/newsfirstlive-kannada/media/post_attachments/wp-content/uploads/2025/03/Whitney-Wright.jpg)
ಅಮೆರಿಕಾದ ಪೋರ್ನ್ ಸ್ಟಾರ್ ವಿಟ್ನಿ ರೈಟ್, ಅವರ ಅಸಲಿ ಹೆಸರು ಬ್ರಟ್ಟಿನಿ ರಾಯ್ನೆ ವಿಟ್ಟಿಂಗ್ಟನ್. ಸದ್ಯ ಇರಾನ್ ಸರ್ಕಾರದ ಪ್ರಪಾಗಂಡಾವನ್ನು ಪ್ರಚಾರಪಡಿಸುವ ರೀತಿಯಲ್ಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದರಿಂದ ಜಾಗತಿಕವಾಗಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಇಸ್ಮಾಮಿಕ್ ರಿಪಬ್ಲಿಕ್ಗೆ ಭೇಟಿ ನೀಡಿದ್ದ ನೀಲಿ ಚಿತ್ರಗಳ ತಾರೆ. ಈಗ ಬಂಧನ ಇಲ್ಲವೇ ಮರಣದಂಡನೆ ಶಿಕ್ಷೆಗೆ ಗುರಿಯಾಗುವ ಭಯದಲ್ಲಿದ್ದಾರೆ. ಇತ್ತೀಚೆಗೆ ರೈಟ್ ಅಫ್ಘಾನಿಸ್ತಾನದ ಒಂದು ನಗರದಲ್ಲಿ ಎಕೆ 47 ಹಿಡಿದುಕೊಂಡು ನಿಂತ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಈ ಒಂದು ಫೋಟೋ ಈಗ ಸೋಷಿಯಲ್ ಮೀಡಿಯಾ ಬಳಕೆದಾರರ ಆಕ್ರೋಶದ ಕಟ್ಟೆಯನ್ನು ಒಡೆದು ಹಾಕಿದೆ. ತಾಲಿಬಾನ್ ಕಾನೂನಿನಲ್ಲಿ ಹಲವು ನಿಬಂಧನೆಗಳಿವೆ. ಅದರಲ್ಲಿ ಅಫ್ಘಾನಿಸ್ತಾನದಲ್ಲಿ 72 ಕಿಲೋ ಮೀಟರ್ಗಿಂತ ಜಾಸ್ತಿ ಯಾವುದೇ ಗಂಡಸಿನ ರಕ್ಷಣೆ ಇಲ್ಲದೆ ಮಹಿಳೆಯರು ಒಂಟಿಯಾಗಿ ಓಡಾಡುವುದು ದೊಡ್ಡ ಅಪರಾಧ. ಅದು ಮಾತ್ರವಲ್ಲ ಪಾರ್ಕ್, ರೆಸ್ಟೊರೆಂಟ್ ಹಾಗೂ ಜಿಮ್ಗಳಲ್ಲಿ ಪ್ರವೇಶಕ್ಕೂ ಕೂಡ ಮಹಿಳೆಯರಿಗೆ ನಿಷೇಧವಿದೆ.
ಇದನ್ನೂ ಓದಿ:ಈ ದೇಶದ ಯುವತಿಯರಿಗೆ ಈ ಹಣೆಪಟ್ಟಿ ಬೀಳುತ್ತೆ.. ಲೆಫ್ಟ್ ಓವರ್, ಹೀಗಂದ್ರೆ ಏನು?
ಇಂತಹ ನಿಬಂಧನೆಗಳನ್ನು ಉಲ್ಲಂಘಿಸಿದರೆ ಸ್ಥಳೀಯ ಮಹಿಳೆಯರನ್ನೇ ಜೈಲಿಗೆ ಕಳುಹಿಸಲಾಗುತ್ತದೆ. ಇನ್ನು ವಿದೇಶಿ ಪ್ರವಾಸಿಗರು ಏನಾಗಬಹುದು? ಅವರ ಹಿನ್ನೆಲೆ ಎಂತಹದು ಎಂಬುದು ಯಾವುದು ಕೂಡ ಗಣನೆಗೆ ಬರುವುದಿಲ್ಲ. ಇದು ಅವರು ಪ್ರವಾಸಿಗರಿಗೆ ನೀಡುವ ಆತಿಥ್ಯದ ಪದ್ಧತಿ ಎಂದು ಅಫ್ಘಾನ್ನ ಮಹಿಳಾ ಹಕ್ಕು ಮತ್ತು ಶಿಕ್ಷಣಗಳ ಹೋರಾಟಗಾರ್ತಿ ವಜ್ಮಾ ಟೊಖಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟಿ, ಬೇವಾಚ್ ಖ್ಯಾತಿಯ ಪಮೇಲಾ ಬಾಚ್ ದುರಂತ ಅಂತ್ಯ; ಆಗಿದ್ದೇನು?
ಇನ್ನು ಅನೇಕ ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡು ರೈಟ್ ಮೇಲೆ ಮುಗಿಬಿದ್ದಿದ್ದಾರೆ. ಅಫ್ಭಾನಿಸ್ತಾನದ ಬೂಟಾಟಿಕೆಗಳ ಆಡಳಿತದ ಸ್ಪಷ್ಟ ಸೂಚನೆ ಇದು ಎಂದು ಹೇಳುತ್ತಿದ್ದಾರೆ.
View this post on Instagram
ರೈಟ್ ಕಾಬೂಲ್ ಹಾಗೂ ಹೆರತ್ನ್ಲಿ ತೆಗೆದುಕೊಂಡು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶುಕ್ರವಾರದಂದು ಅಪ್ಲೋಡ್ ಮಾಡಿದ್ದಾರೆ. ರಿಕ್ಷಾದಲ್ಲಿ ತಿರುಗಾಡಿದ್ದು, ಲೈಬ್ರರಿಗೆ ಬೇಟಿಕೊಟ್ಟಿದ್ದು, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಫೋಟೋಗೆ ಪೋಸ್ ಕೊಟ್ಟಿರುವ ಫೋಟೋಗಳು ಮಾತ್ರ ಆ ಪೋಸ್ಟ್ನಲ್ಲಿವೆ. ಇತ್ತೀಚೆಗೆ ಅವರು ಇರಾನ್, ಸಿರಿಯಾ ಮತ್ತು ಲೆಬನಾನ್ಗೂ ಕೂಡ ಪ್ರವಾಸ ಬೆಳೆಸಿದ್ದರು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ