/newsfirstlive-kannada/media/post_attachments/wp-content/uploads/2023/08/BSY.jpg)
ರಾಜಕೀಯದಲ್ಲಿ 50 ವರ್ಷ ಪೂರ್ಣಗೊಳಿಸಿದ ಬಿಎಸ್‌ವೈ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜಕಾರಣದಲ್ಲಿ ಹೊಸ ಮೈಲಿಗಲ್ಲಿಗೆ ಕಾಲಿಟ್ಟಿದ್ದಾರೆ.. ರಾಜಕೀಯದಲ್ಲಿ 50 ವರ್ಷಗಳನ್ನು ಪೂರೈಸಿರುವ ಬಿಎಸ್​ವೈ ಸನ್ಮಾನಿಸಲು ರಾಜ್ಯ ಬಿಜೆಪಿ ಸಜ್ಜಾಗ್ತಿದೆ.. ಬೃಹತ್ ಸಮಾವೇಶದ ಮೂಲಕ ಯಡಿಯೂರಪ್ಪ ಸಾಧನೆಗಳನ್ನು ಅನಾವರಣಗೊಳಿಸಲು ಪ್ಲಾನ್ ಮಾಡಿದೆ..
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಥವಾ ಬಿ.ಎಸ್.ಯಡಿಯೂರಪ್ಪ.. ರಾಜ್ಯ ಬಿಜೆಪಿಯ ಭೀಷ್ಮ.. ಕೆಂಡದಂತಹ ಕೋಪ.. ಹೃದಯವಂತ ಕೆಲಸಗಾರ.. ಮಾಸ್ ಲೀಡರ್.. ಶೂನ್ಯದಿಂದ, ಸಿಂಹಾಸನದವರೆಗೂ ಕಲ್ಲು ಮುಳ್ಳಿನ ಹಾದಿಯಲ್ಲಿ ಪಯಣಿಸಿದ ಹೋರಾಟಗಾರ.. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ 4 ಬಾರಿ ಆಗಿ ಸಿಎಂ ಆಗಿರೋ ಯಡಿಯೂರಪ್ಪ ರಾಜಕೀಯದಲ್ಲಿ ಅರ್ಧ ಶತಮಾನಗಳ ಮೈಲಿಗಲ್ಲು ದಾಟಿದ್ದಾರೆ..
ರಾಜಕೀಯದಲ್ಲಿ ಬಿ.ಎಸ್.ಯಡಿಯೂರಪ್ಪ ಅರ್ಧ ಶತಕ!
ಬಿಎಸ್​ವೈಗೆ ಸನ್ಮಾನ.. ಬೃಹತ್ ಸಮಾವೇಶಕ್ಕೂ ಪ್ಲಾನ್!
ರಾಜಕಾರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭರ್ತಿ 50 ವರ್ಷಗಳನ್ನು ಪೂರೈಸಿದ್ದಾರೆ.. ಕರ್ನಾಟಕ ಕಂಡ ಜನಪ್ರಿಯ..ಕರ್ತವ್ಯಶೀಲ ಮುಖ್ಯಮಂತ್ರಿಗಳ ಸಾಲಿಗೆ ಸೇರುವ ಯಡಿಯೂರಪ್ಪ ಅರ್ಧ ಶತಮಾನಗಳ ರಾಜಕೀಯ ಹಾದಿ ಸವೆಸಿದ್ದು ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪಗೆ ಬೃಹತ್ ಸಮಾವೇಶದ ಮೂಲಕ ಗೌರವಿಸಲು ಪ್ಲಾನ್ ಮಾಡಿದೆ.. ಮೇ ಮೊದಲ ವಾರದಲ್ಲಿ ಚಿತ್ರದಲ್ಲಿ ಸಮಾವೇಶ ನಡೆಸಿ ಅಲ್ಲಿಂದಲೇ ಮುಂಬರುವ ಚುನಾವಣೆಗಳಿಗೆ ರಣಕಹಳೆ ಮೊಳಗಿಸಲು ಪ್ಲಾನ್ ಮಾಡಿದ್ದಾರೆ.. ಈ ಬಗ್ಗೆ ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ..
ಸಾರ್ಥಕ 50 ಸಂವತ್ಸರಗಳನ್ನ ಪೂರೈಸಿದ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೂ ಅಣಿಯಾಗಿದ್ದಾರೆ.. ನೀವು ಕರೆದ ಕಡೆ ನಾನು ಬರಲು ರೆಡಿ ಎಂಬ ಸಂದೇಶ ಕೊಟ್ಟಿದ್ದಾರೆ.. ಈ ಮೂಲಕ 85ರ ಇಳಿ ವಯಸ್ಸಿನಲ್ಲೂ ಪಕ್ಷ ಸಂಘಟನೆಗೆ ಉತ್ಸಾಹಿಯಾಗಿದ್ದಾರೆ.. ಕಳೆದ 50 ವರ್ಷಗಳಲ್ಲಿ ಮಂಡ್ಯದಿಂದ ಶಿಕಾರಿಪುರ ಹಾಗೂ ಶಿಕಾರಿಪುರದಿಂದ ಸಿಎಂ ಕುರ್ಚಿವರೆಗೆ ಶಿಕಾರಿವೀರ ನಡೆದು ಬಂದ ಹಾದಿಯಂತೂ ರಣರೋಚಕವಾಗಿದೆ..
ಬಿಎಸ್‌ವೈ ‘ರಾಜ’ ನಡಿಗೆ!
1972ರಲ್ಲಿ ಜನಸಂಘದ ಅಧ್ಯಕ್ಷರಾಗಿ ಯಡಿಯೂರಪ್ಪ ನೇಮಕ
1975ರಲ್ಲಿ ತುರ್ತು ಪರಿಸ್ಥಿತಿ ವೇಳೆ 45 ದಿನಗಳ ಕಾಲ ಜೈಲುವಾಸ
1975ರಲ್ಲಿ ಶಿಕಾರಿಪುರ ಪುರಸಭೆಗೆ ಆಯ್ಕೆ ಮೂಲಕ ರಾಜಕೀಯ
1983ರಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶ
1994ರಲ್ಲಿ ವಿಧಾನಸಭೆ ಪ್ರತಿ ಪಕ್ಷದ ನಾಯಕನಾಗಿಯೂ ಕೆಲಸ
2004ರಲ್ಲಿ ಶಿಕಾರಿಪುರದಲ್ಲಿ 5ನೇ ಬಾರಿಗೆ ಆಯ್ಕೆಯಾದ BSY
2006ರಲ್ಲಿ ಜೆಡಿಎಸ್​ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ
2008ರಲ್ಲಿ ವಿಧಾನಸಭೆಗೆ ಮತ್ತೆ ಆಯ್ಕೆ.. ಮೊದಲ ಬಾರಿಗೆ ಸಿಎಂ
2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಂಸದ
2018ರಲ್ಲಿ ಮತ್ತೆ ವಿಧಾನಸಭೆ ಚುನಾವಣೆಗೆ ಗೆದ್ದು ಸಿಎಂ ಪಟ್ಟ
( 1972ರಲ್ಲಿ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ಎಂಟ್ರಿ ಕೊಟ್ಟಿದ್ದ ಯಡಿಯೂರಪ್ಪ 1975ರಲ್ಲಿ ತುರ್ತು ಪರಿಸ್ಥಿತಿ ವೇಳೆ 45 ದಿನಗಳ ಕಾಲ ಜೈಲುವಾಸ ಕೂಡ ಅನುಭವಿಸಿದ್ದರು.. ನಂತರ 1975ರಲ್ಲಿ ಶಿಕಾರಿಪುರ ಪುರಸಭೆಗೆ ಆಯ್ಕೆ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದ್ದರು.. ಬಳಿಕ 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶ ಮಾಡಿದ್ದರು.. ಇನ್ನು 1994ರಲ್ಲಿ ವಿಧಾನಸಭೆ ಪ್ರತಿ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದರು.. 2004ರಲ್ಲಿ ಶಿಕಾರಿಪುರ ಕ್ಷೇತ್ರದಿಂದ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ ಯಡಿಯೂರಪ್ಪ, 2006ರಲ್ಲಿ ಜೆಡಿಎಸ್​ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.. ಬಳಿಕ 2008ರಲ್ಲಿ ಶಿಕಾರಿಪುರದಿಂದ ಗೆದ್ದು ರಾಜ್ಯದಲ್ಲಿ ಮೊದಲ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದರು. ಬಳಿಕ 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದ ಯಡಿಯೂರಪ್ಪ ಮತ್ತೆ 2018ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಗೆದ್ದು ಸಿಎಂ ಪಟ್ಟ ಅಲಂಕರಿಸಿದ್ದರು.. )
ಮಂಡ್ಯದ ಒಂದು ಪುಟ್ಟ ಗ್ರಾಮದಿಂದ ಬಂದು ಸಿಎಂಗಾದಿವರೆಗೆ ಯಡಿಯೂರಪ್ಪ ಸಾಧನೆ ಎಲ್ಲರಿಗೂ ಪ್ರೇರಣದಾಯಕವಾಗಿದೆ.. ತಳಮಟ್ಟದಿಂದ ಬಿಜೆಪಿ ಪಕ್ಷ ಸಂಘಟಿಸುವ ಮೂಲಕ ಯಡಿಯೂರಪ್ಪ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕಮಲ ಅರಳಿಸಿದ್ದ ಕೇಸರಿ ನಾಯಕ.. ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವಂತೆ ಮಾಡಿದ್ದು ಯಡಿಯೂರಪ್ಪ ಸಾಧನೆಯಾಗಿದೆ.. ರಾಜ್ಯ ಬಿಜೆಪಿಯ ಭೀಷ್ಮ ರಾಜಕೀಯ ಜೀವನ ಅರ್ಧ ಶತಮಾನ ಕಳೆದಿರೋದು ಕೋಟ್ಯಂತರ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಸದ್ಯ ರಾಜಕೀಯದಿಂದ ದೂರ ಆಗಿದ್ದರೂ ಅವರು ಅಧಿಕಾರಾವಧಿಯಲ್ಲಿ ತಂದಿರುವ ಜನಪರ, ರೈತ ಪರ ಯೋಜನೆಗಳು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತವಾಗಿವೆ..
/filters:format(webp)/newsfirstlive-kannada/media/post_attachments/wp-content/uploads/2025/02/BSY_FAMILY_1.jpg)
ಪೊಲಿಟಿಕಲ್ ಬ್ಯೂರೋ, ನ್ಯೂಸ್​​​​ಫಸ್ಟ್​​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us