/newsfirstlive-kannada/media/post_attachments/wp-content/uploads/2025/04/PopeFrancis-1.jpg)
ಪೋಪ್ ಫ್ರಾನ್ಸಿಸ್ ಅಂದ್ರೆ ಜನರಿಗೆ ನೆರಳು ಕೊಡುವ ಮರ. ನಿಸ್ವಾರ್ಥ ಮನಸ್ಸಿನ ದೊರೆ. ತಂಪಾಗಿ ಮಳೆ ಸುರಿಯುವ ಸೋನೆ, ಹಿಂದುಳಿದ ಬಡಜನರ ಪಾಲಿಗೆ ಆತನೇ ದೈವ. ಬದುಕಿನಲ್ಲಿನ ಸುಖ ಶಾಂತಿ, ನೆಮ್ಮದಿಗಳಿರುವ ಆಟಕ್ಕೆ ಫ್ರಾನ್ಸಿಸ್ ಚಾಂಪಿಯನ್. ಈಗಲೂ ವ್ಯಾಟಿಕನ್ ಸಿಟಿಯ ಮಂದಿಗೆ ಪೋಪ್ ಫ್ರಾನ್ಸಿಸ್ ಚಾಂಪಿಯನ್ನೇ.
ಪೋಪ್ ಫ್ರಾನ್ಸಿಸ್ ನಿಜವಾದ ಬದುಕಿನ ದಾರಿ ತುಳಿದಾಗಿನಿಂದಲೇ, ತನ್ನ ದೃಷ್ಟಿಕೋನವನ್ನ ಬದಲಾಯಿಸಿಕೊಂಡಿದ್ದರು. ಚರ್ಚ್ಗಳು ಬಡವರಿಗಾಗಿ ಉಗಮವಾಗಬೇಕು ಬಡವರ ಪಾಲಿನ ವಿಶ್ರಾಂತಿ, ಮನಃಶಾಂತಿಯ ಗೃಹಗಳಾಗಬೇಕು ಅನ್ನೋ ಆಶಯ ಹೊಂದಿದ್ದರು.
ಫ್ರಾನ್ಸಿಸ್‌ಗೆ ಪ್ರಪಂಚಾದಾದ್ಯಂತ ಅಭಿಮಾನಿ, ಅನುಯಾಯಿಗಳ ಬಳಗ ಇದ್ದರೂ, ಐಷಾರಾಮಿ ಬದುಕನ್ನ ಅತಿ ವಿಲಾಸವಾಗಿ ಅನುಭವಿಸುವ ಅವಕಾಶ ಇದ್ದರೂ. ತಾನೂ ಆ ಬದುಕಿನ ಸುಳಿಗೆ ಸುಳಿದಿಲ್ಲ.ಅರಮೆನೆ ವಾಸ ಅದ್ದೂರಿಯಾಗಿ ಸಿದ್ಧವಿದ್ದರೂ, ಸರಳ ಪಾದ್ರಿಗಳ ಅತಿಥಿ ಗೃಹದಲ್ಲಿ ಫ್ರಾನ್ಸಿಸ್ ಖುಷಿಯಾಗಿ ವಾಸ ಮಾಡುತ್ತಿದ್ದರು. ಆ ಸ್ಥಾನದಲ್ಲಿದ್ದವರ ಐಷಾರಾಮಿ ಬದುಕಿಗೆ, ಫ್ರಾನ್ಸಿಸ್ ಅವರ ಬದುಕು ವಿರುದ್ಧವಾಗಿತ್ತು.
ದುಷ್ಟರ ವಿರುದ್ಧ ದಿಟ್ಟ ಹೆಜ್ಜೆ.. ಗಟ್ಟಿ ನಿರ್ಧಾರ!
ವ್ಯಾಟಿಕನ್ ಒಳಗೆ ಮತ್ತು ಹೊರಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಾಗಲೂ, ಅವರ ದಿಟ್ಟ ಹೆಜ್ಜೆಗಳು ಮಾದರಿಯಾಗಿದ್ದವು. ಡಿವೋರ್ಸ್ ಆದವರಿಗೆ, ಕ್ಯಾಥೊಲಿಕ್ ಸಲಿಂಗಕಾಮಿ ವಿಧಾನ ಅನುಸರಿಸುವವರಿಗೆ, ಆರ್ಥಿಕ ವ್ಯವಸ್ಥೆ ಮತ್ತು ಪಾದ್ರಿಗಳ ಲೈಂಗಿಕ ದೌರ್ಜನ್ಯದ ಬೆದರಿಕೆ ವಿರುದ್ಧ ಪೋಪ್ ಫ್ರಾನ್ಸಿಸ್ ದಿಟ್ಟ ಸುಧಾರಣೆಗಳನ್ನ ಕೈಗೊಂಡಿದ್ದರು. ಇದು ತೀವ್ರ ಸಂಪ್ರದಾಯವಾದಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಮಸ್ಯೆಗಳನ್ನ ನೇರವಾಗಿ ಎದುರಿಸುವ ಪೋಪ್ ಫ್ರಾನ್ಸಿಸ್ ಶೈಲಿ, ಕೆಲ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. 2013 ರಲ್ಲಿ ಕ್ಯಾಥೋಲಿಕ್ ಚರ್ಚ್ ನೇಮಕಾತಿಯ ವಿಷ್ಯದಲ್ಲಿ, ಶಿಶುಕಾಮಿ ಪಾದ್ರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಕರೆ ಕೊಟ್ಟಿದ್ದರು.
ಮಹಿಳೆಯರಿಗೆ ನಾಯಕತ್ವದ ಸ್ಥಾನ ಕೊಟ್ಟಿದ್ದ ಫ್ರಾನ್ನಿಸ್
ವ್ಯಾಟಿಕನ್‌ನಲ್ಲಿ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರಿದ್ದರೇ ಭೂಷಣ ಅಂತ ನಂಬಿದ್ದ ವ್ಯಕ್ತಿ ಫ್ರಾನ್ಸಿಸ್. ವಾರಸತ್ವದ ಆಡಳಿತಗಳಿಗೆ, ವಾರಸತ್ವ ಹೆಸರಲ್ಲಿ ಅಧಿಕಾರ ನಡೆಸುವವರ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ, 20 ಮಹಿಳೆಯರು ನಾಯಕತ್ವದ ಸ್ಥಾನಗಳನ್ನ ತುಂಬಿದ್ದರು. ಇನ್ನೂ ಅಚ್ಚರಿ ಏನಂದರೆ.. ಈ ವರ್ಷದ ಆರಂಭದಲ್ಲಿ, ಕ್ಯಾಥೋಲಿಕ್ ಚರ್ಚ್‌ನ ಎಲ್ಲಾ ಧಾರ್ಮಿಕ ಆದೇಶಗಳಿಗಂತಲೇ, ಜವಾಬ್ದಾರಿ ವಿಭಾಗದ ಮುಖ್ಯಸ್ಥರಾಗಿ ಮೊದಲ ಮಹಿಳೆ ಸಿಸ್ಟರ್ ಸಿಮೋನಾ ಬ್ರಾಂಬಿಲ್ಲಾ ಅವರನ್ನ ನೇಮಿಸಿದ್ದರು.
ಇದನ್ನೂ ಓದಿ: ಪೋಪ್ ಫ್ರಾನ್ಸಿಸ್‌ಗೆ ಗೌರವ ನಮನ.. ‘ಐಫೆಲ್ ಟವರ್’ಗೆ ಕತ್ತಲು; ಶೋಕ ಸಾಗರ!
ಯುದ್ಧದ ಸಮಯದಲ್ಲಿ ಶಾಂತಿ ಸಮರ ಸಾರಿದ್ದ ಫ್ರಾನ್ಸಿಸ್!
ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನ ಕದಲಿಸಿದ್ದ ಇಸ್ರೇಲ್-ಗಾಜಾ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧದ ನಡುವೆ, ಶಾಂತಿ ನೆಲೆಸುವಂತೆ ಫ್ರಾನ್ಸಿಸ್ ಪ್ರಯತ್ನಗಳನ್ನ ನಡೆಸಿದ್ದರು. 2022 ರಲ್ಲಿ ರಷ್ಯಾ ಉಕ್ರೇನನ್ನು ಆಕ್ರಮಿಸಿದಾಗಿನಿಂದ, ಫ್ರಾನ್ಸಿಸ್ ಪ್ರತಿ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಗಾಗಿ ಹೋರಾಡುತ್ತಾ ಮನವಿಗಳನ್ನ ಮಾಡಿದ್ದರು. ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯನ್ನು ಸಹ ಫ್ರಾನ್ಸಿಸ್ ಖಡಕ್ಕಾಗಿ ಟೀಕಿಸಿದ್ದರು.
ಫ್ರಾನ್ಸಿಸ್.. ವಿದೇಶ ಪ್ರವಾಸಗಳಲ್ಲಿ ಕಾಣಿಸಿಕೊಂಡರೇ, ಅವ್ರನ್ನ ದೈವ ಮಾನವನಂತೆ ಬರಮಾಡಿಕೊಳ್ಳಲಾಗುತ್ತೆ. ಸ್ಟಾರ್ ಆಫ್ ದಿ ಇಯರ್ ಅನ್ನು ದಾರಿಯಲ್ಲಿ, ಪ್ರತಿ ವರ್ಷ ಪೋಪ್ ಫ್ರಾನ್ಸಿಸ್ ಇರುತ್ತಿದ್ದರು. ಪ್ರತಿ ಮ್ಯಾಗ್ಜಿನ್ಗಳಲ್ಲಿ, ಸೆಲೆಬ್ರಿಟಿ ವೆಬ್ಸೈಟ್ಗಳಲ್ಲಿ, ಫ್ರಾನ್ಸಿಸ್ ಮುಖಚಿತ್ರ ಭಾರಿ ಸದ್ದು ಮಾಡಿತ್ತು.
ಡಬಲ್ ನ್ಯುಮೋನಿಯಾ ಕಾಯಿಲೆಯಿಂದ ಫ್ರಾನ್ಸಿಸ್ ನಿಧನ
88 ವರ್ಷದ ಪೋಪ್ ಫ್ರಾನ್ಸಿಸ್ ಡಬಲ್ ನ್ಯುಮೋನಿಯಾ ಕಾಯಿಲೆಯಿಂದ ಬಳಲಿ, ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದರು. ಆಗ ಮಿಲಿಯನ್ ಗಟ್ಟಲೇ ಅಭಿಮಾನ ಮನಸ್ಸುಗಳು, ಅವರು ಚೇತರಿಸಿಕೊಳ್ಳಲ್ಲಿ ಅಂತ ಬೇಡಿದ್ದರು. ವಲಸೆ, ಯುದ್ಧ, ಅಸಮಾನತೆ, ತಾರತಮ್ಯಗಳ ಹೀಗೆ ಅನೇಕ ಮಾನವೀಯ ಬಿಕ್ಕಟ್ಟುಗಳ ವಿರುದ್ಧ ಧ್ವನಿ ಎತ್ತಿದ್ದ ಕಂಠ.. ಮೂಕವಾಗಿದೆ.
ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಅಂಗಳದಲ್ಲಿ ಸಾವಿರಾರು ಭಕ್ತರು ಸೇರಿ "ಹ್ಯಾಪಿ ಈಸ್ಟರ್" ಅಂತ ಆಚರಣೆ ನಡೆಸುವಾಗ,ಅವರನ್ನ ಹಾರೈಸಲು ವೀಲ್‌ಚೇರ್‌ನಲ್ಲಿ ಹೊರಬಂದಿದ್ದ ಫ್ರಾನ್ಸಿಸ್. ಅದೇ ಅವರ ಕೊನೆ ದರ್ಶನವಾಗುತ್ತೆ ಅಂತ ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಡಬಲ್ ನ್ಯುಮೋನಿಯಾ ಚಿಕಿತ್ಸೆ ಪಡೆದ ನಂತರ, ಆಸ್ಪತ್ರೆಯಿಂದ ಬಂದಿದ್ದ ವಾರಗಳು ಕಳೆದ ಮೇಲೆ ಅಂದ್ರೆ ಸೋಮವಾರ ಪೋಪ್ ಫ್ರಾನ್ಸಿಸ್ ನಿಧನ ಹೊಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ