/newsfirstlive-kannada/media/post_attachments/wp-content/uploads/2024/11/DIFFERENT-MARRIEGE.jpg)
ಇದು ಸೋಷಿಯಲ್ ಮೀಡಿಯಾ ಯುಗ. ಒಂದೊಲ್ಲ ಒಂದು ಸುದ್ದಿಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ವಿಡಿಯೋಗಳ ಮಾತಂತೂ ಕೇಳೋದೆ ಬೇಡ. ಸ್ವಲ್ಪ ಹಾಸ್ಯಭರಿತವಾಗಿ, ಕೊಂಚ ವಿಭಿನ್ನವಾಗಿ ಇದ್ದರಂತೂ ಮುಗಿದೇ ಹೋಯ್ತು. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡಲು ಆರಂಭಿಸುತ್ತದೆ. ಈಗ ತಮಿಳುನಾಡಿನ ಪೊಲ್ಲಚ್ಚಿಯಲ್ಲಿ ತೆಂಗಿನಕಾಯಿ ವ್ಯಾಪಾರಿಯ ಮನೆಯ ಮದುವೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮದುವೆಯ ಸಂಭ್ರಮಕ್ಕಿಂತ ಅಲ್ಲಿ ಸಿದ್ಧಗೊಂಡ ಊಟೋಪಚಾರದ ವ್ಯವಸ್ಥೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ.
/newsfirstlive-kannada/media/post_attachments/wp-content/uploads/2024/11/DIFFERENT-MARRIEGE-1.jpg)
ಮದುವೆಯ ವೇಳೆ ವ್ಯಾಪಾರಿ ದೃಷ್ಟಿ ಹಾಯಿಸಿದಲ್ಲೆಲ್ಲಾ ತೆಂಗಿನಕಾಯಿಯೇ ಕಾಣಬೇಕು ಹಾಗೆ ಮಾಡಿದ್ದಾರೆ. ಊಟಕ್ಕೆ ಕೂರುವವರನ್ನು ಒಡೆದ ತೆಂಗಿನಕಾಯಿ ಮಾದರಿಯ ಒಂದು ಗೂಡಿನಲ್ಲಿ ಕೂರಿಸಿ, ತೆಂಗಿನಕಾಯಿ ಹೋಳಿನ ರೀತಿಯ ಟೇಬಲ್ ವ್ಯವಸ್ಥೆ ಮಾಡಿ ಅದರ ಮೇಲೆ ತಟ್ಟೆ ಇಟ್ಟು ಎಲ್ಲರಿಗೂ ಊಟ ಬಡಿಸಲಾಗಿದೆ.
/newsfirstlive-kannada/media/post_attachments/wp-content/uploads/2024/11/DIFFERENT-MARRIEGE-2.jpg)
ಇಡೀ ಕಲ್ಯಾಣ ಮಂಟಪವೇ ತೆಂಗಿನಕಾಯಿಯ ಸಿಂಗಾರದಿಂದ ತುಂಬಿ ಹೋಗಿದೆ ಏನೋ ಅನ್ನೋ ರೀತಿ ಕಂಗೊಳಿಸುವಂತೆ ಮಾಡಿದ್ದಾರೆ ತೆಂಗಿನಕಾಯಿ ವ್ಯಾಪಾರಿ. ಈ ವಿಭಿನ್ನ ಹಾಗೂ ವಿಶೇಷ ವ್ಯವಸ್ಥೆಯನ್ನು ನೋಡಿದ ನೆಟ್ಟಿಗರು ಈ ವಿಡಿಯೋಗೆ ಮಾರು ಹೋಗಿದ್ದಾರೆ.
ತಹರೇವಾರಿ ಕಮೆಂಟ್ಗಳನ್ನ ಮಾಡಿದ್ದಾರೆ. ಇವರು ತೆಂಗಿನಕಾಯಿ ವ್ಯಾಪಾರಿಯಾಗಿದ್ದಕ್ಕೆ ಹೀಗೆ ಮಾಡಿದ್ದಾರೆ. ಒಂದು ವೇಳೆ ಆ ಉತ್ಪನ್ನದ ವ್ಯಾಪಾರಿ ಆಗಿದ್ರೆ ಮದುವೆಯ ಸಿದ್ಧತೆ ಹೇಗಿರುತ್ತಿತ್ತು. ಈ ಉತ್ಪನ್ನದ ವ್ಯಾಪಾರಿಯಾಗಿದ್ರೆ ಮದುವೆ ಸಿದ್ಧತೆ ಹೇಗಿರುತ್ತಿತ್ತು ಎಂದು ಹಾಸ್ಯಭರಿತ ಕಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ಆಚೆಗೂ ಕೂಡ ಈ ಮದುವೆಯ ವಿಡಿಯೋ ಸಖತ್ ವೈರಲ್ ಆಗಿದ್ದು. ಅನೇಕರು ಊಟದ ವ್ಯವಸ್ಥೆಯನ್ನು ನೋಡಿ ಹೀಗೂ ಮಾಡಬಹುದಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us