ಶ್ರೇಯಸ್​ ಅಯ್ಯರ್ ಮುಂದೆ ರಿಷಭ್ ಪಂತ್​ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ

author-image
Bheemappa
Updated On
ಶ್ರೇಯಸ್​ ಅಯ್ಯರ್ ಮುಂದೆ ರಿಷಭ್ ಪಂತ್​ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ
Advertisment
  • ಲಕ್ನೋ ಬೌಲರ್​ಗಳನ್ನ ಮನಬಂದಂತೆ ಚಚ್ಚಿದ ಪಂಜಾಬ್ ಕಿಂಗ್ಸ್
  • ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ ಪ್ರಭಸಿಮ್ರನ್ ಸಿಂಗ್
  • ತವರಿನ ಸ್ಟೇಡಿಯಂನಲ್ಲಿ ಭಾರೀ ಮುಖಭಂಗ ಅನುಭವಿಸಿದ ಲಕ್ನೋ

ತವರಿನ ಅಂಗಳದಲ್ಲಿ ನಡೆದ 2025ರ ಐಪಿಎಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋತು ಹೋಗಿದೆ. ಪ್ರಭಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಅರ್ಧಶತಕದಿಂದ ಪಂಜಾಬ್ ಸತತ 2ನೇ ಗೆಲುವು ದಾಖಲಿಸಿದೆ. ​

ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಲಕ್ನೋ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್​ ಬ್ಯಾಟಿಂಗ್ ಮಾಡಿ ಬೇಗನೇ ವಿಕೆಟ್ ಒಪ್ಪಿಸಿದರು. ಮಾರ್ಷ್​ ಡಕೌಟ್ ಆಗಿ ಹೊರ ನಡೆದ್ರೆ, ಮಾರ್ಕ್ರಾಮ್ 28 ರನ್​ಗೆ ಕ್ಲೀನ್ ಬೋಲ್ಡ್ ಆದರು.

publive-image

ನಿಕೋಲಸ್ ಪೂರನ್ ತಮ್ಮ ಭರ್ಜರಿ ಬ್ಯಾಟಿಂಗ್​ನಿಂದ ಕೇವಲ 30 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಮೇತ 44 ರನ್​ ಗಳಿಸಿ ಆಡುವಾಗ ಔಟ್ ಆಗಿ ಹಾಫ್​ಸೆಂಚುರಿ ಮಿಸ್ ಮಾಡಿಕೊಂಡರು. ಡೇವಿಡ್ ಮಿಲ್ಲರ್ 19, ಸಮಾದ್ 27 ಹಾಗೂ ಆಯುಷ್ ಬದೋನಿ 3 ಸಿಕ್ಸರ್​ ಸಮೇತ 41 ರನ್​ಗಳಿಂದ ಉತ್ತಮ ಕಾಣಿಕೆ ನೀಡಿದರು. ಲಕ್ನೋ ಕ್ಯಾಪ್ಟನ್​ ರಿಷಭ್ ಪಂತ್ ಕೇವಲ 2 ರನ್​ ಗಳಿಸಿ ಆಡುವಾಗ ಮ್ಯಾಕ್ಸ್​ವೆಲ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದ ಲಕ್ನೋ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 172 ರನ್​ಗಳ ಗುರಿ ಪಂಜಾಬ್​ಗೆ ನೀಡಿತ್ತು.

ಈ ಟಾರ್ಗೆಟ್ ಚೇಸ್ ಮಾಡಿರುವ ಪಂಜಾಬ್​ 8 ವಿಕೆಟ್​ಗಳ ಅಮೋಘವಾದ ಗೆಲುವು ಸಾಧಿಸಿದೆ. ಪಂಜಾಬ್ ಪರ ಓಪನರ್ ಆಗಿ ಕಣಕ್ಕಿ ಇಳಿದ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಒಳ್ಳೆಯ ಆರಂಭ ಪಡೆಯಲಿಲ್ಲ. ಏಕೆಂದರೆ ಆರ್ಯ ಕೇವಲ 8 ರನ್​ಗೆ ಔಟಾದರು. ಬಳಿಕ ಕ್ರೀಸ್​ಗೆ ಆಗಮಿಸಿದ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಅವರು, ಪ್ರಭಸಿಮ್ರನ್ ಸಿಂಗ್ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಿ, ಲಕ್ನೋ ಬೌಲರ್​ಗಳನ್ನ ಕಾಡಿದರು.

ಇದನ್ನೂ ಓದಿ:ಬಿಗ್​ಬ್ಯಾಷ್​ ಕ್ರಿಕೆಟ್​ ಲೀಗ್​ಗೆ ಕಿಂಗ್​ ಕೊಹ್ಲಿ ಎಂಟ್ರಿ.. ಅಧಿಕೃತ ಘೋಷಣೆ, ವಿರಾಟ್​ಗೆ ಸಿಕ್ಸರ್ಸ್ ಸ್ವಾಗತ​!

publive-image

ಪ್ರಭಸಿಮ್ರನ್ ಸಿಂಗ್ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಅತ್ಯಮೂಲ್ಯವಾದ ಸಿಕ್ಸರ್​​ನಿಂದ 69 ರನ್​ ಗಳಿಸಿದ್ದಾಗ ಕ್ಯಾಚ್​ ನೀಡಿ ಔಟ್ ಆದರು. ಅಯ್ಯರ್ ಜೊತೆ ನೆಹಾಲ್ ವಧೇರಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 25 ಎಸೆತಗಳಲ್ಲಿ 3 ಬೌಂಡರಿ, 4 ಆಕಾಶದೆತ್ತರ ಸಿಕ್ಸರ್​ನಿಂದ 43 ರನ್​ನಿಂದ ಅಜೇಯರಾಗಿ ಉಳಿದರು.

ಇನ್ನು ಶ್ರೇಯಸ್ ಅಯ್ಯರ್ ಕೂಡ ಪಂದ್ಯ ಗೆಲ್ಲಲು ಒಂದು ರನ್​ ಬೇಕಿದ್ದಾಗ ಸಿಕ್ಸರ್ ಬಾರಿಸಿ ಹಾಫ್​​ಸೆಂಚುರಿ ಬಾರಿಸಿದರು. 30 ಬಾಲ್​ ಎದುರಿಸಿದ ಅಯ್ಯರ್ 3 ಫೋರ್, 4 ಸಿಕ್ಸರ್ ಸಮೇತ 52 ರನ್​ ಗಳಿಸಿದರು. 16.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 177 ರನ್​ ಗಳಿಸುವ ಮೂಲಕ ಪಂಜಾಬ್​ ವಿಜಯಿಶಾಲಿ ಆಗಿದೆ. ಇದರಿಂದ ಈ ಟೂರ್ನಿಯಲ್ಲಿ ಸತತ 2ನೇ ಗೆಲುವನ್ನು ಅಯ್ಯರ್ ಬಳಗ ಪಡೆದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment