/newsfirstlive-kannada/media/post_attachments/wp-content/uploads/2025/07/Dr-Natesh-1.jpg)
ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೀಗ ಹೃದ್ರೋಗ ತಜ್ಞರು, ಹಾರ್ಟ್ ಅಟ್ಯಾಕ್ಗೆ ಸಂಬಂಧಿಸಿ ಆಘಾತಕಾರಿ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ.
ಹೃದಯಾಘಾತಕ್ಕೆ ಶಬ್ದ, ವಾಯು ಮಾಲಿನ್ಯ ಕೂಡ ಕಾರಣ. ವಾಯು, ಶಬ್ಧ ಮಾಲಿನ್ಯದಿಂದ ಹೃದಯಾಘಾತ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಕುಸಿಯುತ್ತಿರುವ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಹೃದ್ರೋಗ ತಜ್ಞ ಡಾ.ನಟೇಶ್ ಬಿ.ಹೆಚ್ ಹೇಳಿದ್ದೇನು..?
ಮಾಲೀನ್ಯ ಕೂಡ ಹೃದಯ ಸಮಸ್ಯೆಗೆ ಪ್ರಮುಖ ಕಾರಣ. ಮೂರು ರೀತಿಯ ಮಾಲೀನ್ಯಗಳು ಹೃದಯಾಘಾತಕ್ಕೆ ಕಾರಣ ಆಗಬಹುದು ಅಂತಾ ಸಂಶೋಧನೆ ನಡೆಯುತ್ತಿದೆ. ವಾಯು ಮಾಲೀನ್ಯ, ಶಬ್ದ ಮಾಲೀನ್ಯ ಮೂರನೇಯದು ಟೆಂಪ್ರೆಚರ್ ಕೂಡ ಕಾರಣವಾಗುತ್ತಿದೆಯಾ ಅಂತಾ ಅಧ್ಯಯನ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ಮೆಟ್ರೋ ಸಿಟಿಗಳಲ್ಲಿ ವಾಯು ಮಾಲೀನ್ಯ ಹೆಚ್ಚಾಗ್ತಿದೆ. ಪಾಯಿಂಟ್ ಪಾರ್ಟಿಕ್ಯುಲೆಟ್ ಮ್ಯಾಟರ್ (Particulate matter) ಕೂಡ ಇಂಪಾರ್ಟೆಂಟ್. ಮಾಲೀನ್ಯ ಜಾಸ್ತಿ ಆದಾಗ ಹೃದಯಾಘಾತಕ್ಕೆ ಕೊಡುಗೆ ನೀಡುತ್ತವೆ.
ಇದನ್ನೂ ಓದಿ: ವ್ಯಾಕ್ಸಿನ್ ಹೃದಯಾಘಾತಕ್ಕೆ ಕಾರಣವಲ್ಲ, ಕೊರೊನಾ ಕೂಡ ಕಾರಣ; ಸರ್ಕಾರದಿಂದ 4 ಮಹತ್ವದ ನಿರ್ಧಾರ
ಜೊತೆಗೆ ಬೆಂಗಳೂರಿನಲ್ಲಿ ಒಂದು ಸ್ಟಡಿ ಆಗಿದೆ. ಲೆಡ್ ಲೇವಲ್ ಕೂಡ (lead level) ಜಾಸ್ತಿ ಇದೆ. ಸ್ಕೂಲ್ ಮಕ್ಕಳಲ್ಲಿ ತಪಾಸಣೆ ಮಾಡಿದಾಗ ಜಾಸ್ತಿ ಇರೋದು ಕಂಡು ಬಂದಿದೆ. ಅಂತಹ ಸಂದರ್ಭದಲ್ಲೂ ಹಾರ್ಟ್ ಅಟ್ಯಾಕ್ ಜಾಸ್ತಿ ಆಗಲಿದೆ. ಶಬ್ದ ಮಾಲೀನ್ಯ ಕೂಡ ಹೃದಯಾಘಾತಕ್ಕೆ ಕಾಣವಾಗ್ತಿದೆ. 80 ಡೆಸಿಬಲ್ ಶಬ್ಧಕ್ಕಿಂತ ಜಾಸ್ತಿ ಆದಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದಲೂ ಹೃದಯಾಘಾತ ಸಂಭವಿಸುತ್ತಿದೆ ಎಂದು ಹೃದ್ರೋಗ ತಜ್ಞ ಡಾ.ನಟೇಶ್ ಬಿ.ಹೆಚ್ ತಿಳಿಸಿದ್ದಾರೆ.
ಮಾಲಿನ್ಯ ಹೆಚ್ಚಾಗಲು ಕಾರಣಗಳೇನು?
- ಹಲವು ಕಾರಣಗಳಿಂದ ಕುಸಿದ ವಾಯು ಮಾಲಿನ್ಯ ಗುಣಮಟ್ಟ
- ವಾಯು & ಶಬ್ಧ ಮಾಲಿನ್ಯ ಹೆಚ್ಚಾಗಲು ಹದಗೆಟ್ಟ ರಸ್ತೆ ಕಾರಣ
- ಗುಂಡಿಮಯ ರಸ್ತೆಯಿಂದ ಮಂದಗತಿಯಲ್ಲಿ ವಾಹನ ಸಂಚಾರ
- ವಾಹನಗಳ ಸ್ಲೋ ಮೂವಿಂಗ್ನಿಂದ ಹೆಚ್ಚಾಗ್ತಿರೋ ಮಾಲಿನ್ಯ
- ಬೆಂಗಳೂರಿನಲ್ಲಿ ಒಂದೂವರೆ ಕೋಟಿಗೂ ಅಧಿಕ ವಾಹನಗಳು
- ಹಳೆಯ ವಾಹನಗಳು ಉಗುಳುವ ಹೊಗೆಯಿಂದ ಮಾಲಿನ್ಯ
- ಜೊತೆಗೆ ರಸ್ತೆ ಧೂಳಿನಿಂದ ಕೂಡ ಹೆಚ್ಚಿದ ಪರಿಸರ ಮಾಲಿನ್ಯ
- ಕಾರ್ಡಿಯೋಲಾಜಿಕಲ್ ಸೊಸೈಟ್ ಆಫ್ ಇಂಡಿಯಾ ಸಂಶೋಧನೆ
- ‘ಹಾರ್ಟ್ ಅಟ್ಯಾಕ್ & ಏರ್ ಪೊಲ್ಯೂಷನ್’ ಥೀಮ್ನಡಿ ರಿಸರ್ಚ್
ನಗರದ ಕೆಂಗೇರಿ, HSR ಲೇಔಟ್ನಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕುಸಿದ ವಾಯು ಮಾಲಿನ್ಯದ ಗುಣಮಟ್ಟ ಭಾರೀ ಕುಸಿದಿತ್ತು. ಮೇ.6ರಂದು 144AQI, ಮೇ.07 130 ವಾಯು ಗುಣಮಟ್ಟ ದಾಖಲಾಗಿದೆ. ಮೇ.16ರಂದು 191 AQI, ಮೇ. 22ರಂದು ಮೇ.31ರಂದು 157 AQI ದಾಖಲಾಗಿದೆ.
ಇದನ್ನೂ ಓದಿ: ಮೆದುಳು ಸದಾ ಚುರುಕಾಗಿ, ಆ್ಯಕ್ಟಿವ್ ಆಗಿ ಕೆಲಸ ಮಾಡಬೇಕಾ..? ಹಾಗಾದ್ರೆ ಮಾಡಬೇಕಾಗಿದ್ದು ಇಷ್ಟೇ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ