/newsfirstlive-kannada/media/post_attachments/wp-content/uploads/2024/06/kalki-1.jpg)
ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾ ತೆರೆಗೆ ಬಂದು ಎರಡು ದಿನಗಳು ಕಳೆದಿವೆ. ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಜೊತೆಗೆ ದೊಡ್ಡ ಮೊತ್ತದ ಗಳಿಕೆ ಕಂಡ ಕಲ್ಕಿ ಸಿನಿಮಾ ಎರಡನೇ ದಿನ ಕೊಂಚ ಕುಸಿದಿದೆ.
ನಾಗ್ ಅಶ್ಚಿನ್ ನಿದೇರ್ಶನದಲ್ಲಿ ಕಲ್ಕಿ ಸಿನಿಮಾ ಮೂಡಿಬಂದಿದೆ. ಚಲಸಾನಿ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ. ತಮ್ಮ ವೈಜಯಂತಿ ಸಂಸ್ಥೆ ಮೂಲಕ ಕಲ್ಕಿ ಸಿನಿಮಾವನ್ನು ಭರ್ಜರಿ ಮೊತ್ತಕ್ಕೆ ನಿರ್ಮಿಸಿದ್ದಾರೆ. ಅಂದಹಾಗೆಯೇ ಸ್ಯಾಕ್ನಿಲ್ಕ್ ವರದಿಯಂತೆ, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ಕಲ್ಕಿ ಸಿನಿಮಾ ಮೊದಲ ದಿನ 94 ಕೋಟಿ ರೂಪಾಯಿ ಗಳಿಸಿತ್ತು. ಆದರೆ 2ನೇ ದಿನ ಶುಕ್ರವಾರದಂದು ಶೇ.50ರಷ್ಟು ಕುಸಿದಿದೆ.
ಇದನ್ನೂ ಓದಿ: ಕಾರುಗಳ ಮುಖಾಮುಖಿ ಡಿಕ್ಕಿ.. 7 ಜನರು ಸ್ಥಳದಲ್ಲೇ ಸಾವು, 5 ಮಂದಿ ಗಂಭೀರ
ಕಲ್ಕಿ ಸಿನಿಮಾ ಬಿಡುಗಡೆಗೊಂಡ 2ನೇ ದಿನ ಭಾರತದಲ್ಲಿ 54 ಕೋಟಿಯಷ್ಟು ಗಳಿಸಿದೆ. ಇನ್ನು ಭಾಷಾವಾರು ವಿತರಣೆ ಬಗ್ಗೆ ಮಾಹಿತಿ ಬಂದಿಲ್ಲ. ತೆಲುಗು ಆವೃತ್ತಿ ಕೊಂಚ ಹೆಚ್ಚು ಗಳಿಸಿದೆ ಎನ್ನಲಾಗುತ್ತಿದೆ. ತಮಿಳು, ಹಿಂದಿ, ಕನ್ನಡ, ಮಲಯಾಳಂ ಬಗ್ಗೆ ಮಾಹಿತಿ ಹೊರಬರಬೇಕಿದೆ.
ಇದನ್ನೂ ಓದಿ: ಸೇತುವೆ ಶಿಥಿಲ, ನದಿಗೆ ಬಿದ್ದ ಕಾರು, ಗೋಡೆ ಬಿದ್ದು ವೃದ್ಧೆ ಸಾವು.. ರಾಜ್ಯದಲ್ಲಿ ಮಳೆಯ ಅವಾಂತರ ಒಂದಾ.. ಎರಡಾ..
ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾವು ಬಿಗ್ ಬಜೆಟ್ನಲ್ಲಿ ನಿರ್ಮಿಸಲಾಗಿತ್ತು. ಆದರೆ ಭಾರತದ ಉದ್ದಗಲಕ್ಕೂ ನೀಡಿದ ಪ್ರದರ್ಶನದಲ್ಲಿ 103 ಕೋಟಿ ಗಳಿಕೆ ಕಂಡಿತ್ತು. ಆದರೆ ಕಲ್ಕಿ ಬಿಡುಗಡೆಗೊಂಡ 2 ದಿನಗಳಲ್ಲಿ ಅದನ್ನು ಮೀರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ