/newsfirstlive-kannada/media/post_attachments/wp-content/uploads/2024/03/prabhas-meeting.jpg)
ಸ್ಟಾರ್ ನಟ ಪ್ರಭಾಸ್ ಮದುವೆ ಯಾವಾಗ? ಎಂದು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಡಾರ್ಲಿಂಗ್ ಬ್ಯುಸಿಯಾಗಿಬಿಟ್ಟಿದ್ದಾರೆ. ವಯಸ್ಸು 40 ದಾಟಿದರೂ ಪ್ರಭಾಸ್ ಮಾತ್ರ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಇದೀಗ ದಿಢೀರನೆ ಮತ್ತೆ ಬಾಹುಬಲಿ ಮದುವೆ ವಿಚಾರ ಚರ್ಚೆಗೆ ಬಂದಿದೆ.
ಉದ್ಯಮಿ ಮಗಳ ವರಿಸುತ್ತಾರಾ?
ಸ್ಟಾರ್ ಸಾಲು ಸಾಲು ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿ ಇರುವ ಪ್ರಭಾಸ್ ಅವರು ಮೋಸ್ಟ್ ಬ್ಯಾಚುಲರ್. ಡಾರ್ಲಿಂಗ್ಗೆ 45 ವರ್ಷಗಳು ತುಂಬಿದ್ದರೂ ಇನ್ನು ಅವರಿಗೆ ಕಂಕಣಭಾಗ್ಯ ಎನ್ನುವುದು ರೀಲ್ ಮಾತ್ರ, ರಿಯಲ್ನಲ್ಲಿ ಇಲ್ಲ ಎಂದು ಹೇಳಲಾಗುತ್ತಿತ್ತು. ಸದ್ಯ ಇದಕ್ಕೆ ಫುಲಿಸ್ಟಾಪ್ ಬೀಳುವ ಸಂಭವ ಬಂದಿದ್ದು ಡಾರ್ಲಿಂಗ್ ಪ್ರಭಾಸ್ ವಿವಾಹ ಆಗೋ ಕಾಲ ಕೂಡಿ ಬಂದಿದೆ ಎನ್ನಲಾಗುತ್ತಿದೆ.
ಹೈದರಾಬಾದ್‌ನ ದೊಡ್ಡ ಉದ್ಯಮಿಯ ಮಗಳನ್ನು ಪ್ರಭಾಸ್ ವರಿಸುತ್ತಿದ್ದಾರಂತೆ. ಪ್ರಭಾಸ್ ಅವರ ಚಿಕ್ಕಮ್ಮ ಶ್ಯಾಮಲಾ ದೇವಿ ಅವರು ಹುಡುಗಿಯನ್ನು ನೋಡಿ ಆಯ್ಕೆ ಮಾಡಿದ್ದಾರೆ ಎನ್ನುವ ಮಾತುಗಳು ತೆಲುಗು ಸಿನಿ ರಂಗದಲ್ಲಿ ಭಾರೀ ಸದ್ದು ಮಾಡ್ತಿದೆ. ಚಿಕ್ಕಮ್ಮ ಹುಡುಗಿಯನ್ನು ನೋಡಿದ ಮೇಲೆಯೇ ಪ್ರಭಾಸ್ ಮದುವೆಯ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೆಂಡ್ತಿ ವಿಜಯಲಕ್ಷ್ಮಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ನಟ ದರ್ಶನ್!
ಟಾಲಿವುಡ್ ಮೋಸ್ಟ್ ಬ್ಯಾಚುಲರ್ ಆಗಿರುವ ಪ್ರಭಾಸ್ ಅವರ ಮದುವೆ ಕುರಿತು ಗಾಸಿಪ್, ಊಹಾಪೋಹಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಉದ್ಯಮಿ ಮಗಳ ಜೊತೆ ಮದುವೆ ಆಗಲಿ ಎಂಬ ಸುದ್ದಿ ಅನುಷ್ಕ ಶೆಟ್ಟಿ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಪ್ರಭಾಸ್ ಅವರು ಅನುಷ್ಕಾ ಶೆಟ್ಟಿ ಬದಲು ಬೇರೆ ಹುಡುಗಿ ಜೊತೆ ಮದುವೆ ಆಗಲಿದ್ದಾರೆ ಎಂಬುದನ್ನು ತಿಳಿದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಭಾಸ್ ಮದುವೆ ಸುದ್ದಿ ಸುಳ್ಳು.. ಆಪ್ತರ ಸ್ಪಷ್ಟನೆ
ದೊಡ್ಡ ಬ್ಯುಸಿನೆಸ್ ಮ್ಯಾನ್ ಅವರ ಮಗಳನ್ನು ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡುತ್ತಿದೆ. ಇದರ ಬೆನ್ನಲ್ಲೇ ಪ್ರಭಾಸ್ ಆಪ್ತರು ಸ್ಪಷ್ಟನೆ ನೀಡಿದ್ದು, ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ ಎನ್ನುವುದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.
ಅದೇನೆ ಇರಲಿ.. ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಅವರನ್ನು ಕೈ ಹಿಡಿಯಲು ಸಾಕಷ್ಟು ಯುವತಿಯರು ಸಿದ್ಧರಿದ್ದಾರೆ. ಆದರೆ ಡಾರ್ಲಿಂಗ್ ಯಾಕೋ ಮನಸ್ಸು ಮಾಡ್ತಿಲ್ಲ. ಆಪ್ತರು ಏನೇ ಹೇಳಿದ್ರೂ.. ಕಿಡಿ ಇಲ್ಲದ ಹೊಗೆಯಾಡುವುದಿಲ್ಲ. ಹೀಗಾಗಿ ಹೈದರಾಬಾದ್ ಉದ್ಯಮಿಯ ಮಗಳ ಜೊತೆ ಪ್ರಭಾಸ್ ಮದುವೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಹಲ್‌ಚಲ್ ಎಬ್ಬಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ