VIDEO: 5 ಮೀಟರ್ ಎತ್ತರದ ಅಲೆಗಳು, ಬಿರುಕು ಬಿಟ್ಟ ಭೂಮಿ; ಜಪಾನ್‌ನಲ್ಲಿ ರಣಭೀಕರ ದೃಶ್ಯಗಳು

author-image
admin
Updated On
VIDEO: 5 ಮೀಟರ್ ಎತ್ತರದ ಅಲೆಗಳು, ಬಿರುಕು ಬಿಟ್ಟ ಭೂಮಿ; ಜಪಾನ್‌ನಲ್ಲಿ ರಣಭೀಕರ ದೃಶ್ಯಗಳು
Advertisment
  • ಕರಾವಳಿ ಪ್ರದೇಶದಲ್ಲಿದ್ದ ಜನರನ್ನ ತಕ್ಷಣವೇ ಸ್ಥಳಾಂತರಿಸಲು ಹರಸಾಹಸ
  • ಪ್ರಬಲ ಭೂಕಂಪಕ್ಕೆ ಜಪಾನ್‌ನ ಉತ್ತರ- ಮಧ್ಯಪ್ರದೇಶದ ಫುಲ್ ಶೇಕ್‌!
  • ಜಪಾನ್, ರಷ್ಯಾ, ಕೋರಿಯಾದಲ್ಲೂ ಸುನಾಮಿ ಸಂಭವಿಸೋ ಎಚ್ಚರಿಕೆ

ಪ್ರಬಲ ಭೂಕಂಪಕ್ಕೆ ತುತ್ತಾಗಿರುವ ಜಪಾನ್‌ನಲ್ಲಿ ಕ್ಷಣ, ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಗಢಗಢ ನಡುಗಿರೋ ಭೂಮಿಯಿಂದ ಹಲವೆಡೆ ಅಪಾರ ಹಾನಿ ಸಂಭವಿಸಿದೆ. ರಸ್ತೆಗಳು ಬಿರುಕು ಬಿಟ್ಟಿದ್ರೆ, ಜೀವ ಉಳಿಸಿಕೊಳ್ಳಲು ಜನರು ಪರದಾಟ ನಡೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಪಾನ್ ಭೂಕಂಪದ ಭೀಕರ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ.

ಪ್ರಬಲ ಭೂಕಂಪಕ್ಕೆ ಭೂಮಿ ಬಿರುಕು ಬಿಟ್ಟಿದ್ರೆ ಕಡಲ ತೀರದಲ್ಲಿ ರಕ್ಕಸ ಅಲೆಗಳ ಅಬ್ಬರ ಜೋರಾಗಿದೆ. ಕಡಲಾಳದಿಂದ ಅಪ್ಪಳಿಸುತ್ತಿರುವ ಭೀಕರ ಅಲೆಗಳು ಕಡಲ ತೀರಕ್ಕೆ ಬಂದು ಅಪ್ಪಳಿಸಿದೆ. ಸಮುದ್ರದ ಅಲೆಗಳ ಆರ್ಭಟಕ್ಕೆ ಕಡಲತೀರದಲ್ಲಿ ನೂರಾರು ಕಾರುಗಳು ಕೊಚ್ಚಿಕೊಂಡು ಹೋಗಿವೆ.

ಈ ತೀವ್ರ ಭೂಕಂಪದ ಹಿನ್ನೆಲೆಯಲ್ಲಿ ಜಪಾನ್‌ನಲ್ಲಿ ಸುನಾಮಿ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ ಅಲೆಗಳಂತೂ 5 ಮೀಟರ್‌ಗಳಷ್ಟು ಎತ್ತರಕ್ಕೆ ತಲುಪುತ್ತಿವೆ. ಈ ರಕ್ಕಸ ಅಲೆಗಳಿಂದ ಕರಾವಳಿ ಪ್ರದೇಶದಲ್ಲಿದ್ದ ಜನರನ್ನ ತಕ್ಷಣವೇ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ. ಭೂಕಂಪನದಿಂದ ದೊಡ್ಡ ಪ್ರಮಾಣದ ಹಾನಿಯಾಗಿರೋ ಸಾಧ್ಯತೆಯಿದೆ.

ಜಪಾನ್‌ನ ಉತ್ತರ- ಮಧ್ಯಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.4 ತೀವ್ರತೆ ದಾಖಲಾಗಿದೆ. ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶದಲ್ಲಿ ಇದರ ಪ್ರಭಾವ ಪ್ರಭಾವ ಹೆಚ್ಚಾಗಿದೆ. ಜಪಾನ್‌ನ ಮೆಟ್ರೋ ಸ್ಟೇಷನ್‌, ಏರ್ ಪೋರ್ಟ್‌ನಲ್ಲಿ ಭೂಮಿ ಗಢಗಢ ನಡುಗಿದ್ದು ಜನ ಭಯಭೀತರಾಗಿದ್ದರು.


">January 1, 2024

ಜಪಾನ್‌ನಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದು, ಬುಲೆಟ್ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಹಲವೆಡೆ ವಿದ್ಯುತ್‌ ಸಂಪರ್ಕ ಬಂದ್ ಆಗಿದ್ದು, ಜನರಿಗೆ ಸುನಾಮಿ ಭೀತಿ ಎದುರಾಗಿದೆ. ಜಪಾನ್‌ ಜೊತೆಗೆ ರಷ್ಯಾ, ಕೋರಿಯಾದಲ್ಲೂ ಸುನಾಮಿ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment