ಇತಿಹಾಸ ಸೃಷ್ಟಿಸಿದ ಪಾಪ್ ಸ್ಟಾರ್ ಕೇಟಿ ಪೆರಿಽ.. 6 ಮಹಿಳೆಯರ ಮೊದಲ ಗಗನಯಾನ ಹೇಗಿತ್ತು? VIDEO

author-image
admin
Updated On
ಇತಿಹಾಸ ಸೃಷ್ಟಿಸಿದ ಪಾಪ್ ಸ್ಟಾರ್ ಕೇಟಿ ಪೆರಿಽ.. 6 ಮಹಿಳೆಯರ ಮೊದಲ ಗಗನಯಾನ ಹೇಗಿತ್ತು? VIDEO
Advertisment
  • ಪಾಪ್ ಸ್ಟಾರ್ ಕೇಟಿ ಪೆರಿಽ ಸೇರಿದಂತೆ 6 ಮಹಿಳೆಯರಿದ್ದ ತಂಡ
  • ಸಂಪೂರ್ಣ ಮಹಿಳೆಯರೇ ಇದ್ದ ಬ್ಲೂ ಆರಿಜಿನ್ ರಾಕೆಟ್ ಪ್ರಯಾಣ
  • ವಾಟ್ ಎ ವಂಡರ್​ಫುಲ್ ವರ್ಲ್ಡ್ ಸಾಂಗ್ ಹಾಡಿದ ಪಾಪ್ ಸ್ಟಾರ್‌!

ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 9 ತಿಂಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ವಾಪಸ್ ಆಗಿ ಒಂದು ತಿಂಗಳು ಕಳೆದಿಲ್ಲ. ಕಳೆದ ಮಾರ್ಚ್ 18ರಂದು ಸುನೀತಾ ವಿಲಿಯಮ್ಸ್‌ ಸೇಫ್‌ ಆಗಿ ಬಂದ ಅದ್ಭುತ ಕ್ಷಣಗಳು ಇನ್ನೂ ಎಲ್ಲರ ಕಣ್ಣ ಮುಂದಿದೆ. ಇದೀಗ ಬಾಹ್ಯಾಕಾಶದಲ್ಲಿ ಮತ್ತೊಂದು ರೋಮಾಂಚನಕಾರಿಯಾದ ಸಾಹಸ ನಡೆದಿದೆ.


">April 15, 2025

ಪಾಪ್ ಸ್ಟಾರ್ ಕೇಟಿ ಪೆರಿಽ ಸೇರಿದಂತೆ 6 ಮಹಿಳೆಯರಿದ್ದ ತಂಡ ಇದೇ ಮೊದಲ ಬಾರಿಗೆ ಸುರಕ್ಷಿತವಾಗಿ ಅಂತರಿಕ್ಷ ಯಾನ ಮಾಡಿ ಬಂದಿದೆ. ಸಂಪೂರ್ಣ ಮಹಿಳೆಯರೇ ಇದ್ದ ಬ್ಲೂ ಆರಿಜಿನ್ ರಾಕೆಟ್ ಸುಮಾರು 11 ನಿಮಿಷಗಳ ಕಾಲ ಸ್ಪೇಸ್​ನಲ್ಲಿ ಪ್ರಯಾಣಿಸಿದೆ.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜಾಸ್​ರ ಬ್ಲೂ ಆರಿಜಿನ್ ರಾಕೆಟ್‌ನಲ್ಲಿ 6 ಮಹಿಳೆಯರ ತಂಡ ಗಗನಯಾನ ಮಾಡಿದೆ. ಪಾಪ್ ಸಿಂಗರ್ ಕೇಟಿ ಪೆರಿಽ, ಜೆಫ್ ಬೆಜಾಸ್​ ಫಿಯಾನ್ಸೆ ಲಾರೆನ್ಸ್ ಶಾಂಚೆಝ್, ಸಿಬಿಎಸ್​ನ ನಿರೂಪಕಿ ಗೇಯ್ಲ್ ಕಿಂಗ್, ನಿರ್ಮಾಪಕಿ ಕೆರೈನ್ ಫ್ಲಿನ್, ನಾಸಾ ಮಾಜಿ ರಾಕೆಟ್ ವಿಜ್ಞಾನಿ ಆಯೆಶಾ ಬೋಯಿ, ಅಮಾಂಡಾ ನುಯೆನ್ ಅವರ 11 ನಿಮಿಷಗಳ ಪ್ರಯಾಣ ಯಶಸ್ವಿಯಾಗಿದೆ.


">April 14, 2025

ಭೂಮಿಯಿಂದ 100 ಕಿಲೋ ಮೀಟರ್ ದೂರದ ಅಂತರಿಕ್ಷದಲ್ಲಿ ಪ್ರಯಾಣ ಮಾಡಿದ ಈ ಗಗನಯಾತ್ರಿಗಳು 4 ನಿಮಿಷಗಳ ಕಾಲ ಅಂತರಿಕ್ಷದ ಝೀರೋ ಗ್ರ್ಯಾವಿಟಿಯಲ್ಲಿದ್ದರು. ಕೇಟಿ ಪೆರ್ರಿ ಹಾಗೂ 6 ಮಹಿಳೆಯರ ತಂಡ ಅಂತರಿಕ್ಷದಲ್ಲಿ ಹಾರಾಟ ನಡೆಸುವಾಗ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಹಲ್ಲುಗಳ ಹುಳುಕು, ನೋವು, ಮುರಿದ್ರೆ ಚಿಂತೆ ಬೇಡ.. ವಿಜ್ಞಾನಿಗಳಿಂದ ನಿಮಗೆ ಗುಡ್​ನ್ಯೂಸ್​! 

ರಾಕೆಟ್‌ನಲ್ಲಿದ್ದಾಗ ಪಾಪ್ ಸ್ಟಾರ್ ಕೇಟಿ ಪೆರಿಽ ಅವರು ಹಾಡು ಹಾಡಿದ್ದಾರೆ. ಲೂಯಿಸ್ ಆರ್ಮ್ ಸ್ಟ್ರಾಂಗ್​ನ ವಾಟ್ ಎ ವಂಡರ್​ಫುಲ್ ವರ್ಲ್ಡ್ ಸಾಂಗ್ ಹಾಡಿ ಸಂತಸಗೊಂಡಿದ್ದಾರೆ. 6 ಮಹಿಳೆಯರ ಗಗನಯಾತ್ರೆಯ ವಿಡಿಯೋ ನೋಡಲು ಮೈ ಜುಮ್ಮೆನ್ನಿಸುವಂತಿದೆ.

publive-image

11 ನಿಮಿಷಗಳ ಕಾಲ ಸ್ಪೇಸ್‌ನಲ್ಲಿ ಹಾರಾಟ ನಡೆಸಿದ ಕ್ರ್ಯೂ ಪ್ಯಾರಾಚ್ಯೂಟ್ ಮೂಲಕ ಭೂಮಿಗೆ ಮರಳಿದೆ. ಕ್ಯಾಪ್ಸುಲ್​ನ ಬಾಗಿಲು ತೆರೆಯುತ್ತಿದ್ದಂತೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜಾಸ್​ 6 ಮಹಿಳಾ ಗಗನಯಾತ್ರಿಗಳನ್ನು ಸ್ವಾಗತಿಸಿದ್ದಾರೆ.

publive-image

ಪಾಪ್ ಸ್ಟಾರ್ ಕೇಟಿ ಪೆರ್ರಿ ಅವರು ರಾಕೆಟ್‌ನಿಂದ ಕೆಳಗಿಳಿಯುತ್ತಿದ್ದಂತೆ ಭೂಮಿಗೆ ಮುತ್ತಿಟ್ಟಿದ್ದಾರೆ. 6 ಮಹಿಳಾ ಗಗನಯಾತ್ರಿಗಳು ಅಂತರಿಕ್ಷಕ್ಕೆ ಹೋಗಿ ಬಂದಿದ್ದರ ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ.

publive-image

ಗಗನಯಾನದ ಬಳಿಕ ಪ್ರತಿಕ್ರಿಯೆ ನೀಡಿರುವ ಕೇಟಿ ಪೆರ್ರಿ ಅವರು ಸೋಷಿಯಲ್ ಮೀಡಿಯಾ Xನಲ್ಲಿ ಒಂದೇ ಒಂದು ಸಾಲನ್ನು ಬರೆದು ಪೋಸ್ಟ್ ಮಾಡಿದ್ದಾರೆ. ನನ್ನ ಮನೆಯಂತಹ ಜಾಗ ಮತ್ತೊಂದಿಲ್ಲ ಎಂದು ಪೋಸ್ಟ್ ಮಾಡಿರುವ ಕೇಟಿ ಪೆರ್ರಿ ಭೂಮಿಗೆ ಭೂಮಿಗೆ ಸಾಟಿ ಅನ್ನೋ ಸಂದೇಶ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment