newsfirstkannada.com

ದೇಶದಲ್ಲಿ ಬಡತನ ದಾಖಲೆಯ ಪ್ರಮಾಣದಲ್ಲಿ ಕುಸಿತ; ಲೋಕ ಸಮರದಲ್ಲಿ ಬಿಜೆಪಿಗೆ ಹೊಸ ಅಸ್ತ್ರ; ಏನಿದು?

Share :

Published February 26, 2024 at 1:31pm

Update February 26, 2024 at 1:44pm

    2022ರಿಂದ 2023ರ ಜುಲೈವರೆಗೆ ನಡೆದ ಸರ್ವೇ ವರದಿಯಲ್ಲಿ ಬಹಿರಂಗ

    ನೀತಿ ಆಯೋಗದ ಸಿಇಒ ಬಿ.ವಿ.ಆರ್ ಸುಬ್ರಮಣ್ಯಮ್ ಮಾಹಿತಿ ಬಿಡುಗಡೆ

    ಗ್ರಾಮೀಣ, ನಗರ ಪ್ರದೇಶದಲ್ಲಿ ಮನೆ ಖರ್ಚು ಎರಡೂವರೆ ಪಟ್ಟು ಹೆಚ್ಚಳ

ನವದೆಹಲಿ: ಭಾರತದಲ್ಲಿ ಬಡತನ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ನೀತಿ ಆಯೋಗ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ನೀತಿ ಆಯೋಗದ ಸಿಇಒ ಬಿ.ವಿ.ಆರ್ ಸುಬ್ರಮಣ್ಯಮ್ ಅವರು ಆಗಸ್ಟ್ 2022ರಿಂದ 2023ರ ಜುಲೈವರೆಗೆ ನಡೆದ ಸರ್ವೇ ವರದಿಯನ್ನ ಬಹಿರಂಗಪಡಿಸಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೀತಿ ಆಯೋಗ ನೀಡಿರುವ ಈ ವರದಿ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ.

ನೀತಿ ಆಯೋಗದ ಸಿಇಒ ಬಿ.ವಿ.ಆರ್ ಸುಬ್ರಮಣ್ಯಮ್ ಅವರ ಪ್ರಕಾರ ಭಾರತದಲ್ಲಿ ಸದ್ಯ ಬಡತನವು ಶೇಕಡಾ 5ಕ್ಕಿಂತ ಕಡಿಮೆ ಇದೆ. ಮನೆ ಬಳಕೆ ವಸ್ತುಗಳ ಖರ್ಚಿನ ಸರ್ವೇ ಆಧಾರದ ಮೇಲೆ ಈ ಹೇಳಿಕೆ ನೀಡಿದ್ದಾರೆ.
ಆಗಸ್ಟ್ 2022 ರಿಂದ 2023ರ ಜುಲೈವರೆಗೆ ನಡೆದ ಸರ್ವೇಯಲ್ಲಿ ಬಡತನದ ಪ್ರಮಾಣ, ಬಡತನ ನಿರ್ಮೂಲನೆ ಕ್ರಮಗಳ ಪರಿಣಾಮಕಾರಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಬಡತನ ನಿವಾರಣೆಗೆ ಮನೆ ಖರ್ಚಿನ ಅಂಕಿ-ಅಂಶವೇ ಪ್ರಮುಖ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್ ಸುಬ್ರಮಣ್ಯಮ್ ಹೇಳಿದ್ದಾರೆ.

ಮನೆ ಖರ್ಚು ಎರಡೂವರೆ ಪಟ್ಟು ಹೆಚ್ಚಳ!
ಗ್ರಾಮೀಣ, ನಗರ ಪ್ರದೇಶ ಎರಡರಲ್ಲೂ ಜನರ ಖರ್ಚು-ವೆಚ್ಚ ಎರಡೂವರೆ ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ 2011-12ರಲ್ಲಿ ಮನೆ ಬಳಕೆಯ ವಸ್ತುಗಳ ಮೇಲಿನ ವೆಚ್ಚವು 1,430 ರೂಪಾಯಿ ಇತ್ತು. ಈಗ ಗ್ರಾಮೀಣ ಪ್ರದೇಶದಲ್ಲಿ 2022-23ರ ವೇಳೆಗೆ ಮನೆ ಬಳಕೆಯ ವಸ್ತುಗಳ ಮೇಲಿನ ವೆಚ್ಚವು 2008 ರೂಪಾಯಿಗೆ ಏರಿಕೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮನೆ ಬಳಕೆಯ ವಸ್ತುಗಳ ಮೇಲಿನ ವೆಚ್ಚವು ಶೇಕಡಾ 40 ರಷ್ಟು ಹೆಚ್ಚಾಗಿದೆ. ಇದೇ ರೀತಿ ನಗರ ಪ್ರದೇಶಗಳಲ್ಲೂ ಮನೆ ಬಳಕೆಯ ವಸ್ತುಗಳ ಮೇಲಿನ ವೆಚ್ಚವು 2011-12 ರಲ್ಲಿ 2,630 ರೂಪಾಯಿ ಇತ್ತು. 2022-23ರಲ್ಲಿ ನಗರ ಪ್ರದೇಶದಲ್ಲಿ ಮನೆ ಬಳಕೆಯ ವಸ್ತುಗಳ ಮೇಲಿನ ವೆಚ್ಚವು 6,459 ರೂಪಾಯಿಗೆ ಏರಿಕೆಯಾಗಿದೆ. ಈ ಅಂಕಿ ಅಂಶಗಳಿಂದಾಗಿ ದೇಶದಲ್ಲಿ ಬಡತನವು ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆ ಇದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಮಣ್ಯಮ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ನೀತಿ ಆಯೋಗದ ಈ ಮಾಹಿತಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಬಡತನ ದಾಖಲೆ ಪ್ರಮಾಣದಲ್ಲಿ ಕುಸಿದಿರುವುದಕ್ಕೆ ಬಿಜೆಪಿ ನಾಯಕರು ಇದಕ್ಕೆ ಮೋದಿ ಗ್ಯಾರಂಟಿಯೇ ಕಾರಣ ಎನ್ನುತ್ತಿದ್ದಾರೆ. ಬಡತನ ಪ್ರಮಾಣ ಕುಸಿದಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದಲ್ಲಿ ಬಡತನ ದಾಖಲೆಯ ಪ್ರಮಾಣದಲ್ಲಿ ಕುಸಿತ; ಲೋಕ ಸಮರದಲ್ಲಿ ಬಿಜೆಪಿಗೆ ಹೊಸ ಅಸ್ತ್ರ; ಏನಿದು?

https://newsfirstlive.com/wp-content/uploads/2023/11/PM-MODI-1.jpg

Load More