/newsfirstlive-kannada/media/post_attachments/wp-content/uploads/2025/03/Earthquake-2.jpg)
ಥೈಲ್ಯಾಂಡ್ ಮತ್ತು ಮಯನ್ಮಾರ್ ಭೂಕಂಪದಿಂದಾಗಿ ಕನಿಷ್ಠ 694 ಸಾವನ್ನಪ್ಪಿದ್ದು 1670 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗುತ್ತಿವೆ. ಮಯನ್ಮಾರ್ನ ಸಗೈಂಗ್ನ್ನು ಭೂಕಂಪನದ ಕೇಂದ್ರ ಎಂದು ಹೇಳಲಾಗುತ್ತಿದ್ದು. 7.7 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದೆ. ಇನ್ನೂ ಗಾಯಾಳುಗಳ ಸಂಖ್ಯೆಯಂತೂ ದೊಡ್ಡ ಮಟ್ಟದ್ದಾಗಿದೆ. ಸಾಮೂಹಿಕವಾಗಿ ರಾಜಧಾನಿ ನೇಪಿಡಾವ್ದ ಆಸ್ಪತ್ರೆಗೆ ನುಗ್ಗುತ್ತಿದ್ದಾರೆ. ಮಂಡಲಾಯದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಜನರ ಮೇಲೆ ಮಸೀದಿ ಕುಸಿದು ಬಿದ್ದಿದೆ. ಇದರಿಂದ ಬಹಳಷ್ಟು ಜನರು ಗಾಯಗಳಿಗೆ ಒಳಗಾಗಿದ್ದಾರೆ. ಇದೇ ಸಿಟಿಯ ಯುನಿವರ್ಸಿಟಿಯೊಂದು ಕೂಡ ಕುಸಿದು ಬಿದ್ದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ.. ಭಾರತೀಯರಿಗಾಗಿ ಸಹಾಯವಾಣಿ ಆರಂಭ
ಇನ್ನು ಮಯನ್ಮಾರ್ದ ಜುಂತಾ ಚೀಫ್ ಮಿನ್ ಔಂಗ್ ಹ್ಲಾಂಗ್, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅದು ಮಾತ್ರವಲ್ಲ ದೇಶದಲ್ಲಿ ಎಮರ್ಜೆನ್ಸಿಯನ್ನು ಘೋಷಿಸಿದ್ದಾರೆ. ಅಲ್ಲದೇ ಉಳಿದ ದೇಶಗಳು, ಯಾವುದೇ ಸಂಸ್ಥೆಗಳು ಸಹಾಯಕ್ಕೆ ಮುಂದೆ ಬನ್ನಿ ಎಂದು ಮನವಿಯನ್ನು ಕೂಡ ಮಾಡಿದ್ದಾರೆ.
ಇದನ್ನೂ ಓದಿ:ಭೀಕರ ಭೂಕಂಪಕ್ಕೆ ಪತರಗುಟ್ಟಿದ ಥೈಲ್ಯಾಂಡ್, ಮ್ಯಾನ್ಮಾರ್… ಒಂದೊಂದು ದೃಶ್ಯಗಳು ಮೈನಡುಗಿಸುತ್ತವೆ!
ಇನ್ನು ಮೆಟ್ರೋ ಮತ್ತು ರೈಲು ಸೇವೆಗಳನ್ನು ಥೈಲ್ಯಾಂಡ್ ರಾಜಧಾನಿ ಥೈನಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಥೈಲ್ಯಾಂಡ್ ಪ್ರಧಾನ ಮಂತ್ರಿ ಪೇಟೊಂಗ್‌ಟಾರ್ನ್ ಶಿನವಾತ್ರ ಎಲ್ಲಾ ಅಧಿಕೃತ ಸಭೆಗಳನ್ನು ಕ್ಯಾನ್ಸಲ್ ಮಾಡಿ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಲು ತುರ್ತು ಸಭೆಯನ್ನು ಕರೆದಿದ್ದಾರೆ. ಅವರು ಕೂಡ ಥೈಲ್ಯಾಂಡ್ನಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಿದ್ದಾರೆ.
ಇನ್ನು ಮಯನ್ಮಾರ್ ಭೂಕಂಪದಲ್ಲಿ ನೂರಾರು ಮಂದಿ ಗಾಯಾಳುಗಳಾಗಿದ್ದು, ಗಾಯಾಳುಗಳಿಗೆ ರಕ್ತದಾನ ಮಾಡುವಂತೆ ಸೇನೆಯು ಮನವಿ ಮಾಡಿದೆ. ಅಮೆರಿಕಾದಿಂದ ಈಗಾಗಲೇ ಮಯನ್ಮಾರ್ಗೆ 5 ಮಿಲಿಯನ್ ಡಾಲರ್ ನೆರವು ನೀಡಲು ನಿರ್ಧಾರ ಮಾಡಿದೆ.
ಇನ್ನು ಥೈಲ್ಯಾಂಡ್ನಲ್ಲಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಭೂಕಂಪದಿಂದಾಗಿ ಇಲ್ಲಿ 22 ಮಂದಿಗೆ ಗಾಯಗಳಾಗಿದ್ದು 101 ಜನರು ನಾಪತ್ತೆಯಾಗಿದ್ದಾರೆ. ಬ್ಯಾಂಕಾಕ್‌ನಲ್ಲಿ ದೊಡ್ಡ ಬಿಲ್ಡಿಂಗ್ ಕುಸಿತದಿಂದಾಗಿ 101 ಮಂದಿ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿರುವ ಸಂಶಯವಿದೆ.
ಇನ್ನು ಭೂಕಂಪದಿಂದ ನಲುಗಿದ ಎರಡು ರಾಷ್ಟ್ರಗಳಿಗೆ ಭಾರತದಿಂದ ಇಂಡಿಯನ್ ಏರ್ಫೋರ್ಸ್ನ ಸಿ-130 ಜೆ ವಿಮಾನದಲ್ಲಿ ರಕ್ಷಣಾ ಸಾಮಗ್ರಿ ರವಾನೆಯಾಗಿದೆ. ಟೆಂಟ್, ಸ್ಲೀಪಿಂಗ್ ಬ್ಯಾಗ್, ಫುಡ್, ಜನರೇಟರ್ ಸೆಟ್ಗಳನ್ನು ರವಾನೆ ಮಾಡಲಾಗಿದೆ. ಭಾರತದಿಂದ ಪ್ಯಾರಾಸಿಟಮಲ್, ಆ್ಯಂಟಿಬಯೋಟಿಕ್ಸ್, ಗ್ಲೌಸ್, ಸೀರಂಜ್, ಬ್ಯಾಂಡೇಜ್ ಕೂಡ ರವಾನಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ