/newsfirstlive-kannada/media/post_attachments/wp-content/uploads/2025/05/panchayat_season_4_1.jpg)
ಇಂಡಿಯಾಸ್ ಮೋಸ್ಟ್ ಎಂಟರ್​ಟೈನರ್​ ಸಿರೀಸ್ ಪಂಚಾಯತ್​ ಸೀಸನ್​ 4 ಟೀಸರ್ ರಿಲೀಸ್ ಆಗಿದೆ. ಸೀಸನ್​ 3 ನೋಡಿದವರೆಲ್ಲ. ಯಾವಾಗಪ್ಪ ಸೀಸನ್- 4 ಬರುತ್ತೆ ಅಂತ ಚಾತಕ ಪಕ್ಷಿಯಂತೆ ಕಾಯುದ್ದರು. ಆದ್ರೆ ಕೊನೆಗೂ ಸೀಸನ್​- 4 ಟೀಸರ್ ರಿಲೀಸ್ ಆಗಿದೆ. ಜುಲೈ​ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.
/newsfirstlive-kannada/media/post_attachments/wp-content/uploads/2025/05/panchayat_season.jpg)
ಟೀಸರ್​ನಲ್ಲಿ ಕತೆಯ ಸಣ್ಣ ಸುಳಿವು ಸಿಕ್ಕಿದ್ದು, ಈ ಬಾರಿ ಮೊದಲ 3 ಸೀಸನ್​ಕ್ಕಿಂತ ಡಬಲ್ ಎಂಟರ್​​ಟೈನ್​ಮೆಂಟ್ ಪಕ್ಕಾ ಅನ್ನಬಹುದು. ಯಾಕಂದ್ರೆ ಈ ಸೀಸನ್​ನಲ್ಲಿ ಪಂಚಾಯತ್ ಎಲೆಕ್ಷನ್ ನಡೆಯಲಿದ್ದು, ಕತೆ ಈ ಎಲೆಕ್ಷನ್ ಸುತ್ತಾನೆ ಹೆಣೆಯಲಾಗಿದೆ. ಗ್ರಾಮೀಣ ಭಾಗದ ಪಂಚಾಯತಿಗಳಲ್ಲಿ ನಡೆಯೋ ಘಟನೆಗಳಿಗೆ ಹಾಸ್ಯದ ಟಚ್ ಕೊಟ್ಟಿರೋ ಕಥೆ ಈಗಾಗಲೇ ಜನ ಮನ್ನಣೆ ಗಳಿಸಿದೆ.
ಅದ್ರಲ್ಲೂ ಪಂಚಾಯತ್ ಆಫೀಸರ್, ರಿಂಕು, ಭೂಷಣ್​, ಪ್ರಧಾನ್​ ಜೀ ಕ್ಯಾರೆಕ್ಟರ್ ಜನರನ್ನ ನಗೆಗಡಲಲ್ಲಿ ತೇಲಿಸಿವೆ. ಸೋ 3 ಸೀಸನ್​ ಪ್ರೈಮ್​​ನಲ್ಲಿ ಬ್ಲಾಕ್ ಬ್ಲಸ್ಟರ್ ಆಗಿವೆ. ಈಗ ನಾಲ್ಕನೇ ಸೀಸನ್ ಟೀಸರ್ ರಿಲೀಸ್ ಆಗಿ ಫ್ಯಾನ್ಸ್ ಕೂಡ ಅಬ್ಬಾ ಕಾಯ್ತಿದ್ದ ಸಿರೀಸ್ ರಿಲೀಸ್ ಡೇಟ್ ಬಂತಲ್ಲ ಅಂತ ಖುಷ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/05/panchayat_season_4.jpg)
ಜೀತೆಂದ್ರ ಕುಮಾರ್, ನೀನಾಗುಪ್ತಾ, ರಘುಭೀರ್ ಯಾದವ್, ಪೈಸಲ್ ಮಲ್ಲಿಕ್, ಈ ಸಿರೀಸ್​ ನಲ್ಲಿ ಕಾಣಿಸಿಕೊಂಡಿದ್ದು, ಈಗ ಸೀಸನ್​ ಐದಕ್ಕಾಗಿ ಜನ ಕಾತುರದಿಂದ ಕಾಯ್ತಿರೋದಂತು ಸುಳಲ್ಲ. ಪಂಚಾಯತ್ ಎಲೆಕ್ಷನ್​ಲ್ಲಿ ಭೂಷಣ್ ಗೆಲ್ತನಾ ಅಥವಾ ಪ್ರಧಾನ್ ಜೀ ಗೆಲ್ತಾರಾ ಎಂದು ಸಿರೀಸ್​​ ರಿಲೀಸ್ ಆದ್ಮೆಲೆ ಗೊತ್ತಾಗಲಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us