/newsfirstlive-kannada/media/post_attachments/wp-content/uploads/2025/04/Mitchell_Marsh_1.jpg)
ಮುಂಬೈ ಇಂಡಿಯನ್ಸ್ ಜೊತೆ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಓಪನರ್ ಭರ್ಜರಿ ಹಾಫ್ಸೆಂಚುರಿ ಸಿಡಿಸಿದ್ದಾರೆ.
ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು, ಎದುರಾಳಿ ಲಕ್ನೋ ಟೀಮ್ ಅನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕರಮ್ ಉತ್ತಮ ಆರಂಭ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾಗೆ ಬಿಗ್ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ.. ಮುಂಬೈ ತಂಡದಿಂದ ಹಿಟ್ಮ್ಯಾನ್ ಹೊರಕ್ಕೆ!
ಕ್ರೀಸ್ನಲ್ಲಿ ಬಿರುಸಿನ ಬ್ಯಾಟಿಂಗ್ ಮುಂದುವರೆಸಿರುವ ಮಿಚೆಲ್ ಮಾರ್ಷ್ ಮುಂಬೈ ಬೌಲರ್ಗಳನ್ನ ಬೆಂಡೆತ್ತಿದ್ದಾರೆ. ಹೇಗೆಂದರೆ ಹಾಗೇ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿದ ಮಿಚೆಲ್ ಮಾರ್ಷ್ ಅರ್ಧ ಶತಕ ಪೂರೈಸಿದ್ದಾರೆ. ಕೇವಲ 28 ಬಾಲ್ಗಳನ್ನು ಎದುರಿಸಿರುವ ಮಿಚೆಲ್ ಮಾರ್ಷ್ 7 ಅದ್ಭುತವಾದ ಬೌಂಡರಿ ಹಾಗೂ 2 ಅಮೋಘವಾದ ಸಿಕ್ಸರ್ಗಳಿಂದ ಅರ್ಧಶತಕ ಬಾರಿಸಿದರು.
ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಮಿಚೆಲ್ ಮಾರ್ಷ್ ಬ್ಯಾಟಿಂಗ್ಗೆ ಮುಂಬೈನ ಯುವ ಬೌಲರ್ ವಿಘ್ನೇಶ್ ಪುತೂರು ಬ್ರೇಕ್ ಹಾಕಿದ್ದಾರೆ. 31 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿಯಿಂದ 60 ರನ್ ಗಳಿಸಿದ್ದರು. ಈ ವೇಳೆ ವಿಘ್ನೇಶ್ ಪುತೂರು ಹಾಕಿದ ಬಾಲ್ ಅನ್ನು ಬಾರಿಸಲು ಹೋಗಿದ್ದಾಗ ಮಾರ್ಷ್, ವಿಘ್ನೇಶ್ ಪುತೂರಿಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ. ಸದ್ಯ ಲಕ್ನೋ ತಂಡ 1 ವಿಕೆಟ್ ನಷ್ಟಕ್ಕೆ 8 ಓವರ್ಗೆ 88 ರನ್ಗಳಿಂದ ಬ್ಯಾಟಿಂಗ್ ಮಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ