/newsfirstlive-kannada/media/post_attachments/wp-content/uploads/2025/03/GDG-BANATI.jpg)
ಗದಗ: ಐದು ತಿಂಗಳ ಬಾಣಂತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕೇಳಿಬಂದಿದೆ. ಈಗ ಹಸುಗೂಸು ಅನಾಥ ಆಗಿದೆ.
ಪವಿತ್ರಾ 25 ಕೊಲೆಯಾದ ಬಾಣಂತಿ. ಆಕೆಯ ಗಂಡನ ಮನೆಯವರ ವಿರುದ್ಧ ಮೃತಳ ಪೋಷಕರು ಆರೋಪಿಸಿದ್ದಾರೆ. ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕಣ್ಣೀರು ಇಟ್ಟಿದ್ದಾರೆ. ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಬಂದು ಮೂರು ದಿನವಾಗಿತ್ತು.
ಆಕೆಯ ಗಂಡ ಹರೀಶ್ ಕಲ್ಲಕುಟಿಕರ್, ಮಾವ ಮೂಕಪ್ಪ, ಅತ್ತೆ ಸೋಮವ್ವ ವಿರುದ್ಧ ಪೋಷಕರು ಆರೋಪಿಸಿದ್ದಾರೆ. ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us