/newsfirstlive-kannada/media/media_files/2025/10/22/yathindra-siddaramaiah-1-2025-10-22-16-48-49.jpg)
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದ ಪುತ್ರ ಯತೀಂದ್ರ
ಸಿದ್ದರಾಮಯ್ಯನವರೇ ಪೂರ್ತಿ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ನಾನು ಪದೇಪದೇ ಹೇಳ್ತಾ ಇದ್ದೇನೆ . ಅವರೇ ಪೂರ್ಣ ಅವಧಿಯಲ್ಲಿ ಸಿಎಂ ಆಗಿ ಮುಂದುವರಿಯುತ್ತಾರೆ . ಇದರಲ್ಲಿ ಬದಲಾವಣೆ ಮಾತಿಲ್ಲ . ಹೈಕಮಾಂಡ್ ಹಲವಾರು ವಿಚಾರಗಳಿಗೆ ಕರೆಯುತ್ತಾರೆ. ಹೋಗಿ ಮಾತಾಡಿಕೊಂಡು ಬರುತ್ತಾರೆ. ನನ್ನ ಪ್ರಕಾರ ಯಾವುದೇ ಬದಲಾವಣೆ ಆಗಲ್ಲ .
ಆ ರೀತಿ ಆಗಬಹುದು, ಈ ರೀತಿ ಆಗಬಹುದು ಅನ್ನೋದು ಈಗಲೇ ಏಕೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಬೆಳಗಾವಿಯಲ್ಲಿ ಹೇಳಿದ್ದಾರೆ.
ಡಿಸಿಎಂ ನಾನು ಮುಖ್ಯಮಂತ್ರಿ ಆಗಬೇಕು ಅಂತ ಕೇಳಿದರು. ಹಾಗಾಗಿ ಗೊಂದಲ ಇತ್ತು . ಹೈಕಮಾಂಡ್ ಸ್ಪಷ್ಟನೆ ಕೊಟ್ಟಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಇಷ್ಟು ವರ್ಷಗಳಿಗೆ ಅಂತ ತೀರ್ಮಾನ ಮಾಡುತ್ತಾರಾ.? ಎಂದು ಯತೀಂದ್ರ ಪ್ರಶ್ನಿಸಿದ್ದಾರೆ.
ಇನ್ನೂ ಪುತ್ರ ಯತೀಂದ್ರ ಮಾತಿಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದು, ನೋಡಪ್ಪಾ , ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಅದೇ ನನ್ನ ತೀರ್ಮಾನ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/03/Yathindra-Siddaramiah.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us