/newsfirstlive-kannada/media/post_attachments/wp-content/uploads/2024/10/ramachari1.jpg)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಮಾಚಾರಿ ಸೀರಿಯಲ್ ವೀಕ್ಷಕರ ಫೇವರೆಟ್ ಆಗಿ ಉಳಿದುಕೊಂಡಿದೆ. ಇದೇ ಧಾರಾವಾಹಿಯಲ್ಲಿ ಇತ್ತೀಚೆಗೆ ಶುರುವಾಗಿದ್ದ ರಾಮಾಚಾರಿ ಹಾಗೂ ಚಾರು ಮದುವೆಯ ರೋಚಕ ತಿರುವು ಕೊನೆಗೂ ಅಂತ್ಯ ಕಂಡಿದೆ. ಇದೀಗ ವೀಕ್ಷಕರ ನೆಚ್ಚಿನ ಸೀರಿಯಲ್ ರಾಮಾಚಾರಿ ಯಶಸ್ವಿ 700 ಸಂಚಿಕೆಗಳನ್ನ ಪೂರೈಸಿದೆ. ಈಗಿನ ಕಾಲಘಟ್ಟದಲ್ಲಿ 200, 300 ಸಂಚಿಕೆ ಪೂರೈಸುವುದೇ ದೊಡ್ಡ ಸಾವಲಾಗಿರೋವಾಗ ರಾಮಾಚಾರಿ ಡೇ ಒನ್ನಿಂದಲೂ ಕಲರ್ಸ್ ವಾಹಿನಿಯ ನಂಬರ್ ಒನ್ ಧಾರಾವಾಹಿಯಾಗಿ ಮುಂದುವರೆದಿದೆ.
ಇದನ್ನೂ ಓದಿ:ಮೌನ ಮುರಿದ ಕಿಚ್ಚ ಸುದೀಪ್.. ಬಿಗ್ಬಾಸ್ನಲ್ಲಿ ಅವಮಾನ ಆಗಿದ್ದು ನಿಜನಾ? ಡೈರೆಕ್ಟರ್ ಪ್ರಕಾಶ್ ಬಗ್ಗೆ ಹೇಳಿದ್ದೇನು?
ಸ್ಟೋರಿ ಲೈನ್ನ ವಿಶೇಷವಾಗಿ ಹೆಣೆಯುತ್ತ ಬಂದಿದ್ದಾರೆ. ರಿಚ್ ಬಿಸಿನೆಸ್ ಮ್ಯಾನ್. ಬಡ ಕುಟುಂಬದ ನಾಯಕಿ. ಅಲ್ಲೊಂದಿಷ್ಟು ದ್ವೇಷ ಸಾಧಿಸೋ ಒಳ್ಳೆ ಮುಖವಾಡದ ಪಾತ್ರಗಳು. ಈ ತರಹದ ಸ್ಟೋರಿ ಕಾಮನ್ ಆಗಿತ್ತು. ಇದನ್ನ ಬ್ರೇಕ್ ಮಾಡಿ ರಿಚ್ ನಾಯಕಿ, ಸಂಸ್ಕಾರವಂತ ನಾಯಕ. ಇಬ್ಬರ ನಡುವಿನ ವೈರಿತ್ಯಗಳು ಹೇಗೆ ಪ್ರೀತಿ ರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ರಾಮಾಚಾರಿ ಸೊಗಸಾಗಿ ತೆರೆಗೆ ತಂದಿತು. ರಾಮಾಚಾರಿ, ಚಾರು ಪಾತ್ರಗಳನ್ನ ರಿತ್ವಿಕ್ ಹಾಗೂ ಮೌನ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಕೆಮೆಸ್ಟ್ರಿ ವರ್ಕೌಟ್ ಆಗಿದ್ದು, ಪಾತ್ರಗಳು ಆಕರ್ಷಕವಾಗಿವೆ. ಮಾನ್ಯತಾ ಹಾಗೂ ದೀಪಾ ಪಾತ್ರಗಳು ಬದಲಾಗಿರೋದು ಬಿಟ್ಟರೆ ಮಿಕ್ಕ ಎಲ್ಲ ಪಾತ್ರಗಳ ಕಲಾವಿದರು ಅವ್ರೆ ಇದಾರೆ. ಫಿಕ್ಸ್ ವೀಕ್ಷಕರು ಇರೋದಕ್ಕೆ ಇದು ಒಂದು ಪ್ಲಸ್ ಪಾಯಿಂಟ್. ಇನ್ನು ಕಿಟ್ಟಿ ಪಾತ್ರ ಹೊಸ ಮೈಲೇಜ್ ತಂದುಕೊಟ್ಟಿದೆ. ಸಾಮಾನ್ಯವಾಗಿ ಸೀರಿಯಲ್ನಲ್ಲಿ ಡಬಲ್ ಆಕ್ಟಿಂಗ್ ವರ್ಕೌಟ್ ಆಗೋದು ಕಡಿಮೆ.
ಆದ್ರೆ ರಾಮಾಚಾರಿ ವಿಷ್ಯದಲ್ಲಿ ಇದೇ ಪ್ಲಸ್. ಕಿಟ್ಟಿ ಪಾತ್ರ ಒಂದು ಹಂತದಲ್ಲಿ ಮುಗಿಸೋಕೆ ಪ್ಲಾನ್ ಮಾಡಿತ್ತು ತಂಡ. ಆದ್ರೆ ಜನರ ಅಭುತಾಪೂರ್ವ ರೆಸ್ಪಾನ್ಸ್ ನೋಡಿ ಮತ್ತೆ ಕಿಟ್ಟಿ ಯನ್ನ ಜೀವಂತ ವಾಗಿಸಿದ್ರು. ಸ್ಟೋರಿಗೆ ಹೊಸ ಹೊಸ ಆಯಾಮ ನೀಡ್ತಾ ಹೋಗ್ತಿರೋದು. ವೈಶಾಖ ಪ್ಲಾಶ್ ಬ್ಯಾಕ್ ಕತೆ. ಮಾನ್ಯತಾ ಸತ್ಯ ಬಯಲಿಗೆ ತಂದಿದ್ದು ಜನರಿಗೆ ಇಷ್ಟವಾಯ್ತು. ಈಗ ಕಿಟ್ಟಿ ಪ್ಲಾಶ್ ಬ್ಯಾಕ್ ಲವ್ ಸ್ಟೋರಿ ಯುವ ವೀಕ್ಷಕರನ್ನ ಆಕರ್ಷಿಸುತ್ತಿದೆ. ಇತ್ತ ಮಧ್ಯ ವಯಸ್ಕ ವೀಕ್ಷಕರನ್ನ ಹಿಡಿದಿಟ್ಟಿರೋದು ನಾರಾಯಣ ಆಚಾರ್ಯ ಹಾಗೂ ಸತ್ಯಭಾಮಾ ಪ್ಲಾಶ್ ಬ್ಯಾಕ್ ಸ್ಟೋರಿ. ಒಟ್ಟಿನಲ್ಲಿ ರಾಮಾಚಾರಿ ರೋರಿಂಗ್ ಮಾಡ್ತಿದ್ದು, ಹೀಗೆ ಮುಂದುವರೆದ್ರೇ ಸಾವಿರ ಸಂಚಿಕೆಯ ಹೊಸ ದಾಖಲೆ ಬರೆಯೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ