ಗೂಗಲ್​ನ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್​ ರಾಘವನ್ ನೇಮಕ! ಇವರು ಎಲ್ಲಿಯವರು? ಸಾಧನೆಗಳೇನೇನು?

author-image
AS Harshith
Updated On
ಗೂಗಲ್​ನ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್​ ರಾಘವನ್ ನೇಮಕ! ಇವರು ಎಲ್ಲಿಯವರು? ಸಾಧನೆಗಳೇನೇನು?
Advertisment
  • ಪ್ರಭಾಕರ್​ ರಾಘವನ್ ಯಾರು ಗೊತ್ತಾ? ಹಿನ್ನೆಲೆ ಏನು?
  • ಇವರು ಸಲಹಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ
  • ಗೂಗಲ್​ ಸೇರುವ ಮೊದಲು Yahooನಲ್ಲಿ ಕೆಲಸ ಮಾಡುತ್ತಿದ್ರು

ಭಾರತೀಯರು ಬುದ್ಧಿವಂತರು. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಾಕ್ಷಿ ಹಲವಷ್ಟಿವೆ. ಹೀಗೆ ಮನಸ್ಸು ಮಾಡಿ ಜಗತ್ತಿನ ದೊಡ್ಡ ಕಂಪನಿಗಳ ಸಿಇಒ ಆಗಿ ಅನೇಕ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪ್ರಮುಖ ಉದಾಹರಣೆ ಎಂದರೆ ಸುಂದರ್​ ಪಿಚ್ಚೈ, ಸತ್ಯ ನಡೆಲ್ಲಾ, ಪರಾಗ್​ ಅಗರ್​ವಾಲ್​, ಸಂಜಯ್​ ಮೆಹೋತ್ರಾ, ಶಂತನು ನಾರಾಯಣ್​, ಅರವಿಂದ್​​ ಕೃಷ್ಣ, ಜಯಶ್ರೀ ಉಲ್ಲಾಲ್​​, ಲೀನಾ ನಾಯರ್​, ನಿಕೇಶ್​ ಅರೋರಾ ಇಷ್ಟೇ ಏಕೆ ಬಾಹ್ಯಕಾಶಕ್ಕೆ ಹೋದ ಸುನಿತಾ ವಿಲಿಯಮ್ಸ್​ ಅವರನ್ನು ಕೂಡ ನೆನಪಿಸಿಕೊಳ್ಳಬೇಕು. ಆದರೀಗ ಮತ್ತೊಂದು ಸಿಹಿ ಸುದ್ದಿ ಎಂದರೆ ಗೂಗಲ್​ನ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್​ ರಾಘವನ್​ ಅವರನ್ನು ನೇಮಕಗೊಂಡಿದ್ದಾರೆ.

ನಿಕ್​​ ಎನ್​ ಫಾಕ್ಸ್​​ನ ಕಾರ್ಯನಿರ್ವಾಹಕರಾಗಿದ್ದ ಪ್ರಭಾಕರ್​ ರಾಘವನ್​ ಈಗ ಗೂಗಲ್​ ಹೊಸ ಹುದ್ದೆಯನ್ನು ನೀಡಿದೆ. ಸಂತಸದ ಸಂಗತಿ ಎಂದರೆ ಇವರು ಭಾರತ ಮೂಲದವರಾಗಿದ್ದು, ಮದ್ರಾಸಿನವರು.

ಇದನ್ನೂ ಓದಿ: ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ, ಸ್ವಯಂ ದ್ವೇಷದಿಂದ ಆಚೆ ಬರಲು ಇವೆ 7 ದಾರಿಗಳು

ಮದ್ರಾಸ್​​ ಇಂಡಿಯನ್​ ಇನ್​ಸ್ಟಿಟ್ಯೂಟ್​​ ಆಫ್​ ಟೆಕ್ನಾಲಜಿಯಲ್ಲಿ ಬ್ಯಾಚುಲರ್​ ಆಫ್​ ಟೆಕ್ನಾಲಜಿ ಮತ್ತು ಪಿಎಚ್​ಡಿ ಪಡೆದಿದ್ದಾರೆ. ಯುಸಿ ಬ್ಲರ್ಕಿಯಿಂದ ಎಲೆಕ್ಟ್ರಿಕ್​ ಎಂಜಿನಿಯರಿಂಗ್​​ ಮತ್ತು ಕಂಪ್ಯೂಟರ್​​ ಸೈನ್ಸ್​ ಮಾಡಿದ್ದಾರೆ.

ಪ್ರಭಾಕರ್​ ರಾಘವನ್​ ನ್ಯಾಷನಲ್​ ಅಕಾಡೆಮಿ ಆಫ್​​ ಎಂಜಿನಿಯರಿಂಗ್​ನ ಸದಸ್ಯರಾಗಿದ್ದು, ಇನ್​​ಸ್ಟಿಟ್ಯೂಟ್​​ ಆಫ್​​ ಎಲೆಕ್ಟ್ರಿಕಲ್​​ ಮತ್ತು ಎಲೆಕ್ಟ್ರಾನಿಕ್ಸ್​ ಇಂಜಿನಿಯರ್ಸ್​​ ಮತ್ತು ಅಸೋಸಿಯೇಷನ್​ ಫಾರ್​ ಕಂಪ್ಯೂಟಿಂಗ್​​ ಮೆಷಿನರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಸ್ಟ್ಯಾನ್​ಫೋರ್ಡ್​​​ ವಿಶ್ವವಿದ್ಯಾನಿಲಯದಲ್ಲಿ ಸಲಹಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಎಸಿಎಮ್​ನ ಮುಖ್ಯ ಸಂಪಾದಕರು ಆಗಿದ್ದರು. 2009ರಲ್ಲಿ ಇವರಿಗೆ ಬೊಲೆಗ್ನಾ ವಿಶ್ವವಿದ್ಯಾಲಯ ಲಾರಿಯಾ ಗೌರವಾನಿತ್ವ ಸನ್ಮಾನವನ್ನು ಮಾಡಿ ಪ್ರಶಸ್ತಿಯನ್ನು ನೀಡಿದೆ.

ಇದನ್ನೂ ಓದಿ: ಟೀ ಶರ್ಟ್​​, ಜೀನ್ಸ್​​​ ಪ್ಯಾಂಟ್​​ ಹಾಕಿದ್ದಕ್ಕೆ ಸ್ಟಾಲಿನ್​​ ಪುತ್ರನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ; ಮುಂದೇನು?​​​

ಗೂಗಲ್​ ಸೇರುವ ಮೊದಲು Yahooನಲ್ಲಿ ಕೆಲಸ ಮಾಡುತ್ತಿದ್ದರು. ಜಾಹೀರಾತು ಶ್ರೇಯಾಂಕ, ಮಾರುಕಟ್ಟೆ ವಿನ್ಯಾಸದ ಮೇಲೆ ಹೆಚ್ಚು ಕೆಲಸ ಮಾಡುತ್ತಿದ್ದರು. ಐಬಿಎಮ್​ನಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದ್ದರು.

ಆರ್ಟಿಫಿಶೀಯಲ್​ ಇಂಟೆಲಿಜೆನ್ಸ್​ ಚಾಲಿತ ಸೇವೆಯನ್ನು ಮಾರುಕಟ್ಟೆಗೆ ತರುವುದು ಮತ್ತು ಶತಕೋಟಿ ಬಳಕೆದಾರರಿಗೆ ಈ ಸೇವೆಯನ್ನು ವಿಸ್ತರಿಸುವಲ್ಲಿ ರಾಘವನ್​ ಕೊಡುಗೆ ಕೂಡ ಸೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment