/newsfirstlive-kannada/media/post_attachments/wp-content/uploads/2023/08/Current-1.jpg)
ಬೆಂಗಳೂರು: ಇಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಗರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿದೆ. ಹೀಗಾಗಿ ನಗರ ಕೆಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆ 5.30 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ಅಡಚರಣೆ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆಯಿಂದಲೇ 66/11 ಕೆ.ವಿ ಬಾಗ್ಮನೆ WTC ಸ್ಟೇಷನ್ನಲ್ಲಿ ತುರ್ತು ನಿರ್ವಹಣೆ ಕೆಲಸ ನಡೆಸಲಾಗುತ್ತಿದೆ. ಈ ಪ್ರಯುಕ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಉದ್ದೇಶಿತ ಸ್ಥಳದ ನಿವಾಸಿಗಳು ಇಂದು ವಿದ್ಯುತ್ ಸರಬರಾಜು ನೋಡಿಕೊಂಡು ತಮ್ಮ ದಿನವನ್ನು ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ.
ಎಲ್ಲೆಲ್ಲಿ ಇಲ್ಲ ಕರೆಂಟ್?
ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್ ಬಾಗ್ಮನೆ, ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್ ಲ್ಯಾಬ್, ವೆಂಕಟೇಶ್ವರನಗರ, ವೆಂಕಟೇಶ್ವರಪುರ ಲೇಔಟ್, ಕನ್ಯಾ ಕಟ್ಟಡ ಫರ್ನ್ ಆವಾಸಸ್ಥಾನ, ಔಟರ್ ರಿಂಗ್ ರೋಡ್, ಕರೀನಾ ಪೂರ್ವ ಕಟ್ಟಡ, ಗಾರ್ನೆಟ್ ಕಟ್ಟಡ, WTC ಬಾಗ್ಮನೆ ಕರೀನಾ ಪಶ್ಚಿಮ, WTC ಬಾಗ್ಮನೆ ಯುಟಿಲಿಟಿ ಬ್ಲಾಕ್, WTC ಬಾಗ್ಮನೆ ರಿಯೋ ಆಫೀಸ್ ಬ್ಲಾಕ್, ಪೂರ್ವ ಪಾರ್ಕ್ ವಿಲ್ಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ರಾಮಕೃಷ್ಣ ರೆಡ್ಡಿ ವೃತ್ತ ಸೇರಿದಂತೆ ಹಲವೆಡೆ ವ್ಯತ್ಯಯ ಆಗಲಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಸಹಾಯವಾಣಿ 1912 ನಂಬರ್ಗೆ ಕರೆ ಮಾಡಿ ಎಂದು ಬೆಸ್ಕಾಂ ಕೋರಿದೆ. ಕಳೆದ ಕೆಲವು ದಿನಗಳಿಂದ ಬೆಸ್ಕಾಂ ವ್ಯಾಪ್ತಿಯ ಒಂದಲ್ಲ ಒಂದು ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆಗಾಗ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ಇದನ್ನೂ ಓದಿ:ದಿನಕ್ಕೆ 100 ಸಿಗರೇಟ್ ಸೇದುತ್ತಿದ್ದ ನಟ ಶಾರುಖ್ ಖಾನ್ಗೆ ಏನಾಯ್ತು? ನೀವು ನೋಡಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ