ಪವರ್​ ಬ್ಯಾಂಕ್ ಬಳಕೆ ಎಷ್ಟು ಡೇಂಜರ್​..? ನಿಮ್ಮ ಫೋನ್ ಸುರಕ್ಷತೆ ಹೇಗಿರಬೇಕು..?

author-image
Ganesh
Updated On
ಪವರ್​ ಬ್ಯಾಂಕ್ ಬಳಕೆ ಎಷ್ಟು ಡೇಂಜರ್​..? ನಿಮ್ಮ ಫೋನ್ ಸುರಕ್ಷತೆ ಹೇಗಿರಬೇಕು..?
Advertisment
  • ಚಾರ್ಜಿಂಗ್ ಸಮಸ್ಯೆಗೆ ಪವರ್ ಬ್ಯಾಂಕ್ ಪರಿಹಾರ
  • iPhone ಇರೋರು ಯಾವ ಪವರ್​​ಬ್ಯಾಂಕ್ ಬಳಸಬೇಕು?
  • ಇತರೆ ಸ್ಮಾರ್ಟ್​ಫೋನ್​ಗಳನ್ನು ಹೇಗೆ ಚಾರ್ಜ್​ ಮಾಡಬೇಕು?

ಇಂದು ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗಿದೆ. ಚಾರ್ಜಿಂಗ್ ಸಮಸ್ಯೆ ಸಾಮಾನ್ಯ. ಸ್ಮಾರ್ಟ್‌ಫೋನ್‌ಗಳ ಚಾರ್ಜ್​ಗೆ ಪವರ್ ಬ್ಯಾಂಕ್ ಬಳಸುವುದು ಬಹಳ ಜನಪ್ರಿಯ ಪರಿಹಾರ. ಆದರೆ ಪವರ್ ಬ್ಯಾಂಕ್ ಬಳಸುವುದರಿಂದ ಫೋನ್​​ಗೆ ಎಫೆಕ್ಟ್ ಆಗುತ್ತದೆಯೇ? ಚಾರ್ಜ್ ಮಾಡುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಅನ್ನೋ ವಿವರ ಇಲ್ಲಿದೆ.

ಪವರ್ ಬ್ಯಾಂಕ್ ಬಳಸುವುದು ಸುರಕ್ಷಿತ. ಆದರೆ ತಪ್ಪಾಗಿ ಬಳಸಿದರೆ ಅದು ನಿಮ್ಮ ಫೋನ್‌ಗೆ ಹಾನಿ ಮಾಡಬಹುದು. ಪವರ್ ಬ್ಯಾಂಕಿನ ಗುಣಮಟ್ಟ, ಚಾರ್ಜಿಂಗ್ ವೇಗ, ಬಳಸುವ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್ ಹೇಗಿದೆ ಅನ್ನೋದ್ರ ಮೇಲೆ ನಿಮ್ಮ ಫೋನ್ ಸುರಕ್ಷಿತವಾಗಿರುತ್ತದೆ.

ಐಫೋನ್​ಗೆ ಪರಿಹಾರ

ಐಫೋನ್‌ಗಾಗಿ ಯಾವಾಗಲೂ Apple ಸಂಸ್ಥೆ ದೃಢಿಕರಿಸಿದ ಚಾರ್ಜಿಂಗ್ ಕೇಬಲ್ ಮತ್ತು ಅಡಾಪ್ಟರ್​ಗಳನ್ನೇ ಬಳಸಿ. ಇದರಿಂದ ಫೋನ್​ನ ಬ್ಯಾಟರಿಯ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಲ್ಲ. ಅಲ್ಲದೆ ಚಾರ್ಜಿಂಗ್ ಪ್ರಕ್ರಿಯೆ ಕೂಡ ಸುರಕ್ಷಿತವಾಗಿರುತ್ತದೆ.

ಆಪಲ್ ಚಾರ್ಜಿಂಗ್ ಅಡಾಪ್ಟರ್: 5W, 18W, 20W, 30W ಪವರ್ ಔಟ್‌ಪುಟ್ ಒದಗಿಸುವ ಆ್ಯಪಲ್-ಪ್ರಮಾಣೀಕೃತ ಅಡಾಪ್ಟರ್ ಬಳಸಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ:

ಕ್ವಿಕ್ ಚಾರ್ಜ್ 3.0 ತಂತ್ರಜ್ಞಾನಕ್ಕೆ ಹೊಂದಿಕೆಯಾಗುವ ಪವರ್ ಬ್ಯಾಂಕ್ ಖರೀದಿಸಿ. ಇದರಿಂದ ಸ್ಯಾಮ್‌ಸಂಗ್‌ನಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಅಥವಾ ಇತರ ಕಂಪನಿಗಳ ಫೋನ್​ಗಳಿಗೆ ಆತಂಕವಿಲ್ಲದೇ ಬಳಸಬಹುದು. ಈ ಪವರ್ ಬ್ಯಾಂಕ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಲ್ಲ. ಪವರ್ ಬ್ಯಾಂಕ್ ಅಗತ್ಯವಿದ್ದಾಗ ಮಾತ್ರ ಬಳಸಬೇಕು.
ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಯಾವಾಗಲೂ ಕಂಪನಿ ಪ್ರಮಾಣೀಕೃತ ಚಾರ್ಜರ್ ಬಳಸಲು ಪ್ರಯತ್ನಿಸಿ. ಇದರಿಂದ ಫೋನ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಬ್ಯಾಟರಿಯೂ ಚೆನ್ನಾಗಿರುತ್ತದೆ.

ಇದನ್ನೂ ಓದಿ: GHIBLI ಮಾಯೆಗೆ ನೀವು ಮರುಳಾದ್ರಾ? ಇದು ಒಳ್ಳೇದಾ.. ಕೆಟ್ಟದ್ದಾ? ಸೈಬರ್ ಎಕ್ಸ್​​ಪರ್ಟ್​ಗಳ ಎಚ್ಚರಿಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment