/newsfirstlive-kannada/media/post_attachments/wp-content/uploads/2025/05/BNG_SAI_NAGAR_RAIN.jpg)
ಬೆಂಗಳೂರು: ಮಳೆಯಿಂದಾಗಿ ಬೆಂಗಳೂರಿನ ಸಾಯಿಲೇಔಟ್ ಜಲಾವೃತಗೊಂಡಿದ್ದು ಸ್ಥಳೀಯ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ನಿಂತ ನೀರನ್ನು ಹೊರ ಹಾಕುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕ ಘಟನೆ ನಡೆಯದಂತೆ ಮುಂಜಾಗ್ರತಾವಾಗಿ ಲೇಔಟ್ನಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.
ಒಂದೇ ರಾತ್ರಿ ಸುರಿದ ಮಳೆಗೆ ಇಡೀ ನಗರವೇ ತತ್ತರಿಸಿದ್ದು ಅಸ್ತವ್ಯಸ್ತ ಉಂಟಾಗಿದೆ. ಸಾಯಿ ಲೇಔಟ್ನ ರಸ್ತೆ, ಮನೆಗಳಲ್ಲಿ ಮಳೆ ನೀರು ನಿಂತುಕೊಂಡಿದೆ. ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ತಂಡ ನಿಂತುಕೊಂಡ ನೀರನ್ನು ಹೊರ ಹಾಕುತ್ತಿವೆ. ಇನ್ನು ಏರಿಯಾದಲ್ಲಿ ಸಮಸ್ಯೆಯನ್ನು ನೋಡಿ ಜನರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಶುರುವಾದ ಜಿಟಿ ಜಿಟಿ ಮಳೆ.. ವರುಣನ ಕಾಟಕ್ಕೆ ಬೇಸರ, ಜನಜೀವನ ಅಸ್ತವ್ಯಸ್ತ
ಸಿಲಿಕಾನ್ ಸಿಟಿಯ ಹಲವು ಕಡೆ ಇಂದು ಕೂಡ ಮಳೆ ಮುಂದುವರೆದಿದೆ. ರಾತ್ರಿಯಿಂದಲೂ ಜಿಟಿ ಜಿಟಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣ ಆಗಿದ್ದಾರೆ. ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಸಿಲ್ಕ್ ಬೋರ್ಡ್ ಕಡೆ ತುಂತುರು ಮಳೆ ಆಗುತ್ತಿದೆ. ಬೊಮ್ಮನಹಳ್ಳಿ, ರೂಪೇನಾ ಅಗ್ರಹಾರ, ಅಗರ, ಮಡಿವಾಳ, ಬಿಟಿಎಂ ಲೇಔಟ್ ಸುತ್ತಾಮುತ್ತಾ ಹಗುರವಾದ ಮಳೆ ಸುರಿಯುತ್ತಿದೆ.
ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆಯ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಸಾಯಿಲೇಔಟ್ ಜಲಾವೃತಗೊಂಡಿದ್ದು, ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವರ್ಷದಲ್ಲಿ ಸಾಯಿನಗರಕ್ಕೆ 2ನೇ ಬಾರಿ ಸಮಸ್ಯೆ ಎದುರಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ