newsfirstkannada.com

ಪುನೀತ್​ಗೆ ಟಗರು ಗಿಫ್ಟ್​​​ ಕೊಟ್ಟ ಅಭಿಮಾನಿ; ಹೇಗಿತ್ತು ಇಂದಿನ ಅಪ್ಪು ಬರ್ತ್​ಡೇ ಸೆಲೆಬ್ರೇಷನ್​​..?

Share :

Published March 17, 2024 at 9:00pm

Update March 17, 2024 at 8:39pm

  ಗುಂಡ್ಲುಪೇಟೆಯಿಂದ ಅಪ್ಪು ಪುಣ್ಯಭೂಮಿಗೆ ಪಾದಯಾತ್ರೆ ಮಾಡಿದ ಅಭಿಮಾನಿ

  ಹೇಗಿತ್ತು ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್​​ ಬರ್ತ್​ಡೇ ಸಂಭ್ರಮ?

  ಮಾರ್ಚ್ 17 ಸ್ಫೂರ್ತಿ ದಿನ ಕುಟುಂಬಸ್ಥರಿಂದ 'ರಾಜಕುಮಾರ'ನಿಗೆ ನಮನ

ಮಾರ್ಚ್ 17 ಎಲ್ಲೆಲ್ಲೂ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ಅವರದ್ದೇ ಸಂಭ್ರಮ ಸಡಗರ. ಅಪ್ಪು 49ನೇ ಹುಟ್ಟುಹಬ್ಬ. ಅಭಿಮಾನಿಗಳು ದೊಡ್ಡ ಹಬ್ಬದಂತೆ ಸೆಲೆಬ್ರೇಟ್ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಪ್ಪು ಪುಣ್ಯಭೂಮಿ ಅಭಿಮಾನಿ ಸಾಗರದಿಂದ ಮಿಂದೆದ್ದಿದೆ. ಅಭಿಮಾನದ ಹರ್ಷೋದ್ಘಾರ ಝೇಂಕರಿಸಿದೆ.

ಈ ಸಲ ಅಪ್ಪು ಹುಟ್ಟುಹಬ್ಬ ಸಖತ್ ಸ್ಪೆಷಲ್. ಯಾಕಂದ್ರೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ಜಾಕಿ ರಿ-ರಿಲೀಸ್ ಆಗಿತ್ತು. ಹದಿನಾಲ್ಕು ವರ್ಷದ ನಂತರ ಜಾಕಿ ಚಿತ್ರವನ್ನ ಮತ್ತೆ ಬಿಗ್ ಸ್ಕ್ರೀನ್ ಮೇಲೆ ನೋಡಿ ಕಣ್ತುಂಬಿಕೊಂಡ ಅಭಿಮಾನಿಗಳು, ರಾಜಕುಮಾರನನ್ನ ಸಂಭ್ರಮಿಸಿದ್ದರು. ಮತ್ತೊಮ್ಮೆ ದೊಡ್ಮನೆ ಹುಡುಗನನ್ನು ಬೆಳ್ಳಿ ತೆರೆಮೇಲೆ ನೋಡಿ ಮನಸಾರೆ ಎಂಜಾಯ್ ಮಾಡಿದ್ದರು. ಈ ಸಂಭ್ರಮದಲ್ಲೂ ಅದೊಂದು ಮೌನ. ಅಪ್ಪು ನಮ್ಮ ಜೊತೆ ಇಲ್ಲವಲ್ಲ ಅನ್ನೋ ನೋವು. ಈ ನೋವಿನಲ್ಲೂ ಅಪ್ಪು ಹಬ್ಬ ಅರ್ಥಪೂರ್ಣವಾಗಿ ಆಗಿದ್ದು ವಿಶೇಷ.

ನಗುವಿನ ಒಡೆಯನ ಬರ್ತಡೇಗೆ ಶನಿವಾರ ರಾತ್ರಿಯಿಂದಲೇ ಫ್ಯಾನ್ಸ್ ರೆಡಿಯಾಗಿಬಿಟ್ರು. ಕೇಕ್ ಕತ್ತರಿಸಿ ನೀವು ನಮ್ಮ ಮನಸ್ಸುಗಳಲ್ಲಿ ಸದಾ ಹಸಿರಾಗಿರ್ತಾರಾ ಅಂತ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ರು. ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್, ಚಿನ್ನೇಗೌಡ್ರು, ಪುನೀತ್ ಪುತ್ರಿ ವಂದಿತಾ ಸೇರಿದಂತೆ ಅಭಿಮಾನಿಗಳ ಜೊತೆ ರಾಜ್ ಕುಟುಂಬವೂ ಒಮ್ಮೆ ಅಪ್ಪುಗೆ ಬರ್ತಡೇ ವಿಶ್ ಮಾಡಿ ಮೌನಕ್ಕೆ ಜಾರಿಬಿಡ್ತು. ಅಪ್ಪು ಸಂಭ್ರಮದಲ್ಲಿ ಬಹಳ ವಿಶೇಷವಾಗಿ ಗಮನ ಸೆಳೆದಿದ್ದು ಅನ್ನದಾನ. 1 ಲಕ್ಷ ಅಭಿಮಾನಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಿದ್ರು. ಮೂರುವರೆ ಸಾವಿರ ಕೆಜಿ ಚಿಕನ್​ನಿಂದ ತಯಾರಾದ ಬಿರಿಯಾನಿ ಹಂಚಿಕೆಯೇ ಅನ್ನ ಮತ್ತು ಅಭಿಮಾನದ ಮಹತ್ವ ಸಾರಿತ್ತು. ಕೋಲಾರದ ಅಭಿಮಾನಿಯೊಬ್ಬ ಅಪ್ಪು ಹೆಸರಲ್ಲಿ ಸಾಕಿದ್ದ ಎರಡು ಮುದ್ದಿನ ಟಗರುಗಳನ್ನ ಸಮಾಧಿ ಬಳಿ ತಂದು ಅಪ್ಪುಗೆ ನಮಿಸಿ, ಟಗರುಗಳನ್ನ ಸಮಾಧಿ ಕಾಯುವ ಸಿಬ್ಬಂದಿಗೆ ಒಪ್ಪಿಸಿ ಹೋಗಿದ್ದು ಈ ವರ್ಷದ ವಿಶೇಷ. ಅಪ್ಪು ಅವರ ಮೇಲಿನ ಅಭಿಮಾನಕ್ಕಾಗಿ ಅಭಿಮಾನಿಯೊಬ್ಬ ಗುಂಡ್ಲುಪೇಟೆಯಿಂದ ಅಪ್ಪು ಪುಣ್ಯಭೂಮಿಗೆ ಪಾದಯಾತ್ರೆ ಮಾಡಿದ್ದಾನೆ.

ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿದ್ದು ಮತ್ತೊಂದು ವಿಶೇಷ. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ರಾಘಣ್ಣ ಹಂಚಿಕೊಂಡಿದ್ದು ಎರಡು ವಿಷಯ. ಒಂದು ರಾಜ್ಯಾದ್ಯಂತ ಮರು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿರೋ ಜಾಕಿ. ಇನ್ನೊಂದು ಅಪ್ಪು ಹುಟ್ಟುಹಬ್ಬದ ತಿಂಗಳಿನಲ್ಲೇ ಅಂದ್ರೇ ಮಾರ್ಚ್.29ಕ್ಕೆ ಯುವ ಲಗ್ಗೆ ಇಡ್ತಿರೋ ಬಗ್ಗೆ. ಕಾಕತಾಳಿಯವೋ, ಶುಭ ಘಳಿಗೆಯೋ ಒಟ್ಟಿನಲ್ಲಿ ಅಪ್ಪುಮಾಯವಾದ ಆ ಕ್ಷಣ ನಿಜಕ್ಕೂ ನೆನಪಿನಾರ್ಹ. ಇನ್ನೂ ಪ್ರೀತಿಯ ಚಿಕ್ಕಪ್ಪನನ್ನ ಪ್ರೀತಿಯಿಂದಲೇ ನೆನಪಿಸಿಕೊಂಡ ಯುವ ಹಾಗೂ ವಿನಯ್ ಅಪ್ಪು ಹೇಗೆ ನಮಗೆಲ್ಲಾ ಮಾದರಿಯಾಗ್ತಾರೆ ಎಂಬುದನ್ನ ಸ್ಮರಿಸಿದ್ರು. ಅಭಿಮಾನಿ ಸಾಗರದ ಪ್ರೀತಿಗೆ ಶರಣಾಗದವರೇ ಇಲ್ಲ ಅಂತ ಮಾತುಗಳಲ್ಲೇ ಪವರ್ ಹೆಚ್ಚಿಸಿದ್ರು. ಶಾಸಕ ಗೋಪಾಲಯ್ಯ ಬಂದು ಅಪ್ಪು ಒಡನಾಟವನ್ನ ಸ್ಮರಿಸಿಕೊಂಡ್ರು. ಕುಲದೇವತೆಗೆ ಪೂಜೆ ಸಲ್ಲಿಸೋಕೆ ಹೊರಟಿದ್ದ ಪುನೀತ್ ಪತ್ನಿ ಅಶ್ವಿನಿಗೆ ಪುನೀತ್ ಹುಟ್ಟುಹಬ್ಬದ ಸಡಗರವನ್ನ ನೋಡೊಕೆ ಆಗಲಿಲ್ಲ. ಇನ್ನು ಡಾ. ರಾಜ್ ಕುಮಾರ್ ಪುತ್ರಿ ಲಕ್ಷ್ಮಿ ಹಾಗೂ ಅಳಿಯ ಎಸ್.ಎ. ಗೋವಿಂದರಾಜು ಕುಟುಂಬದಿಂದ ಅಪ್ಪು ಸಮಾಧಿಗೆ ಪೂಜೆ ಮಾಡಿದ್ರು. ಅಪ್ಪು ಸಮಾಧಿ ಬಳಿ ಕೇಕ್ ಕಟ್ ಮಾಡಿದ ಅಕ್ಕ ಹಾಗೂ ಭಾವ ಅಪ್ಪುನ ಸ್ಮರಿಸಿದರು.

ದೊಡ್ಮನೆ ಕಿಂಗ್, ಸ್ಯಾಂಡಲ್‌ವುಡ್ ರಾಜಕುಮಾರ ಅಪ್ಪು ಕನ್ನಡಿಗರ ಪಾಲಿಗೆ ಎಂದಿಗೂ ಕರಗದ ಬೆಟ್ಟ. ಮಾಸದ ಬೆಳಕು. ನಿಲ್ಲದ ಪವರ್ ಬ್ಯಾಂಕು. ಪ್ರೀತಿಯ ಸ್ಯಾಂಡಲ್‌ವುಡ್ ರಾಜಕುಮಾರನ ಹೊಗಳಿಕೆಯೇ ನಿರಂತರ. ಅಪ್ಪು ಅಭಿಮಾನದ ಸವಾರಿಯ ಜೊತೆಗೆ ಅಪ್ಪು ಅಭಿಮಾನಿಗಳಿಗೆ ಎಂದಿಗೂ ಮರೆಯಲಾಗದ ದಾರಿ ಸಿಕ್ಕಿದೆ. ಡಾ.ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲೂ ಹೋಗಿಲ್ಲ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲೇ ಅಜರಾಮರವಾಗಿದ್ದಾರೆ. ಇಂದಿನ ಪುನೀತ್ ಹುಟ್ಟುಹಬ್ಬದ ಹಿರಿಮೆಯೇ ಇದಕ್ಕೊಂದು ಸ್ವೀಟ್ ಎಕ್ಸ್ಂಪಲ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುನೀತ್​ಗೆ ಟಗರು ಗಿಫ್ಟ್​​​ ಕೊಟ್ಟ ಅಭಿಮಾನಿ; ಹೇಗಿತ್ತು ಇಂದಿನ ಅಪ್ಪು ಬರ್ತ್​ಡೇ ಸೆಲೆಬ್ರೇಷನ್​​..?

https://newsfirstlive.com/wp-content/uploads/2024/03/appu-5.jpg

Load More