು, ಪ್ರಜಾಪ್ರಭುತ್ವದ ಅತಿದೊಡ್ಡ ಆಚರಣೆಯಾದ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಗೈರುಹಾಜರಾಗಿದ್ದರು. ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಪ್ರಮಾಣವಚನ ಸಮಾರಂಭದಲ್ಲೂ ಅವರು ಗೈರುಹಾಜರಾಗಿದ್ದರು, ಇದು ಸಾಂವಿಧಾನಿಕ ಕಾರ್ಯಕ್ರಮವೂ ಆಗಿದೆ.
ಅವರ ಪದೇ ಪದೆ ಗೈರುಹಾಜರಿಯು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಉದ್ದೇಶಪೂರ್ವಕ ಅಗೌರವ ಮತ್ತು ನಿರ್ಲಕ್ಷ್ಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಯಾವಾಗಲೂ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಭಾಷಣ ಮಾಡುತ್ತಾರೆ. ಆದರೇ, ಸಂವಿಧಾನವನ್ನು ಗೌರವಿಸಲ್ಲ ಎಂದು ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us