/newsfirstlive-kannada/media/media_files/2025/12/10/yattinahole-project-water-2025-12-10-14-24-26.jpg)
ಎತ್ತಿನಹೊಳೆ ನೀರು ಅನ್ನು 5-6 ತಿಂಗಳಲ್ಲಿ ತುಮಕೂರಿಗೆ ಹರಿಸುವೆ-ಡಿಕೆಶಿ
ಎತ್ತಿನಹೊಳೆ ಯೋಜನೆಗೆ ಇರುವ ಅಡ್ಡಿಗಳನ್ನು ನಿವಾರಿಸಿ ಮುಂದಿನ ಐದಾರು ತಿಂಗಳಲ್ಲಿ ತುಮಕೂರು ಜಿಲ್ಲೆಗೆ ನೀರು ಹರಿಸಲಾಗುವುದು ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರ ನೀಡಿದ್ದಾರೆ. ಬೇಲೂರು ಬಳಿ 8 ಕಿ.ಮೀ. ನೀರು ಹರಿಸಲು ಸಮಸ್ಯೆಯಾಗಿದೆ. ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ದೆಹಲಿ ಅರಣ್ಯ ಇಲಾಖೆಯವರು ಅಲ್ಲಿ ತೆಗೆದಿರುವ ಮಣ್ಣು ಅನ್ನು 24 ಕಿ.ಮೀ. ದೂರಕ್ಕೆ ಸ್ಥಳಾಂತರಿಸುವಂತೆ ಹೇಳುತ್ತಿದ್ದಾರೆ. ಅಲ್ಲಿ ಏನೋ ಸ್ಪಲ್ಪ ರಾಜಕಾರಣ ಕಾಣಿಸುತ್ತಿದೆ. ಆದರೂ, ತುಮಕೂರು ಜಿಲ್ಲೆಗೆ ಐದಾರು ತಿಂಗಳಲ್ಲಿ ಎತ್ತಿನಹೊಳೆ ಯೋಜನೆಯ ನೀರು ಹರಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/10/yattinahole-project-water02-2025-12-10-14-30-07.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us