newsfirstkannada.com

ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ; ಇಂಡಿಯನ್​ ಮೈಕಲ್​ ಜಾಕ್ಸನ್​ಗೆ ಎಷ್ಟು ಮಕ್ಕಳು ಗೊತ್ತಾ?

Share :

Published June 12, 2023 at 3:06am

Update June 12, 2023 at 3:34am

    ಸಂತಸದಲ್ಲಿ ಇಂಡಿಯನ್​ ಮೈಕಲ್​ ಜಾಕ್ಸನ್​​

    ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ

    2ನೇ ಪತ್ನಿಗೆ ಮೊದಲ ಮಗು ಜನನ

ಖ್ಯಾತ ನಟ, ನಿರ್ದೇಶಕ, ಕೊರಿಯೋಗ್ರಾಫರ್​ ಪ್ರಭುದೇವ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಎರಡನೇ ಪತ್ನಿ ಹಿಮಾನಿ ಸಿಂಗ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಪ್ರಭುದೇವ ಈಗಾಗಲೇ ಮೂರು ಮಕ್ಕಳ ತಂದೆಯಾಗಿದ್ದು, ಒಟ್ಟು ಮೂರು ಮಕ್ಕಳನ್ನು ಹೊಂದುವ ಮೂಲಕ ಸಂತಸದಲ್ಲಿದ್ದಾರೆ. ಇಡೀ ಕುಟುಂಬ ಇದೇ ವಿಚಾರವಾಗಿ ಸಂತೋಷದಲ್ಲಿದೆ.

ಪ್ರಭುದೇವ ಅವರು ರಮಲತ್​ ಅವರನ್ನು ಪ್ರೀತಿಸಿ 1995ರಲ್ಲಿ ವಿವಾಹವಾದರು. ರಮಲತ್​ ಅವರಿಂದ ಮೂರು ಮಕ್ಕಳನ್ನು ಪ್ರಭುದೇವ ಪಡೆದರು. ಅವರಲ್ಲಿ ಪುತ್ರ ವಿಶಾಲ್​ ದೇವ 2008ರಲ್ಲಿ ನಿಧನರಾದರು. ಈ ಸಂಗತಿ ಅವರಿಗೆ ಬರಸಿಡಿಲಿನಂತೆ ಬಂದೆರಗಿತು. ಬಳಿಕ 2011ರಲ್ಲಿ ರಮಲತ್​ಗೆ ವಿಚ್ಛೇಧನ ನೀಡಿದರು.

ಬಳಿಕ ಪ್ರಭುದೇವ ಅವರು ಮುಂಬೈ ಫಿಸಿಯೋಥೆರಪಿಸ್ಟ್​  ಹಿಮಾನಿ ಸಿಂಗ್​ ಅವರ ಜೊತೆಗೆ ಪ್ರೀತಿ ಗೆ ಬಿದ್ದರು. ಮೂರು ವರ್ಷದ ಬಳಿಕ ಇವರಿಬ್ಬರು ವಿವಾಹವಾಗುತ್ತಾರೆ. ಇದೀಗ ಹಿಮಾನಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ; ಇಂಡಿಯನ್​ ಮೈಕಲ್​ ಜಾಕ್ಸನ್​ಗೆ ಎಷ್ಟು ಮಕ್ಕಳು ಗೊತ್ತಾ?

https://newsfirstlive.com/wp-content/uploads/2023/06/Prabhudev.jpg

Load More