newsfirstkannada.com

3 ವರ್ಷದಿಂದ ಅನಾರೋಗ್ಯ, ಬಟ್ಟೆ ತೊಡಲು ಕಷ್ಟವಾಗುತ್ತದೆ.. ಕಾಯಿಲೆ ಬಗ್ಗೆ ಬಿಚ್ಚಿಟ್ಟ ನಟಿ ಪೂನಂ

Share :

Published February 3, 2024 at 7:16pm

Update February 3, 2024 at 7:17pm

    ಸದ್ಯ ಸಿನಿಮಾದಿಂದ ದೂರವಿರುವ ನಟಿ ಪೂನಂ

    ಫೈಬ್ರೊಮ್ಯಾಲ್ಜಿಯಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ನಟಿ

    ಫೈಬ್ರೊಮ್ಯಾಲ್ಜಿಯಾ ಎಂದರೇನು? ಅದರಿಂದಾಗುವ ಪರಿಣಾಮ?

ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ತಾನು ಸಾವನ್ನಪ್ಪಿದ್ದೇನೆ ಎಂದು ನಿನ್ನೆ ಸುಳ್ಳು ಹೇಳಿದ್ದರು. ಆದರಿಂದು ತಾನು ಬದುಕಿರುವುದಾಗಿ ಹೇಳುವ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ನಟಿಸಿರುವ ನಟಿಯೊಬ್ಬರು ತನಗಿರುವ ಕಾಯಿಲೆ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅಂದಹಾಗೆಯೇ ಆ ನಟಿ ಯಾರು ಗೊತ್ತಾ?.

ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಸುತ್ತಿದ್ದೇನೆ. ತನಗೆ ಬಂದಿರುವ ಖಾಯಿಲೆಯಿಂದ ಬಟ್ಟೆ ತೊಡಲು ಕಷ್ಟವಾಗುತ್ತಿದೆ ಎಂದು ನಟಿ ಪೂನಂ ಕೌರ್​ ಹೇಳಿದ್ದಾರೆ.

ಸದ್ಯ ಸಿನಿಮಾಗಳಿಂದ ದೂರವಿರುವ ಪೂನಂ ಕೌರ್​​ ರಾಜಕೀಯ ಮತ್ತು​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅಂದಹಾಗೆಯೇ ಈ ನಟಿ ನಾಟಿ ವೈದ್ಯೆ ಡಾ.ಮಂತೇನ ಅವರೊಂದಿಗೆ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತನಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ಫೈಬ್ರೊಮ್ಯಾಲ್ಜಿಯಾಗೆ ಚಿಕಿತ್ಸೆಗಾಗಿ ಮಂತೇನಾ ಬಳಿ ಮಂದಿದ್ದೇನೆ. ಆ ಕಾಯಿಲೆಯಿಂದ ನನಗೆ ಬಟ್ಟೆ ತೊಡಲು ಸಾಧ್ಯವಾಗುತ್ತಿಲ್ಲ. ದೇಹದಲ್ಲಿನ ಚಲೆಗಳು ಸುಲಭವಲ್ಲ. ಸಡಿಲವಾದ ಬಟ್ಟೆ ಧರಿಸಬೇಕಾಯ್ತು. 2 ವರ್ಷಗಳ ಕಾಲ ತುಂಬಾ ನೋವು ಅನುಭವಿಸಿದೆ ಎಂದು ನಟಿ ಹೇಳಿದ್ದಾರೆ.

ಫೈಬ್ರೊಮ್ಯಾಲ್ಜಿಯಾ ಎಂದರೇನು?

ಈ ಕಾಯಿಲೆಗೆ ತುತ್ತಾದರೆ ದೇಹದ ಸ್ನಾಯುಗಳು ಬಿಗಿಯಾದ ಮತ್ತು ನೋವಿನಿಂದ ಕೂಡುತ್ತವೆ. ಇದರಿಂದ ಆಯಾಸ ಮತ್ತು ದೀರ್ಘಕಾಲದ ಅಸ್ವಸ್ಥತೆ ಉಂಟಾಗುತ್ತದೆ. ಇದಲ್ಲದೆ, ನಿದ್ರೆಯ ಭಂಗ, ಖಿನ್ನತೆ, ಆತಂಕ, ಮೈಗ್ರೇನ್​ ಕೂಡ ಕಾಡುತ್ತದೆ.

3 ವರ್ಷದಿಂದ ಅನಾರೋಗ್ಯ, ಬಟ್ಟೆ ತೊಡಲು ಕಷ್ಟವಾಗುತ್ತದೆ.. ಕಾಯಿಲೆ ಬಗ್ಗೆ ಬಿಚ್ಚಿಟ್ಟ ನಟಿ ಪೂನಂ

https://newsfirstlive.com/wp-content/uploads/2024/02/Poonam-Kour.jpg

Load More