/newsfirstlive-kannada/media/post_attachments/wp-content/uploads/2025/01/RAM-CHARAN.jpg)
ಪ್ಯಾನ್ ಇಂಡಿಯಾ ಸ್ಟಾರ್, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ಡಾರ್ಲಿಂಗ್ (Rebel Star Prabhas) ಮದುವೆ ಸುದ್ದಿಗಾಗಿ ಅಭಿಮಾನಿಗಳು ಮತ್ತು ಸಿನಿಮಾ ತಾರೆಯರು ಕಾತರದಿಂದ ಕಾಯ್ತಿದ್ದಾರೆ.
ಅವರು ಯಾವಾಗ ಮದ್ವೆ ಆಗ್ತಾರೆ? ಯಾರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸ್ತಾರೆ ಎಂಬ ಕುತೂಹಲ ತುಂಬಾ ದಿನಗಳಿಂದ ಇದೆ. ಈ ಹಿಂದೆ ‘ಬಾಹುಬಲಿ’ ಚಿತ್ರದ ಸಂದರ್ಭದಲ್ಲಿ ಮದ್ವೆಯಾಗುವುದಾಗಿ ಹೇಳಿದ್ದ ಪ್ರಭಾಸ್, ನಂತರ ಆ ಬಗ್ಗೆ ಮಾತೇ ಆಡಿಲ್ಲ. ಆದರೆ ಅಭಿಮಾನಿಗಳು ಖುಷಿ ಪಡುವ ಸುದ್ದಿಯನ್ನು ಪ್ರಭಾಸ್ ಸ್ನೇಹಿತ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನೀಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಅಥವಾ ರಜತ್! ಯಾರು ಕ್ಯಾಪ್ಟನ್ ಆದ್ರೆ ಒಳ್ಳೆಯದು ಅಂತಾ ತಿಳಿಸಿದ RCB ಮುಖ್ಯ ಕೋಚ್
ನಂದಮುರಿ ಬಾಲಕೃಷ್ಣ ಅವರ ಜನಪ್ರಿಯ ಅನ್‌ಸ್ಟಾಪಬಲ್ ಟಾಕ್ ಶೋನಲ್ಲಿ (Unstoppable Show) ರಾಮ್ ಚರಣ್ ಸ್ನೇಹಿತನ ಮದುವೆ ಬಗ್ಗೆ ಮಾತನ್ನಾಡಿದ್ದಾರೆ. ಬಾಲಕೃಷ್ಣ ಅವರು ಪ್ರಭಾಸ್ ಮದುವೆ ಬಗ್ಗೆ ಕೇಳಿದರು. ಆಗ ರಾಮ್ ಚರಣ್ ನಕ್ಕಿದ್ದಾರೆ. ಆ ಮೂಲಕ ಪ್ರಭಾಸ್ ಅವರ ಮದ್ವೆ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ವಧು ಬಗ್ಗೆ ರಾಮ್ ಚರಣ್ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆಂಧ್ರ ಪ್ರದೇಶದ ಗಣಪವರ್ನ ಹುಡುಗಿಯನ್ನು ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ಶೋನ ಪೂರ್ಣ ಸಂಚಿಕೆ ಸಂಕ್ರಾಂತಿ ಹಬ್ಬದ ದಿನ ಪ್ರಸಾರವಾಗಲಿದೆ. ಪ್ರಭಾಸ್ ಮದುವೆ ಬಗ್ಗೆ ರಾಮ್ ಚರಣ್ ಸುಳಿವು ನೀಡಿದ ಬೆನ್ನಲ್ಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಆ ಹುಡುಗಿ ಯಾರು? ಎಂದು ನೆಟ್ಟಿಗರು ಕೇಳ್ತಿದ್ದಾರೆ. ರಾಮ್ ಚರಣ್ ಅವರ ಗೇಮ್ ಚೇಂಜರ್ ಸಿನಿಮಾ ರಿಲೀಸ್ ಆಗಿದೆ. ಶಂಕರ್ ನಿರ್ದೇಶನದ ಈ ಚಿತ್ರವು ಜನವರಿ 10 ರಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದನ್ನೂ ಓದಿ: ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ; ಫ್ಯಾನ್ಸ್ ಖುಷಿ ಪಡುವ 5 ಫೋಟೋ ಹಂಚಿಕೊಂಡ ಗೀತಕ್ಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ