Advertisment

VIDEO: ಕಮ್ಮಿ ರೇಟು.. ಫುಲ್​ ಟೇಸ್ಟು 'ಟೀ' ಪ್ರೇಮಿಗಳ ಹೊಸ ಅಡ್ಡ ಕಣ್ರಿ ಈ Positivi'Tea'

author-image
admin
Updated On
VIDEO: ಕಮ್ಮಿ ರೇಟು.. ಫುಲ್​ ಟೇಸ್ಟು 'ಟೀ' ಪ್ರೇಮಿಗಳ ಹೊಸ ಅಡ್ಡ ಕಣ್ರಿ ಈ Positivi'Tea'
Advertisment
  • ಪಾಸಿಟಿವಿ ‘ಟೀ’ ಶಾಪ್‌ನಲ್ಲಿ ಟೀ ಕುಡಿದ್ರೆ ಗ್ಯಾಸ್ಟಿಕ್ ಸಮಸ್ಯೆ ಬರಲ್ಲ
  • ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿರುವ ಟೀ ಶಾಪ್‌
  • ರಾಜ್ಯದಲ್ಲೇ ಮೊದಲ ಬಾರಿಗೆ ಜಸ್ಟ್ 99 ರೂ. ಟೀ ಥಾಲಿ ಇಲ್ಲಿದೆ

ಬೆಂಗಳೂರು: ಬೆಳಗೆದ್ದು ಒಂದು ಕಪ್ ಟೀ ಕುಡಿಯದಿದ್ರೆ ಎಷ್ಟೋ ಜನ್ರಿಗೆ ಮೂಡೇ ಇರಲ್ಲ. ಪ್ರತಿ ದಿನ ಕಿಕ್ ಸ್ಟಾರ್ಟ್‌ ಆಗೋಕೆ ಟೀ ಬೇಕೇ ಬೇಕು. ಒಂದು ಕಪ್ ಬಿಸಿ, ಬಿಸಿ ಟೀ ಕುಡಿದ್ರೆ ಟೆನ್ಷನ್ ಎಲ್ಲಾ ಮಾಯವಾಗುತ್ತೆ ಅನ್ನೋರು ಬಹಳಷ್ಟು ಜನರಿದ್ದಾರೆ. ಅಂತಹ ಟೀ ಪ್ರಿಯರಿಗೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಒಂದು ಹೊಸ ಅಡ್ಡ ಶುರುವಾಗಿದೆ. ಅದರ ಹೆಸರೇ ಪಾಸಿಟಿವಿ ‘ಟೀ’.

Advertisment

publive-image

ಇದನ್ನೂ ಓದಿ:ದೇಶದಲ್ಲೇ ಮೊಟ್ಟ ಮೊದಲು.. ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರ ಚಿಕಿತ್ಸೆ

ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಪೆಷಲ್ ಟೀ ಶಾಪ್‌ ಪಾಸಿಟಿವಿ ‘ಟೀ’ ಶುರುವಾಗಿದೆ. ಇಲ್ಲಿ ಕಮ್ಮಿ ರೇಟು.. ಫುಲ್​ ಟೇಸ್ಟು. ಇಲ್ಲಿ ಬರೀ ಟೀ ಅಷ್ಟೇ ಅಲ್ಲ ತುಂಬಾ ವೆರೈಟಿ, ವೆರೈಟಿ ಸ್ನ್ಯಾಕ್ಸ್ ಕೂಡ ಸಿಗುತ್ತೆ.

publive-image

ಪಾಸಿಟಿವಿ ‘ಟೀ’ ಶಾಪ್‌ನಲ್ಲಿ ಟೀಗಳು ನಾರ್ಮಲ್‌ ಆಗಿರಲ್ಲ. ಎಲ್ಲವೂ ಸ್ಪೆಷಲ್‌ ಆಗಿರುತ್ತೆ. ಅದರಲ್ಲೂ ಫ್ರೆಶ್ ಆಗಿ ರೆಡಿ ಮಾಡುವ ಬಾಯ್ಲರ್ ಟೀಯನ್ನು ಕುಡಿಯೋದ್ರಿಂದ ಗ್ಯಾಸ್ಟಿಕ್ ಸಮಸ್ಯೆ ಬರೋದಿಲ್ಲ. ಪ್ರತಿಯೊಬ್ಬರಿಗೂ ಫ್ರೆಶ್ ಆದ ಬಾಯ್ಲರ್ ಟೀಯನ್ನು ರುಚಿಗನುಗುಣವಾಗಿ ಗ್ರಾಹಕರಿಗೆ ನೀಡಲಾಗುತ್ತದೆ. ಸಾಕಷ್ಟು ವೆರೈಟಿಯ ಟೀಗಳು ಇಲ್ಲಿ ಸಿಗುತ್ತವೆ.

Advertisment

publive-image

ಪಾಸಿಟಿವಿ ‘ಟೀ’ ಶಾಪ್‌ನಲ್ಲಿ ಸ್ಪೆಷಲ್ ಆದ ಐಸ್‌ಕ್ರೀಮ್ ಕೂಡ ಸಿಗುತ್ತವೆ. ಈ ಐಸ್‌ಕ್ರೀಮ್‌ಗಳನ್ನು ಇಲ್ಲೇ ಫ್ರೆಶ್ ಆಗಿ ತಯಾರು ಮಾಡಲಾಗುತ್ತೆ. ಇಲ್ಲಿ ಟೀ ಜೊತೆಗೆ ತಯಾರಾಗುವ ರುಚಿ, ರುಚಿಯಾದ ಸ್ನಾಕ್ಸ್‌ ಕೂಡ ಜನರಿಗೆ ತುಂಬಾ ಇಷ್ಟವಾಗುತ್ತಿದೆ. ಬೆಂಡಿ ಕುರ್ಕುರೆ, ಸ್ವೀಟ್ ಕಾರ್ನ್ ಕೋಸಂಬರಿಯನ್ನು ಸ್ಪೆಷಲ್ ಆಗಿ ರೆಡಿ ಮಾಡಲಾಗುತ್ತೆ. ಜಸ್ಟ್ 99 ರೂಪಾಯಿಗೆ ಟೀ ಥಾಲಿಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿ ಪರಿಚಯಿಸಲಾಗಿದೆ. ಫ್ರೆಂಚ್‌ ಫ್ರೈ, ಮ್ಯಾಗಿ, ಮೊಮೊಸ್‌ ಜೊತೆಗೆ ದೇಸಿ ಐಟಂಗಳಾದ ಮಜ್ಜಿಗೆ, ರಾಗಿ ಗಂಜಿ ಕೂಡ ಇಲ್ಲಿ ಸಿಗುತ್ತದೆ.

publive-image

ಫ್ರೆಶ್ ಟೀ ಕೊಡುವುದರ ಜೊತೆಗೆ ಪಾಸಿಟಿವಿ ‘ಟೀ’ ಶಾಪ್‌ನಲ್ಲಿ ಆರೋಗ್ಯಕ್ಕೆ ಉತ್ತಮವಾದ ಫುಡ್ ಕೂಡ ಸಿಗುತ್ತಾ ಇದೆ. ಪಾಸಿಟಿವಿ ‘ಟೀ’ ಶಾಪ್‌ನ ಈ ವೆರೈಟಿಯನ್ನ ಟೇಸ್ಟ್ ಮಾಡಬೇಕು ಅಂದ್ರೆ ವಿರೇಶ್ ಥಿಯೇಟರ್ ಸಮೀಪ ಇರುವ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿರುವ ಪಾಸಿಟಿವಿ ‘ಟೀ’ ಶಾಪ್‌ಗೆ ಹೋಗಿ ಟೇಸ್ಟ್ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment