/newsfirstlive-kannada/media/post_attachments/wp-content/uploads/2024/07/JAISWAL-5.jpg)
ಟಿ20 ಕ್ರಿಕೆಟ್​ನಲ್ಲಿ ಪವರ್ ಪ್ಲೇ ಗೇಮ್ ಚೇಂಜರ್​. 6 ಓವರ್​ಗಳಿಗೆ ಪಂದ್ಯದ ಗತಿಯನ್ನೇ ಬದಲಿಸೋ ಶಕ್ತಿಯಿದೆ. ಬೌಲರ್​ಗಳು ತಡಕಾಡಿದ್ರೆ ಬ್ಯಾಟ್ಸ್​ಮನ್​ಗಳು ಬೌಂಡರಿ, ಸಿಕ್ಸರ್​ ಸಿಡಿಸಿ ಆರ್ಭಟಿಸ್ತಾರೆ. ಟೀಮ್​ ಇಂಡಿಯಾದ ಯಶಸ್ವಿ ಜೈಸ್ವಾಲ್​ಗೆ ಈ ಪವರ್​ ಪ್ಲೇಗೆ ಹೇಳಿ ಮಾಡಿಸಿದ ಆಟಗಾರ. ಪವರ್​ ಪ್ಲೇನಲ್ಲಿ ಪವರ್​ಫುಲ್​ ಆಟ ಆಡೋದ್ರಲ್ಲಿ ಜೈಸ್ವಾಲ್​ ರಂಥ ಪಂಟರ್​ ಮತ್ತೊಬ್ಬ ಇಲ್ಲ.
ಪವರ್ ಪ್ಲೇ.. ಈ ಹೆಸರು ಕೇಳಿದಾಕ್ಷಣ ಕಣ್ಮುಂದೆ ಬರೋದು. ಬೌಂಡರಿ, ಸಿಕ್ಸರ್​​ಗಳ ಮೊರೆತ.. ರನ್ ಸುನಾಮಿ.. ರನ್​ಗೆ ಕಡಿವಾಣ ಹಾಕಲು ಪರದಾಡುವ ಬೌಲರ್​​​​​ಗಳು. ಪವರ್​ ಪ್ಲೇನಲ್ಲಿ ದಂಡಿಸಿಕೊಂಡು ಟೀಕೆಗೆ ಒಳಗಾಗುವ ಬೌಲರ್​ನ ನೋಡಿದ್ರೆ ಪಾಪ ಅನ್ಸುತ್ತೆ. ಅದೇ ಬ್ಯಾಟ್ಸಮನ್, ರನ್​ಗಳಿಸಲು ತಿಣುಕಾಡಿದ್ರೆ, ಆತ ಎದುರಿಸೋ ಟೀಕೆಗಳು ಅಷ್ಟಿಷ್ಟಲ್ಲ. ಯಾಕಂದ್ರೆ ಪವರ್ ಪ್ಲೇನಲ್ಲಿ ಪವರ್​ಫುಲ್​ ಆಟವಾಡಿದ್ರೆ ಮಾತ್ರ ಇಲ್ಲಿ ಬೆಲೆ!
ಇದನ್ನೂ ಓದಿ:ಧೋನಿ, ರೋಹಿತ್ ನೆನಪಿಸಿದ ಗಿಲ್ ನಡೆ.. ಸರಣಿ ಗೆದ್ದ ನಂತರ ಸಂಭ್ರಮಿಸಲು ನಾಯಕ ಕಪ್ ನೀಡಿದ್ದು ಯಾರ ಕೈಗೆ..?
/newsfirstlive-kannada/media/post_attachments/wp-content/uploads/2024/07/JAISWAL-4.jpg)
ಪವರ್​​ ಪ್ಲೇ ಬ್ಯಾಟ್ಸ್​ಮನ್​ಗಳ ಪಾಲಿಗೆ ಸ್ವರ್ಗವಿದ್ದಂತೆ. ಫೀಲ್ಡ್​ ರಿಸ್ಟ್ರಿಕ್ಷನ್​ನ ಅಡ್ವಾಂಟೇಜ್ ತೆಗೆದುಕೊಂಡು ರನ್​ ಸುನಾಮಿ ಎಬ್ಬಿಸೋಕೆ ಪ್ರತಿಯೊಬ್ಬ ಬ್ಯಾಟರ್​ ಕಾಯ್ತಿರ್ತಾನೆ. ಎಲ್ಲರಿಗೂ ಇಲ್ಲಿ ಸಕ್ಸಸ್​ ಸಿಗಲ್ಲ. ಟೀಮ್​ ಇಂಡಿಯಾದ ಯಂಗ್​ಗನ್​ ಯಶಸ್ವಿ ಜೈಸ್ವಾಲ್​, ಸಿಕ್ಕ ಕಡಿಮೆ ಅವಕಾಶದಲ್ಲಿ ಸಕ್ಸಸ್​ ಕಂಡಿದ್ದಾರೆ. ಫಿಯರ್​​​​ಲೆಸ್ ಬ್ಯಾಟಿಂಗ್​ನಿಂದ ಅಬ್ಬರಿಸೋ ಜೈಸ್ವಾಲ್​​, ಪವರ್​​ ಪ್ಲೇನ ಪವರ್​​ಫುಲ್​ ಬ್ಯಾಟರ್​. ಇದಕ್ಕೆ ಜಿಂಬಾಬ್ವೆ ಎದುರಿನ 4ನೇ ಟಿ20 ಪಂದ್ಯದಲ್ಲಿ ಜೈಸ್ವಾಲ್​, 53 ಎಸೆತಗಳಲ್ಲಿ 93 ರನ್​​​​​​ ಸಿಡಿಸಿದ್ದೆ ಸಾಕ್ಷಿ.
ಪವರ್ ಪ್ಲೇ ಕಾ ಸುಲ್ತಾನ್​​ ಯಶಸ್ವಿ ಜೈಸ್ವಾಲ್..!
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ವರ್ಷವಾಗಿಲ್ಲ. ಈಗಾಗಲೇ ಟಿ20 ಕ್ರಿಕೆಟ್​​ನಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿದ್ದಾರೆ. ಪವರ್ ಪ್ಲೇನಲ್ಲಂತೂ ಬೌಂಡರಿ, ಸಿಕ್ಸರ್​ಗಳಿಂದ ಫ್ಯಾನ್ಸ್​ಗೆ ರಂಜಿಸುವ ಜೈಸ್ವಾಲ್, ಎದುರಾಳಿ ಪಾಲಿಗೆ ಆಕ್ಷರಶಃ ವಿಲನ್ ಆಗ್ತಿದ್ದಾರೆ. ಅದು ಯಾವ ಮಟ್ಟಕ್ಕೆ ಅಂದ್ರೆ ಕೆಲವೇ ತಿಂಗಳಲ್ಲಿ ಪವರ್​​​​​​​​ ಪ್ಲೇ ಕಾ ಸುಲ್ತಾನ್ ಎಂಬ ಬಿರುದು ಜೈಸ್ವಾಲ್ ಮುಕುಟಕ್ಕೇರಿದೆ. ಇದು ಜಸ್ಟ್ ಒಂದು ಮ್ಯಾಚ್.. ಒಂದು ಇನ್ನಿಂಗ್ಸ್​.. ಒಂದು ಸರಣಿಯ ಆಟ ನೋಡಿ ಹೇಳ್ತಿರುವ ಮಾತಲ್ಲ.
ಇದನ್ನೂ ಓದಿ:ಧೋನಿ, ಸಚಿನ್ ಎಲ್ಲರೂ ಬಂದಿದ್ದರು.. ಅಂಬಾನಿ ಪುತ್ರನ ಮದುವೆಗೆ ಬಾರದೆ ಕೊಹ್ಲಿ ಹೋಗಿದ್ದೆಲ್ಲಿಗೆ..?
/newsfirstlive-kannada/media/post_attachments/wp-content/uploads/2024/07/yashasvi-jaiswal.jpg)
2023ರಿಂದ ಪವರ್ ಪ್ಲೇನ ಸೂಪರ್ ಸ್ಟ್ರೈಕರ್​
2023ರಿಂದ ಯಶಸ್ವಿ ಜೈಸ್ವಾಲ್​ 19 ಇನ್ನಿಂಗ್ಸ್​ಗಳಲ್ಲಿ ಪವರ್ ಪ್ಲೇನಲ್ಲಿ ಬ್ಯಾಟ್ ಬೀಸಿದ್ದಾರೆ. ಬರೋಬ್ಬರಿ, 162ರ ಸ್ಟ್ರೈಕ್​ರೇಟ್​ನಲ್ಲಿ 421 ರನ್ ಸಿಡಿಸಿದ್ದಾರೆ. ಜೈಸ್ವಾಲ್ 3.5 ಎಸೆತಕ್ಕೊಂದು ಬೌಂಡರಿ ಸಿಡಿಸಿದ್ದಾರೆ. ಆ ಮೂಲಕ ಪವರ್ ಪ್ಲೇನ ಸೂಪರ್ ಸ್ಟ್ರೈಕರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ನೋ ಟೈಮ್ ವೇಸ್ಟ್​..!
ರೋಹಿತ್ ಶರ್ಮಾ ಆ್ಯಂಡ್ ಕೆ.ಎಲ್.ರಾಹುಲ್. ಟಿ20 ಫಾರ್ಮೆಟ್​ನ ನಂಬರ್.1 ಜೋಡಿ. ಪವರ್ ಪ್ಲೇನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಹೆಗ್ಗಳಿಕೆ ಈ ಜೋಡಿಗಿದೆ. ಇವರನ್ನು ಜೈಸ್ವಾಲ್​​ ಬೀಟ್ ಮಾಡಿದ್ದಾರೆ. ಪವರ್ ಪ್ಲೇನ ವೈಯಕ್ತಿಕ ಗರಿಷ್ಠ ಸ್ಕೋರ್​ನ ಟಾಪ್​-5ನಲ್ಲಿ ಯಶಸ್ವಿ ಜೈಸ್ವಾಲ್, 53 ರನ್​ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಇದ್ದಾರೆ.
ದಿನೇ ದಿನೇ ಮತ್ತಷ್ಟು ಫೈರಿ ಬ್ಯಾಟಿಂಗ್ ನಡೆಸ್ತಿರುವ ಯಶಸ್ವಿ ಜೈಸ್ವಾಲ್, ವಿಶ್ವ ಕ್ರಿಕೆಟ್​ ಲೋಕದ ನಯಾ ಸುಲ್ತಾನನಾಗಿ ಪರಿಚಯವಾಗ್ತಿದ್ದಾರೆ. ಸೀನಿಯರ್​ಗಳ ಸ್ಥಾನವನ್ನ ಸಮರ್ಥವಾಗಿ ತುಂಬೋ ಸಂದೇಶವನ್ನ ಈಗಾಗಲೇ ರವಾನಿಸಿದ್ದಾರೆ. ತನ್ನ ಪವರ್​ಫುಲ್​ ಹಿಟ್ಟಿಂಗ್​ನಿಂದ ಜೈಸ್ವಾಲ್​, ವಿಶ್ವದ ಮೋಸ್ಟ್ ಡಿಸ್ಟ್ರಕ್ಟಿವ್ ಓಪನರ್ ಆಗಿ ವಿಶ್ವ ಕ್ರಿಕೆಟ್​ನಲ್ಲಿ ರೂಪುಗೊಳ್ತಿದ್ದಾರೆ. ಮುಂದೆಯೂ ಇದೇ ಡೇರಿಂಗ್ ಬ್ಯಾಟಿಂಗ್ ಮುಂದುವರಿಯಲಿ ಅನ್ನೋದೇ ಅಭಿಮಾನಿಗಳ ಆಶಯ.
ಇದನ್ನೂ ಓದಿ:ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us