ಕಳಪೆ ನಿದ್ದೆಯಿಂದ ಮಕ್ಕಳ ಮೆದುಳಿಗೆ ಭಾರೀ ಹಾನಿ; ನಿಮ್ಮ ಮಗು ಅಪಾಯದಲ್ಲಿದಿಯೇ..?

author-image
Ganesh
Updated On
ಕಳಪೆ ನಿದ್ದೆಯಿಂದ ಮಕ್ಕಳ ಮೆದುಳಿಗೆ ಭಾರೀ ಹಾನಿ; ನಿಮ್ಮ ಮಗು ಅಪಾಯದಲ್ಲಿದಿಯೇ..?
Advertisment
  • ನಿದ್ದೆ ಜಾಸ್ತಿ ಮಾಡಿದ್ರೆ ಮಕ್ಕಳನ್ನು ಬಡಿದು ಎಬ್ಬಿಸ್ತಾರೆ
  • ಪೋಷಕರೇ ಇನ್ಮೇಲೆ ಹಾಗೆ ಮಾಡಬೇಡಿ, ಅಪಾಯ ಇದೆ
  • ನಿಮ್ಮ ಮಗುವಿನ ಮೆದುಳಿಗೆ ಬೇಕೇಬೇಕು ಯೋಗ್ಯ ನಿದ್ರೆ

ಮಕ್ಕಳು ಜಾಸ್ತಿ ನಿದ್ರೆ ಮಾಡಿದ್ರೆ ಸೋಮಾರಿಗಳು ಆಗುತ್ತಾರೆ! ಈ ರೀತಿಯ ಆತಂಕವೊಂದು ಪೋಷಕರನ್ನು ಕಾಡುತ್ತದೆ. ಬೆಳಗ್ಗೆ ಏಳೋದು ಅರ್ಧ ಗಂಟೆ ಜಾಸ್ತಿಯಾದರೆ ಸಾಕು ಬುದ್ಧಿ ಹೇಳಲು ಶುರುಮಾಡಿ ಬಿಡ್ತಾರೆ. ಇನ್ನು, ಕೆಲವರು ಮಲಗಿದ್ದಲ್ಲಿಗೇ ಹೋಗಿ ಎಬ್ಬಿಸಿ ನಿದ್ದೆಯನ್ನು ಹಾಳು ಮಾಡ್ತಾರೆ. ಸ್ಕೂಲಿಗೆ ಹೋಗೋದಿದೆ? ಓದಿಕೊಳ್ಳಬೇಕು? ಮನೆಯಲ್ಲಿ ಸಣ್ಣ-ಪುಟ್ಟ ಕೆಲಸ ಇದೆ ಎಂದು ಎಬ್ಬಿಸೋ ಪೋಷಕರೇ ಜಾಸ್ತಿ ಇದ್ದಾರೆ.

ಇದನ್ನೂ ಓದಿ:ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಿ; ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಿರಿ

ಇನ್ನೂ ಕೆಲವು ಪೋಷಕರ ಮಕ್ಕಳು ಚಿಕ್ಕವರಾಗಿದ್ದರೂ ನಿದ್ದೆಯಲ್ಲಿದ್ದಾಗ ಎಳಿಸಿಬಿಡ್ತಾರೆ. ದೊಡ್ಡವರಾದ ಮೇಲೆ ಮೈಗಳ್ಳತನವನ್ನು ರೂಢಿಸಿಕೊಳ್ತಾರೆ. ಹೀಗಾಗಿ ಅವರಿಗೆ ಮಲಗಲು ಜಾಸ್ತಿ ಅವಕಾಶ ಮಾಡಿಕೊಡಬಾರದು ಅನ್ನೋ ಚಡಪಡಿಕೆ ಪೋಷಕರದ್ದು. ನೀವೇನಾದರೂ ನಿಮ್ಮ ಮಗುವಿಗೆ ಅದೇ ರೀತಿ ಮಾಡುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಯಾಕೆಂದರೆ ಮಕ್ಕಳ ನಿದ್ದೆಯನ್ನು ಹಾಳು ಮಾಡೋದು ತುಂಬಾನೇ ಡೇಂಜರ್! ಇದರಿಂದ ಮಕ್ಕಳ ಮೆದುಳು ಹಾಗೂ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಧ್ಯಯನವೊಂದು ಹೇಳಿದೆ!

ನಿಮ್ಮ ಮಗುವಿನ ಮೆದುಳಿಗೆ ಬೇಕು ನಿದ್ರೆ
ಮಗುವಿನ ಮೆದುಳು ಬೆಳವಣಿಗೆಗೆ ನಿದ್ರೆ ತುಂಬಾನೇ ಮುಖ್ಯ. ಚಿಕ್ಕ ಮಗುವಿನ ನಿದ್ರೆಯನ್ನು ಹಾಳು ಮಾಡಬೇಡಿ ಎಂದು ನ್ಯಾಷನಲ್ ಅಕಾಡೇಮಿ ಆಫ್ ಸೈನ್ಸ್ (National Academy of Sciences) ಎಚ್ಚರಿಕೆ ನೀಡಿದೆ. ಕಳಪೆ ಗುಣಮಟ್ಟದ ನಿದ್ರೆ ಮಗುವಿನ ಮೆದುಳಿಗೆ ಹಾನಿಕಾರಕ. ನಿದ್ರೆಯಲ್ಲಿ ಆಗುವ ಅಡಚಣೆ ಅವರ ಕಲಿಕೆ ಮತ್ತು ಸ್ಮರಣೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಜೊತೆಗೆ ನರಮಂಡಲದ ಬೆಳವಣಿಗೆ ಮೇಲೂ ಪರಿಣಾಮ ಬೀರಲಿದೆ ಎಂದು ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ (University of North Carolina) ಪ್ರೊಫೆಸರ್ ಗ್ರಹಾಂ ಡಿಯರಿಂಗ್ (Graham Diering ) ವಾರ್ನಿಂಗ್ ಮಾಡಿದ್ದಾರೆ. ಗ್ರಹಾಂ ಡಿಯರಿಂಗ್ ನೇತೃತ್ವದ ತಂಡವು ಅಧ್ಯಯನ ನಡೆಸಿ ತನ್ನ ವರದಿಯನ್ನು ಪ್ರಕಟಿಸಿದೆ.

ಅಧ್ಯಯನದ ಪ್ರಕಾರ.. ವಯಸ್ಕರಿಗೆ ನಿದ್ರೆ ನಿರ್ವಹಣೆ ಮತ್ತು ದುರಸ್ತಿಗೆ ಅಗತ್ಯವಾಗಿದೆ. ಆದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಬಹಳ ಮುಖ್ಯ. ಮೆದುಳಿನ ಬೆಳವಣಿಗೆಗೆ ಮತ್ತು ಸಿನಾಪ್ಟಿಕ್ (synaptic connections) ಸಂಪರ್ಕಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಸಂಶೋಧಕರು ಇಲಿಗಳ ಮೇಲೆ ಪರೀಕ್ಷೆ ನಡೆಸಿದ್ದಾರೆ. ಕಳಪೆ ನಿದ್ರೆಯ ಪರಿಣಾಮವು ವಯಸ್ಕರಿಗಿಂತ ಯುವ ಇಲಿಗಳ ಮೆದುಳಿನ ಮೇಲೆ ಹೆಚ್ಚು ಬೀರುತ್ತದೆ ಅನ್ನೋದನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಮಕ್ಕಳ ಮೆದುಳು ನಿದ್ರೆಯ ಕೊರತೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಅನ್ನೋದನ್ನು ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಬಗ್ಗೆ ಖ್ಯಾತ ಜ್ಯೋತಿಷಿಯಿಂದ ಸೂಪರ್ ಭವಿಷ್ಯ; RCB ಅಭಿಮಾನಿಗಳಿಗೂ ಖುಷಿ ಸುದ್ದಿ..!

ನರ ಮಂಡಲದ ಮೇಲೆ ಎಫೆಕ್ಟ್..!
ಮಕ್ಕಳಲ್ಲಿ ನಿದ್ರಾಭಂಗ ಮತ್ತು ನರಗಳ ಬೆಳವಣಿಗೆ ಮೇಲೂ ಪರಿಣಾಮ ಬೀರಲಿದೆ ಅಂತಾ ಅಧ್ಯಯನ ಹೇಳಿದೆ. ಸಂಶೋಧಕರು ಇಲಿಗಳನ್ನು ಪರೀಕ್ಷಿಸಿದಾಗ ನಿದ್ರೆಯ ಕೊರತೆಯು ಮೆದುಳಿನಲ್ಲಿರುವ ಕ್ಯಾಸ್ ಪ್ರೋಟೀನ್‌ಗಳ (Cas protein) ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು ಕಂಡುಕೊಂಡಿದ್ದಾರೆ. ಇದು ಕಲಿಕೆ ಮತ್ತು ಸ್ಮರಣೆಗೆ ಅವಶ್ಯಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment