newsfirstkannada.com

ಸಾವಿನ ಸುದ್ದಿ ಪೋಸ್ಟ್ ಮಾಡಿ ಫೋನ್ ಸ್ವಿಚ್ ಆಫ್; ಪೂನಂ ಪಾಂಡೆ ಮಾಡಿದ ನಾಟಕಗಳೇನು?

Share :

Published February 3, 2024 at 2:02pm

    32 ವರ್ಷದ ಮಾಡೆಲ್‌ ಕ್ಯಾನ್ಸರ್‌ಗೆ ಪ್ರಾಣ ಬಿಟ್ಟ ಸುದ್ದಿ ಸುಳ್ಳು

    ಪೂನಂ ಪಾಂಡೆ ಬಾಡಿಗಾರ್ಡ್‌ ಹೇಳಿದ ಸುದ್ದಿ ನಿಜವಾಯಿತು

    ಗರ್ಭಕಂಠದ ಕ್ಯಾನ್ಸರ್‌ ಎಷ್ಟು ಮಾರಕ ಅನ್ನೋದನ್ನ ತಿಳಿಸಿದ್ದೇನೆ

ಬಾಲಿವುಡ್‌ ನಟಿ ಪೂನಂ ಪಾಂಡೆ ಅವರ ಸಾವಿನ ಸುದ್ದಿ ಸುಳ್ಳಾಗಿದೆ. 32 ವರ್ಷದ ಮಾಡೆಲ್‌ ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಾಣ ಬಿಟ್ಟಿದ್ದಾರೆ ಎನ್ನುವ ಸುದ್ದಿಯನ್ನು ಖುದ್ದು ಪೂನಂ ಪಾಂಡೆ ಅವರೇ ತಳ್ಳಿ ಹಾಕಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಾಕಿರುವ ಪೂನಂ ಪಾಂಡೆ, ನಾನು ಬದುಕಿದ್ದೇನೆ. ಸತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳದೆ ಫೆಬ್ರವರಿ 2ರ ಮುಂಜಾನೆ ಪೂನಂ ಪಾಂಡೆ ಅವರು ಸರ್ವಿಕಲ್ ಕ್ಯಾನ್ಸರ್‌ಗೆ ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್‌ ಪಾರುಲ್ ಚಾವ್ಲಾ ಹೇಳಿದ್ದರು. ಪೂನಂ ಪಾಂಡೆ ಅವರ ಹುಟ್ಟೂರು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎನ್ನಲಾಗಿತ್ತು.

ಪೂನಂ ಪಾಂಡೆ ಮ್ಯಾನೇಜರ್ ನೀಡಿದ ಈ ಸಾವಿನ ಸುದ್ದಿಯನ್ನು ಅವರ ಕುಟುಂಬಸ್ಥರು ಒಪ್ಪಿಕೊಂಡಿರಲಿಲ್ಲ. ಪೂನಂ ಪಾಂಡೆ ಕುಟುಂಬಸ್ಥರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪೂನಂ ಪಾಂಡೆ ಸಹೋದರಿ ಸೇರಿದಂತೆ ಮನೆಯವರ ಫೋನ್ ಸ್ವಿಚ್ ಆಫ್ ಆಗಿತ್ತು. ಇಷ್ಟಾದ ಮೇಲೆ ಪೂನಂ ಪಾಂಡೆ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಪೂನಂ ಪಾಂಡೆ ಬಾಡಿಗಾರ್ಡ್‌ ಕೂಡ ಈ ಸುದ್ದಿಯನ್ನ ಒಪ್ಪಲು ಸಾಧ್ಯವಿಲ್ಲ. ಕಳೆದ ಜನವರಿ 29ರಂದು ಪೂನಂ ಪಾಂಡೆ ಅವರನ್ನು ಕಡೆಯ ಬಾರಿ ನೋಡಿದ್ದೆ. ಅವರು ಆರೋಗ್ಯವಾಗಿದ್ದರು ಎಂದಿದ್ದರು.

ಇದನ್ನೂ ಓದಿ: BREAKING: ನಾನು ಸತ್ತಿಲ್ಲ.. ಜೀವಂತವಾಗಿದ್ದೇನೆ; ಬಾಲಿವುಡ್ ನಟಿ ಪೂನಂ ಪಾಂಡೆ ದಿಢೀರ್ ಪ್ರತ್ಯಕ್ಷ!

View this post on Instagram

A post shared by Poonam Pandey (@poonampandeyreal)

ಪೂನಂ ಪಾಂಡೆ ಸಾವಿನ ಸುದ್ದಿ ಇಡೀ ದೇಶಾದ್ಯಂತ ಹಬ್ಬಿದ ಮೇಲೆ ಸರ್ವಿಕಲ್ ಕ್ಯಾನ್ಸರ್‌ ಬಗ್ಗೆ ಹಲವಾರು ಜನರು ಹುಡುಕಾಟ ನಡೆಸಿದ್ದರು. ಗರ್ಭಕಂಠದ ಕ್ಯಾನ್ಸರ್‌ ಎಷ್ಟು ಮಾರಕ ಅನ್ನೋದನ್ನ ಎಲ್ಲರಿಗೂ ತಿಳಿಸಲು ನಾನು ಹೀಗೆ ಮಾಡಿದ್ದೆ ಎಂದು ಪೂನಂ ಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಇದೀಗ ಇನ್ಸ್‌ಸ್ಟಾಗ್ರಾಂನಲ್ಲಿ ವಿಡಿಯೋ ರಿಲೀಸ್ ಮಾಡಿರುವ ಪೂನಂ ಪಾಂಡೆ, ನಾನು ಜೀವಂತವಾಗಿದ್ದೇನೆ. ಸರ್ವಿಕಲ್ ಕ್ಯಾನ್ಸರ್​ನಿಂದಾಗಿ ನಾನು ಸಾವನ್ನಪ್ಪಿಲ್ಲ. ದುರಾದೃಷ್ಟ ಅಂದ್ರೆ ಸರ್ವಿಕಲ್ ಕ್ಯಾನ್ಸರ್​ನಿಂದ ಜೀವ ಕಳೆದುಕೊಂಡ ನೂರಾರು, ಸಾವಿರಾರು ಮಹಿಳೆಯರ ಬಗ್ಗೆ ನಾನು ಇದನ್ನೇ ಹೇಳೋದಕ್ಕಾಗಲ್ಲ. ಅದರ ಬಗ್ಗೆ ಅವ್ರೇನೂ ಮಾಡೋಕೆ ಆಗದೆ ಸಾವನ್ನಪ್ಪಿಲ್ಲ, ಬದಲಿಗೆ ಏನು ಮಾಡಬೇಕೆಂಬ ತಿಳುವಳಿಕೆಯೇ ಇಲ್ಲದಿದ್ದಕ್ಕೆ ಸಾವನ್ನಪ್ಪಿದ್ದಾರೆ. ಇತರೆ ಕ್ಯಾನ್ಸರ್​ಗಳಂತೆ ಅಲ್ಲದೆ, ಸರ್ವಿಕಲ್ ಕ್ಯಾನ್ಸರ್​ನ ತಡೆಯಬಹುದು ಅನ್ನೋದನ್ನ ಹೇಳೋದಕ್ಕೆ ನಾನಿಲ್ಲಿದ್ದೇನೆ. ನೀವು ಮಾಡಬೇಕಿರುವುದು, ನಿಮ್ಮ ಪರೀಕ್ಷೆಯನ್ನ ಮಾಡಿಸಿಕೊಳ್ಳುವುದು, ಹೆಚ್​ಪಿವಿ ವ್ಯಾಕ್ಸಿನ್​ನ ಹಾಕಿಸಿಕೊಳ್ಳುವುದು. ನಾವು ಇದನ್ನ, ಇದಕ್ಕಿಂತಲೂ ಹೆಚ್ಚಿನದನ್ನ ಮಾಡೋ ಮೂಲಕ ಈ ರೋಗಕ್ಕೆ ಇನ್ನೊಂದು ಜೀವ ಕೂಡ ಹೋಗದಂತೆ ತಡೆಯಲು ಸಾಧ್ಯವಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿನ ಸುದ್ದಿ ಪೋಸ್ಟ್ ಮಾಡಿ ಫೋನ್ ಸ್ವಿಚ್ ಆಫ್; ಪೂನಂ ಪಾಂಡೆ ಮಾಡಿದ ನಾಟಕಗಳೇನು?

https://newsfirstlive.com/wp-content/uploads/2024/02/Poonam-pandey.jpg

Load More