/newsfirstlive-kannada/media/post_attachments/wp-content/uploads/2025/07/San-Rechal3.jpg)
ಚೆನ್ನೈ : ಮಾಜಿ ಮಿಸ್ ಪುದುಚೇರಿ, ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ಪ್ರಾಣ ಕಳೆದುಕೊಂಡಿದ್ದಾರೆ. ಜುಲೈ 5ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಜೀವ ಕಳೆದುಕೊಂಡಿದ್ದಾರೆ. ನಿದ್ರೆ ಮಾತ್ರೆಗಳನ್ನು ಸೇವಿಸಿದ್ದ ಸ್ಯಾನ್ ರೆಚಲ್ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸ್ಯಾನ್ ರೆಚಲ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ನಾಲ್ವರೂ ಹೆಣ್ಮಕ್ಕಳೇ.. ಸರೋಜಾ ದೇವಿ ಹುಟ್ಟಿಗೆ ಕಾರಣವಾಯ್ತು ಅದೊಂದು ಪ್ರಸಾದ..!
ಸ್ಯಾನ್ ರೆಚಲ್ ಮನರಂಜನಾ ಕ್ಷೇತ್ರದಲ್ಲಿ ‘ಚರ್ಮದ ಬಣ್ಣʼದ ಆಧಾರದಲ್ಲಿ ತಾರತಮ್ಯ ಮತ್ತು ವರ್ಣಭೇದದ ವಿರುದ್ಧ ಸಾಕಷ್ಟು ಧ್ವನಿ ಎತ್ತಿದ್ದರು. 2022ರಲ್ಲಿ ಮಿಸ್ ಪುದುಚೇರಿ ಕಿರೀಟವನ್ನು ಪಡೆದರು. ಆರ್ಥಿಕ ಸಂಕಷ್ಟ ಮತ್ತು ವೈಯಕ್ತಿಕ ಒತ್ತಡದಿಂದ ಸ್ಯಾನ್ ರೆಚಲ್ ಜೀವ ಕಳೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಲಂಡನ್, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರೆಚಲ್ ಮಹಿಳಾ ಸುರಕ್ಷತಾ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದ್ರೆ ಮಾಜಿ ಮಿಸ್ ಪುದುಚೇರಿ, ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ನಿಧನಕ್ಕೆ ಅಭಿಮಾನಿಗಳು ಕಾಮೆಂಟ್ಸ್ ಹಾಕುವ ಮೂಲಕ ಕಂಬನಿ ಮಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ