/newsfirstlive-kannada/media/post_attachments/wp-content/uploads/2025/02/Poonam_Pandey.jpg)
ಮುಂಬೈ: ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆಗೆ ಅಸಭ್ಯ ವರ್ತನೆ ತೋರಿ ಬಲವಂತವಾಗಿ ಚುಂಬಿಸಲು ಮುಂದಾಗಿದ್ದಾನೆ. ಇದರಿಂದ ಬೇಸರಗೊಂಡಿದ್ದ ನಟಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ನಟಿ ಪೂನಂ ಪಾಂಡೆ ಮುಂಬೈನ ಬೀದಿಯೊಂದರಲ್ಲಿ ಕೆಂಪು ಬಣ್ಣದ ಗೌನ್ ಹಾಗೂ ಬೂದು ಬಣ್ಣದ ಡೆನಿಮ್ ಜಾಕೆಟ್ ಧರಿಸಿ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಿದ್ದರು. ಇದೇ ಸಮಯಕ್ಕೆ ವ್ಯಕ್ತಿಯೊಬ್ಬ ಹಿಂದಿನಿಂದ ಸೈಲೆಂಟ್ ಆಗಿ ಬಂದು ಪಕ್ಕದಲ್ಲಿ ನಿಂತುಕೊಂಡಾಗ ನಟಿ ಭಯಗೊಂಡರು. ತಕ್ಷಣ ಸೆಲ್ಫಿಗಾಗಿ ಮನವಿ ಮಾಡಿದ್ದಾನೆ. ಇದಕ್ಕೆ ಸಮ್ಮಿತಿಸಿ ನಟಿ ಸೆಲ್ಫಿಗೆ ಕೊಡಲು ನಿಂತಾಗ, ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪೂನಂ ಪಾಂಡೆಗೆ ಕಿಸ್ ಮಾಡಲು ಯತ್ನಿಸಿದ್ದಾನೆ.
ಇದನ್ನೂ ಓದಿ: ಪುಣ್ಯಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಪ್ರಸಿದ್ಧ ಗೋವುಗಳ ಜಾತ್ರೆ.. ಹಳ್ಳಿಕಾರ್, ಅಮೃತ ಮಹಲ್ ತಳಿಗೆ ಭಾರೀ ಬೇಡಿಕೆ
ತಕ್ಷಣ ಪೂನಂ ಪಾಂಡೆ ವ್ಯಕ್ತಿಯನ್ನು ತಳ್ಳಿದ್ದಾರೆ. ಇದನ್ನು ನೋಡಿದವರೆಲ್ಲಾ ಫುಲ್ ಶಾಕ್ ಆಗಿದ್ದಾರೆ. ಪೂನಂ ಪಾಂಡೆಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು ನೆಟ್ಟಿಗರಿಂದ ಕಮೆಂಟ್ಸ್ ಬರುತ್ತಿವೆ. ಈ ವಿಡಿಯೋವನ್ನು ನೋಡಿದ ಜನರು, ಇದೆಲ್ಲಾ ಪ್ರಚಾರಕ್ಕಾಗಿ ಮಾಡಿದ್ದು, ಪೂನಂ ಪಾಂಡೆ ಯಾವಗಲೂ ಈ ರೀತಿ ನಾಟಕ ಮಾಡುವುದು ಕಾಮಾನ್ ಅಂತಿದ್ದಾರೆ. ಇದೆಲ್ಲಾ ಮೊದಲೇ ಯೋಜಿಸಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ಗಾಗಿ ಹೀಗೆ ಮಾಡುವುದು ತಪ್ಪು ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.
ಪೂನಂ ಪಾಂಡೆ 2013 ರಲ್ಲಿ ನಶಾ ಎನ್ನುವ ಮೂವಿಯಿಂದ ಚಿತ್ರರಂಗಕ್ಕೆ ಆಗಮಿಸಿದರು. ಇವರು ಸಿನಿಮಾ ಕಡೆ ಗಮನಕ್ಕಿಂತ ಪಬ್ಲಿಸಿಟಿಗಾಗಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಭೋಜ್‌ಪುರಿ ಭಾಷೆಯಲ್ಲಿ ಅದಾಲತ್, ತೆಲುಗಿನ ಮಾಲಿನಿ ಅಂಡ್ ಕಂಪನಿ, ಹಿಂದಿಯಲ್ಲಿ ದಿ ಜರ್ನಿ ಆಫ್ ಕರ್ಮ, ಆ ಗಯಾ ಹೀರೋ ಸೇರಿ ಇನ್ನಿತೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲೂ ಹೆಚ್ಚು ಖ್ಯಾತಿ ಪಡೆದಿದ್ದಾರೆ.
पूनम पांडे को अंधेरी में एक सरफिरे ने सेल्फी के बहाने kiss करने की कोशिश की pic.twitter.com/MIFWutLCVf
— Geeta Patel (@geetappoo)
पूनम पांडे को अंधेरी में एक सरफिरे ने सेल्फी के बहाने kiss करने की कोशिश की pic.twitter.com/MIFWutLCVf
— Geeta Patel (@geetappoo) February 21, 2025
">February 21, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ