newsfirstkannada.com

ದೇವಸ್ಥಾನಗಳಲ್ಲಿ ನಿಂಬೆಹಣ್ಣಿನ ದೀಪ ಏಕೆ ಹಚ್ಚುತ್ತಾರೆ ಗೊತ್ತಾ..? ಇಲ್ಲಿದೆ ವೈಜ್ಞಾನಿಕ ಕಾರಣ!

Share :

23-06-2023

    ದೇವರ ಮಂದಿರಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಏಕೆ ಹಚ್ಚಬೇಕು ಗೊತ್ತಾ?

    ದೀಪವನ್ನು ಹಚ್ಚುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

    ಮಂದಿರಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಈ ಎಲ್ಲಾ ಲಾಭಗಳಿವೆ!

ನಿಂಬೆಹಣ್ಣು ಕೇವಲ ಅಡುಗೆ ತಯಾರಿಕೆಗೆ ಅಥವಾ ಆರೋಗ್ಯವೃದ್ಧಿಗೆ ಮಾತ್ರವಲ್ಲದೆ, ದೇವರ ಪೂಜೆಗೆ ಅತ್ಯಂತ ಪ್ರಮುಖವಾದುದ್ದು ಎಂದರೆ ತಪ್ಪಾಗಲಾರದು. ಹಿಂದೂ ಸಂಪ್ರದಾಯದಲ್ಲಿ ನಿಂಬೆಹಣ್ಣು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ನಿಂಬೆಹಣ್ಣು ಇಲ್ಲದೆ ಯಾವುದೇ ಮಂಗಳಕಾರ್ಯ ಪೂರ್ಣಗೊಳ್ಳುವುದಿಲ್ಲ. ನಿಂಬೆಹಣ್ಣುಗಳು ನಮ್ಮ ಸಂಸ್ಕೃತಿಯಲ್ಲಿ ಅಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ವಿಶೇಷವಾಗಿ ದೇವರ ಮಂದಿರಗಳಲ್ಲಿ ನಿಂಬೆಹಣ್ಣು ಹಚ್ಚುತ್ತಾರೆ ಅದು ಏಕೆ ಎಂದು ಅದೇಷ್ಟೋ ಜನರಿಗೆ ಗೊತ್ತೇ ಇಲ್ಲ. ಅಷ್ಟಕ್ಕೂ ದೇವಸ್ಥಾನಗಳಲ್ಲಿ ಏಕೆ ನಿಂಬೆಹಣ್ಣಿನ ದೀಪ ಹಚ್ಚುತ್ತಾರೆ ಎಂಬುದಕ್ಕೆ ವೈಜ್ಞಾನಿಕ ಕಾರಣಗಳಿವೆ.

ದೇವರ ಮಂದಿರಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಏಕೆ ಹಚ್ಚಬೇಕು..?

ನಿಂಬೆಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದದ್ದು. ಪಾರ್ವತಿ ಸ್ವರೂಪವಾದ ಅಂಬಾ ಭವಾನಿ ಕಾಳಿ ಮಂದಿರ ಚಾಮುಂಡೇಶ್ವರಿ ಇತ್ಯಾದಿ ಮಾರಿಯಮ್ಮ ದುರ್ಗಾ ಹಾಗೂ ಶಕ್ತಿ ದೇವಾಲಯಗಳಲ್ಲಿ ದೀಪ ಹಚ್ಚಬೇಕು. ದೇವಿಯ ಕೃಪೆ ಮತ್ತು ಆಶೀರ್ವಾದ ನಮಗೆ ಸಿಗಲೆಂದು ಹಚ್ಚುತ್ತೇವೆ. ಜತೆಗೆ ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು, ನಿರುತ್ಸಾಹ ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತು ದೋಷಕ್ಕೆ,  ವ್ಯವಹಾರದಲ್ಲಿ ತೊಂದರೆ,  ಶತ್ರುಗಳ ಕಾಟ ಹೆಚ್ಚಿದರೆ, ಮದುವೆ ನಿಧಾನವಾಗುತ್ತಿದ್ದರೆ, ಕೆಟ್ಟ ಕನಸುಗಳನ್ನು ಅನುಭವಿಸುತ್ತಿದ್ದರೆ, ಮೃತ್ಯು ಮುಖ್ಯವಾಗಿ ಕಾಳಸರ್ಪ ದೋಷ ನಿವಾರಣೆ ಮಾಡಲು ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಲಾಗುತ್ತದೆ. ನಿಂಬೆಹಣ್ಣಿನ ದೀಪ ಹಚ್ಚುವುದರ ಜೊತೆಗೆ ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

ದೇವರ ಮಂದಿರಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ..?

  • ಮಂಗಳವಾರ ನಿಂಬೆಹಣ್ಣಿನ ದೀಪ ಹಚ್ಚುವುದಕ್ಕಿಂತ ಶುಕ್ರವಾರದ ದೀಪ ಹಚ್ಚಿದರೆ ಹೆಚ್ಚು ಫಲ ಕೊಡುತ್ತದೆ. ಏಕೆಂದರೆ ಮಂಗಳವಾರದ ದೀಪವು ರಜೋಗುಣದಿಂದ ಕೂಡಿರುತ್ತದೆ.
  • ಶುಕ್ರವಾರದ ದಿವಸ ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ, ನಂತರ ಮನೆಯ ಯಜಮಾನರ ಅಥವಾ ಪೂಜೆ ಮಾಡುವವರ ಹೆಸರಲ್ಲಿ ದೇವಿಗೆ ಅಷ್ಟೋತ್ತರ ಮಾಡಿಸಿ, ಕೋಸಂಬರಿ ಪಾನಕ, ಮಜ್ಜಿಗೆ ಹಣ್ಣುಗಳನ್ನು ಕೊಡಬೇಕು. ಜೊತೆಗೆ ದೇವರಿಗೆ ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ಕೊಡಬೇಕು.
  • ದೇವಿಗೆ ಅರಿಶಿಣ, ಕುಂಕುಮ,  ಹೂವು, ರವಿಕೆ, ಕಣ ಸೀರೆ ಎಲ್ಲವೂ ಕೊಡಬಹುದು. ಇದೆಲ್ಲಾ ದೇವಿಗೆ ಇಷ್ಟ ತುಂಬಾ ಇಷ್ಟವಾದ ವಸ್ತುಗಳಾಗಿವೆ. ಹೀಗೆ ಮಾಡಿದರೆ ನೆನೆದ ಕಾರ್ಯಗಳು ಸುಸೂತ್ರವಾಗಿಯೂ ಶೀಘ್ರವಾಗಿ ನೆರವೇರುತ್ತದೆ.

ದೇವರ ಮಂದಿರಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ..!

  • ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿ ಹಾಗೂ ಸರಸ್ವತಿ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು. ಒಂದು ವೇಳೆ ಹಚ್ಚಿದರೆ ಮನೆಯಲ್ಲಿ ಸಂತೋಷ ನೆಮ್ಮದಿ ಇರುವುದಿಲ್ಲ ಯಾವಾಗಲೂ ಜಗಳ ಹಣಕಾಸಿನ ಸ್ಥಿತಿ ಎದುರಾಗುತ್ತದೆ.
  • ಯಾವುದೇ ಕಾರಣಕ್ಕೂ ಒಂದೇ ಮನೆಯಲ್ಲಿ ಇಬ್ಬರು ಹೆಂಗಸರು ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚುವಂತಿಲ್ಲ.
  • ಮನೆಯಲ್ಲಿ ಹೆಂಗಸರು ನಾಲ್ಕನೇ ದಿನದ ನೀರು ಹಾಕಿಕೊಂಡು ಅಥವಾ ಐದನೇ ದಿನದ ನೀರು ಹಾಕಿಕೊಂಡು ನಿಂಬೆಹಣ್ಣಿನ ದೀಪ ಹಚ್ಚಬಾರದು. ಜೊತೆಗೆ ನಿಂಬೆಹಣ್ಣಿನ ದೀಪವನ್ನು ಮೈಲಿಗೆ ಇರುವಾಗ ಹಚ್ಚಬಾರದು.
  • ನಮ್ಮ ಆರೋಗ್ಯ ಸರಿ ಇಲ್ಲದಿರುವಾಗ ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚಬಾರದು.
  • ಹೆಣ್ಣು ಮಕ್ಕಳು ಅಕ್ಕ ಅಥವಾ ತಂಗಿಯರ ಮನೆಗೆ ತಾಯಿಯ ಮನೆಗೆ ಹೋದಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು.
  • ಯಾರೊಟ್ಟಿಗೂ ಜಗಳ ಮಾಡಿ ನಿಂಬೆಹಣ್ಣಿನ ದೀಪ ಹಚ್ಚುವಂತಿಲ್ಲ.
  • ಸುಮಂಗಲಿಯರು ರೇಷ್ಮೆ ಸೀರೆ ಉಟ್ಟು ದೇವರಿಗೆ ನಿಂಬೆಹಣ್ಣಿನ ದೀಪ ಹಚ್ಚಿದರೆ ಶೀಘ್ರದಲ್ಲಿ ದೇವಿಯ ಅನುಗ್ರಹದಿಂದ ಸಾಕಲ ಕಾರ್ಯ. ಇದರ ಜೊತೆಗೆ ಸರಿಯಾಗಿ ತಿಳಿದು ಮಾಡುವುದರಿಂದ ಶುಭವಾಗುತ್ತದೆ.
  • ಮಕ್ಕಳ ಹುಟ್ಟುಹಬ್ಬ ಹಾಗೂ ಕುಟುಂಬದಲ್ಲಿ ಮದುವೆಯಾದರೆ ನಿಂಬೆಹಣ್ಣಿನ ದೀಪ ಹಚ್ಚಬಾರದು.

ಒಟ್ಟಿನಲ್ಲಿ ಮೇಲಿನ ಎಲ್ಲ ಅಂಶಗಳು ನಿಂಬೆಹಣ್ಣಿನ ದೀಪ ಹಚ್ಚುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳಾಗಿವೆ. ದೇವರ ಮಂದಿರಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಏನೆಲ್ಲಾ ಲಾಭಗಳಿವೆ. ಯಾವ ಸಂದರ್ಭಗಳಲ್ಲಿ ದೇವರಿಗೆ ನಿಂಬೆಹಣ್ಣಿನ ದೀಪ ಹಚ್ಚಿದರೆ ಲೇಸು ಎಂಬ ಮಾಹಿತಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಸ್ಥಾನಗಳಲ್ಲಿ ನಿಂಬೆಹಣ್ಣಿನ ದೀಪ ಏಕೆ ಹಚ್ಚುತ್ತಾರೆ ಗೊತ್ತಾ..? ಇಲ್ಲಿದೆ ವೈಜ್ಞಾನಿಕ ಕಾರಣ!

https://newsfirstlive.com/wp-content/uploads/2023/06/deepa.jpg

Load More