Rest in Peace: ಪೋಪ್ ಫ್ರಾನ್ಸಿಸ್ ಇನ್ನಿಲ್ಲ.. ವ್ಯಾಟಿಕನ್ ಸಿಟಿಯಿಂದ ಆಘಾತಕಾರಿ ಸುದ್ದಿ!

author-image
admin
Updated On
Rest in Peace: ಪೋಪ್ ಫ್ರಾನ್ಸಿಸ್ ಇನ್ನಿಲ್ಲ.. ವ್ಯಾಟಿಕನ್ ಸಿಟಿಯಿಂದ ಆಘಾತಕಾರಿ ಸುದ್ದಿ!
Advertisment
  • ಈಸ್ಟರ್ ಆಚರಣೆಯ ಬೆನ್ನಲ್ಲೇ ವ್ಯಾಟಿಕನ್ ಸಿಟಿಯಲ್ಲಿ ಶೋಕ
  • ಅಧಿಕೃತ ನಿವಾಸ ಕಾಸಾ ಸಾಂಟಾ ಮಾರ್ಟಾದಲ್ಲಿ ಕೊನೆಯುಸಿರು
  • ಪೋಪ್ ಫ್ರಾನ್ಸಿಸ್‌ ನಿಧನಕ್ಕೆ ಕೋಟ್ಯಾಂತರ ಮಂದಿಯಿಂದ ಕಂಬನಿ

ಈಸ್ಟರ್ ಆಚರಣೆಯ ಬೆನ್ನಲ್ಲೇ ವ್ಯಾಟಿಕನ್ ಸಿಟಿಯಿಂದ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಫ್ರಾನ್ಸಿಸ್‌ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಪೋಪ್ ಫ್ರಾನ್ಸಿಸ್‌ ನಿಧನಕ್ಕೆ ಜಗತ್ತಿನಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಪೋಪ್‌ ಕಳೆದುಕೊಂಡ ರೋಮ್‌ನಲ್ಲಿ ಶೋಕ ಸಾಗರ ಮಡುಗಟ್ಟಿದೆ.

88 ವರ್ಷದ ಪೋಪ್ ಫ್ರಾನ್ಸಿಸ್ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪೋಪ್‌ ಇನ್ನಿಲ್ಲ ಅನ್ನೋ ಸುದ್ದಿಯನ್ನ ವ್ಯಾಟಿಕನ್ ವಿಡಿಯೋ ಸಂದೇಶದ ಮೂಲಕ ಸ್ಪಷ್ಟಪಡಿಸಿದೆ.

publive-image

ಪೋಪ್ ಫ್ರಾನ್ಸಿಸ್ ಅವರ ತಮ್ಮ ಅಧಿಕೃತ ನಿವಾಸ ಕಾಸಾ ಸಾಂಟಾ ಮಾರ್ಟಾದಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಅಮೆರಿಕ ಉಪಾಧ್ಯಕ್ಷ JD ವ್ಯಾನ್ಸ್‌ ಮಕ್ಕಳ ತುಂಟಾಟ.. ಸ್ಪೆಷಲ್‌ ಫೋಟೋ, ವಿಡಿಯೋ ಇಲ್ಲಿದೆ! 

ಪೋಪ್ ಫ್ರಾನ್ಸಿಸ್ ಅವರು ನ್ಯಾಯ, ಕರುಣೆ ಮತ್ತು ಸಾಮರಸ್ಯದ ಪ್ರತಿರೂಪದಂತಿದ್ದರು. ನಿನ್ನೆಯಷ್ಟೇ ರೋಮ್‌ನಲ್ಲಿ ಈಸ್ಟರ್ ಸಂಡೇ ಆಚರಣೆ ಮಾಡಲಾಗಿತ್ತು. ಈಸ್ಟರ್‌ ಸಂಭ್ರಮದ ಮರು ದಿನವೇ ಪೋಪ್ ಫ್ರಾನ್ಸಿಸ್‌ ಅಗಲಿದ್ದು, ಕೋಟ್ಯಾಂತರ ಮಂದಿ ಕಂಬನಿ ಮಿಡಿಯುತ್ತಿದ್ದಾರೆ. ಜಗತ್ತಿನಾದ್ಯಂತ ಪೋಪ್ ಫ್ರಾನ್ಸಿಸ್‌ ಅವರಿಗೆ ಅನುಯಾಯಿಗಳಿದ್ದು, ಸಂತಾಪ ಸೂಚಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment