newsfirstkannada.com

VIDEO: ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌.. ಜಾಮ್‌ನಗರಕ್ಕೆ ಪಾಪ್ ಸಿಂಗರ್ ರಿಹಾನ್ನಾ ಎಂಟ್ರಿ!

Share :

Published February 29, 2024 at 8:41pm

Update February 29, 2024 at 8:44pm

  ಜಾಮ್‌ನಗರದಲ್ಲಿ ಅಂಬಾನಿ ಮಗನ ಪ್ರೀ ವೆಡ್ಡಿಂಗ್‌ಗೆ ಗಣ್ಯರ ಆಗಮನ

  ಅಂಬಾನಿ ಮದುವೆ ಸಂಭ್ರಮ ಹೆಚ್ಚಿಸಿದ ಖ್ಯಾತ ಪಾಪ್‌ ಸಿಂಗರ್ ರಿಹಾನ್ನಾ

  ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಉತ್ಸವದಲ್ಲಿ ರಿಹಾನ್ನಾ ಕಾರ್ಯಕ್ರಮ

ಜಾಮ್‌ನಗರ: ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಂಭ್ರಮಕ್ಕೆ ಗುಜರಾತ್‌ನ ಜಾಮ್‌ನಗರ ಸಕಲ ರೀತಿಯಲ್ಲೂ ಸಜ್ಜಾಗಿದೆ. ನಾಳೆಯಿಂದ ಮೂರು ದಿನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್‌ ಜೋಡಿ ಮಿಂಚಲಿದ್ದು, ದೇಶ, ವಿದೇಶದ ಗಣ್ಯರು ಇದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಎಂದೂ ಕಂಡರಿಯದ ಅದ್ಧೂರಿ ಸಂಭ್ರಮಕ್ಕೆ ಅಂಬಾನಿ ಫ್ಯಾಮಿಲಿ ಸಖತ್ ಪ್ಲಾನ್ ಮಾಡಿದೆ.

ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್ ಉತ್ಸವದ ಹಿನ್ನೆಲೆಯಲ್ಲಿ ಖ್ಯಾತ ಪಾಪ್‌ ಸಿಂಗರ್ ರಿಹಾನ್ನಾ ಅವರನ್ನು ಗುಜರಾತ್‌ಗೆ ಕರೆಸಲಾಗಿದೆ. ರಿಹಾನ್ನಾ ಅವರು ಈಗಾಗಲೇ ಜಾಮ್‌ನಗರಕ್ಕೆ ಆಗಮಿಸಿದ್ದು, ಪಾಪ್ ಸಿಂಗರ್‌ ಎಂಟ್ರಿ ಕೊಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: 51 ಸಾವಿರ ಹಳ್ಳಿ ಜನರಿಗೆ ಅಂಬಾನಿ ಫ್ಯಾಮಿಲಿ ಔತಣಕೂಟ.. ಎಷ್ಟು ದಿನ ನಡೆಯುತ್ತೆ ಈ ಅನ್ನ ಸೇವಾ?

ಮಾರ್ಚ್ 1ರಿಂದಲೇ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌ ಸಂಭ್ರಮಗಳು ಶುರುವಾಗಲಿದೆ. ಪಾಪ್ ರಾಣಿ ರಿಹಾನ್ನಾ ಅವರು ಮಾರ್ಚ್‌ 2ರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ರಿಹಾನ್ನಾ ಅವರಿಗೆ ಜಗತ್ತಿನೆಲ್ಲೆಡೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದು, ಅಂಬಾನಿ ಮಗನ ಮದುವೆಯಲ್ಲಿ ಇವರ ಕಾರ್ಯಕ್ರಮ ಗಮನ ಸೆಳೆಯಲಿದೆ.

ರಿಹಾನ್ನಾ ಸೇರಿದಂತೆ ಅನೇಕ ದೇಶ, ವಿದೇಶದ ಕಲಾವಿದರು ಅಂಬಾನಿ ಅವರ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಡೇವಿಡ್ ಬ್ಲೇನ್, ಅರಿಜಿತ್ ಸಿಂಗ್, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಲವು ಕಲಾವಿದರ ಸಂಗೀತ ಕಾರ್ಯಕ್ರಮ ನಿಗದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌.. ಜಾಮ್‌ನಗರಕ್ಕೆ ಪಾಪ್ ಸಿಂಗರ್ ರಿಹಾನ್ನಾ ಎಂಟ್ರಿ!

https://newsfirstlive.com/wp-content/uploads/2024/02/Rihanna.jpg

Load More