newsfirstkannada.com

‘ನನ್ನನ್ನು ನಾಚಿಕೆಗೇಡಿ’ ಎಂದು ಕರೆಯೋರು.. ಟ್ರೋಲ್​​​ಗೆ ಪೂನಂ ಪಾಂಡೆ ಖಡಕ್ ಉತ್ತರ..!

Share :

Published February 4, 2024 at 12:44pm

    ಟ್ರೋಲರ್ಸ್​ ಮೇಲೆ ಆಕ್ರೋಶ ಹೊರ ಹಾಕಿದ ಪೂನಂ

    ಸತ್ತಿದ್ದೇನೆಂದು ಸುಳ್ಳು ಪೋಸ್ಟ್ ಮಾಡಿದ್ದ ಪೂನಂ ಪಾಂಡೆ

    ಈ ಪ್ರಕರಣದಲ್ಲಿ ಮ್ಯಾನೇಜರ್​ಗೆ ಯಾವುದೇ ಸಂಬಂಧ ಇಲ್ಲ

ತನ್ನನ್ನೇ ತಾನು ಸತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡಿದ್ದ ವಿವಾದಾತ್ಮಕ ನಟಿ ಪೂನಂ ಪಾಂಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಿವುಡ್​ ಸ್ಟಾರ್​ಗಳು, ಆಕೆಯ ಸ್ನೇಹಿತರು ಸೇರಿದಂತೆ ಇಡೀ ದೇಶವೇ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿದ್ದಂತೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ತನ್ನ ನೋವುಗಳನ್ನು ವಿವರಿಸಿದ್ದಾಳೆ.

ಪೂನಂ ಪಾಂಡೆ ಹೇಳಿದ್ದೇನು..?
ನಾನು ಮಾಡಿದ ಆ ಕೆಲಸದಿಂದ ನೀವು ನನ್ನ ಮೇಲೆ ಕೋಪಿಸಿಕೊಂಡಿದ್ದೀರಿ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದೀರಿ. ಕೆಲವರು ನನಗೆ ನೇರವಾಗಿ ಮೆಸೇಜ್ ಮಾಡಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದೀರಿ. ಆದರೆ ನನ್ನ ಉದ್ದೇಶ ನಿಮಗೆ ಅರ್ಥ ಆಗಿಲ್ಲ. ನನ್ನನ್ನು ನಿಂದಿಸೋರಿಗೆ ನಾನು ಹೇಳಲು ಬಯಸೋದು ಏನೆಂದರೆ, ನನ್ನ ತಾಯಿ ಕೂಡ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಗಂಟಲಿನಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಅವರು ಚಿಕಿತ್ಸೆಗೆ ಒಳಗಾಗಿದ್ದು, ಈಗ ಆರೋಗ್ಯವಾಗಿದ್ದಾರೆ. ಮನೆಯಲ್ಲಿ ನಾನು ಕ್ಯಾನ್ಸರ್ ರೋಗಿಯನ್ನು ನೋಡಿದ್ದೇನೆ. ಅದು ಎಷ್ಟು ಡೇಂಜರ್ ಎಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಒಳ್ಳೆಯದಕ್ಕಾಗಿ ಪ್ರಚಾರ ಮಾಡಲು ಬಯಸಿದ್ದೆ.

ಗರ್ಭಕಂಠ ಕ್ಯಾನ್ಸರ್ ಅದೆಷ್ಟೋ ಮಹಿಳೆಯರ ಜೀವವನ್ನು ತೆಗೆದುಕೊಂಡಿದೆ. ಈ ಬಗ್ಗೆ ಫೆಬ್ರವರಿ 3 ರಂದು ಮಾಡಿರುವ ಲೈವ್​​ನಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಹೀಗೆ ಮಾಡಲು ಯಾರಿಂದಲೂ ಹಣವನ್ನು ಪಡೆದಿಲ್ಲ. ಯಾವುದೇ ಔಷಧೀಯ ಕಂಪನಿಯ ಜೊತೆಗೂ ಭಾಗಿಯಾಗಿಲ್ಲ. ಈ ರೀತಿಯಾಗಿ ಪ್ರಚಾರ ಮಾಡಲು ನನಗೆ ಯಾರೂ ಕೂಡ ಹಣವನ್ನೂ ನೀಡಿಲ್ಲ. ಮಹಿಳೆಯರ ಪರವಾಗಿ ನಾನು ಹಾಗೆ ಮಾಡಿದೆ. ಈ ಕ್ಯಾನ್ಸರ್​ ವಿರುದ್ಧ ದೂರ ಇರಬೇಕು ಎಂದರೆ ಅಭಿಯಾನವೊಂದೇ ಹೊರತು ಬೇರೆ ಯಾವುದೂ ಅಲ್ಲ.

ನನ್ನ ಪ್ರಚಾರದಿಂದ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಗೊತ್ತಿಲ್ಲದವರು ತಿಳಿದುಕೊಂಡಿದ್ದಾರೆ. ಗೂಗಲ್ ಮೂಲಕ ಹುಡುಕಾಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಓದುತ್ತಿದ್ದಾರೆ. ಇಂದು ವಿಷಯ ಟ್ರೆಂಡಿಂಗ್​ನಲ್ಲಿದೆ. ಅದೆಷ್ಟೋ ಮಹಿಳೆಯರಿಂದ ನನಗೆ ಸಂದೇಶಗಳು ಬರುತ್ತಿವೆ. ಒಳ್ಳೆಯ ಉದ್ದೇಶಕ್ಕಾಗಿ ಇದನ್ನು ಮಾಡಲು ಬಯಸಿದೆ. ನೀವು ನನ್ನ ಸಾವಿನ ಸುದ್ದಿ ಕೇಳಿದಾಗ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡುತ್ತಿದ್ದೀರಿ. ಕೊನೆಗೆ ನಾನು ಬದುಕಿದ್ದೇನೆ ಎಂದು ಗೊತ್ತಾದಾಗ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದೀರಿ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆ ಮೊದಲೇ ತಿಳಿದಿದ್ದರೆ, ಇದನ್ನೆಲ್ಲಾ ಮಾಡುವ ಅಗತ್ಯ ಇರಲಿಲ್ಲ. ಇದರಲ್ಲಿ ನನ್ನ PR ಭಾಗಿಯಾಗಿರಲಿಲ್ಲ -ಪೂನಂ ಪಾಂಡೆ

View this post on Instagram

A post shared by Poonam Pandey (@poonampandeyreal)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನನ್ನು ನಾಚಿಕೆಗೇಡಿ’ ಎಂದು ಕರೆಯೋರು.. ಟ್ರೋಲ್​​​ಗೆ ಪೂನಂ ಪಾಂಡೆ ಖಡಕ್ ಉತ್ತರ..!

https://newsfirstlive.com/wp-content/uploads/2024/02/POONAM-PANDY.jpg

Load More