newsfirstkannada.com

ಪ್ರಭಾಸ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಡೈರೆಕ್ಟರ್ ಪ್ರಶಾಂತ್ ನೀಲ್ ಬರ್ತ್​ಡೇಗೆ ಸಲಾರ್​ ಟೀಸರ್ ರಿಲೀಸ್​​

Share :

Published July 4, 2023 at 9:30am

    ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಲಿದೆ ಸಲಾರ್ ಟೀಸರ್..!

    ಕನ್ನಡದ ಪ್ರಶಾಂತ್ ನೀಲ್, ತೆಲುಗಿನ ಪ್ರಭಾಸ್​ ಕಾಂಬಿನೇಷನ್​

    ಈ ಸಿನಿಮಾ ಕೆಜಿಎಫ್​ ಸಿನಿಮಾದ ಜಾನರ್ ಆಗಿರುತ್ತಾ, ಇಲ್ವಾ?

ಈ ವರ್ಷದ ಅತಿ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದು ಇದಕ್ಕೆಲ್ಲಾ ಜುಲೈ 06 ರಂದು ತೆರೆ ಬೀಳಲಿದೆ.

ಸಲಾರ್ ಸಿನಿಮಾವನ್ನು ಸ್ಯಾಂಡಲ್​ವುಡ್​ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಟ್​ ಮಾಡುತ್ತಿದ್ದಾರೆ. ಜುಲೈ 06 ರಂದು ಪ್ರಶಾಂತ್ ನೀಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡದವರು ಸಲಾರ್ ಸಿನಿಮಾದ ಟೀಸರ್ ರಿಲೀಸ್​ ಮಾಡಲು ಮುಂದಾಗಿದ್ದಾರೆ. ಅಂದು ಬೆಳಗ್ಗೆ 5.12ಕ್ಕೆ 5 ಭಾಷೆಗಳಲ್ಲಿ ಸಲಾರ್ ಸಿನಿಮಾ ಟೀಸರ್ ಭರ್ಜರಿಯಾಗಿ ರಿಲೀಸ್​ ಆಗಲಿದೆ.

ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್- 2’ ಮತ್ತು ‘ಕಾಂತಾರ’ ಸಿನಿಮಾಗಳು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, ಸಲಾರ್ ಸಿನಿಮಾ ನಿರ್ಮಾಣ ಮಾಡಿದೆ. ಕಳೆದ 2 ವರ್ಷಗಳಿಂದ ಚಿತ್ರತಂಡದವರು ಈ ಸಿನಿಮಾದ ಶೂಟಿಂಗ್​ ಮಾಡುತ್ತಿದ್ದರು ಯಾವುದೇ ಒಂದು ಸಣ್ಣ ಸುಳಿವು ಕೂಡ ಮಾಧ್ಯಮಗಳಿಗೆ ಬಿಟ್ಟುಕೊಟ್ಟಿಲ್ಲ. ಇದರಿಂದಾಗಿಯೇ ಸಲಾರ್​ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಸಲಾರ್ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪ್ರಭಾಸ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಡೈರೆಕ್ಟರ್ ಪ್ರಶಾಂತ್ ನೀಲ್ ಬರ್ತ್​ಡೇಗೆ ಸಲಾರ್​ ಟೀಸರ್ ರಿಲೀಸ್​​

https://newsfirstlive.com/wp-content/uploads/2023/07/SALAAR_PRABHAS.jpg

Load More