newsfirstkannada.com

ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಅಟ್ಯಾಕ್.. ಮಧ್ಯರಾತ್ರಿ ಭಯಾನಕ ಕೃತ್ಯ..

Share :

Published June 5, 2024 at 9:13am

    ಲೋಕಸಭಾ ಫಲಿತಾಂಶದ ಬೆನ್ನಲ್ಲೇ ಮನೆ ಮೇಲೆ ಕಲ್ಲು ತೂರಾಟ

    ಡಾ.ಸುಧಾಕರ್ ಗೆದ್ರೆ ರಾಜೀನಾಮೆ ಕೊಡುತ್ತೀನಿ ಎಂದಿದ್ದ ಶಾಸಕ

    ಕಾಂಗ್ರೆಸ್​ನ ರಕ್ಷಾ ರಾಮಯ್ಯ 4,03,707 ಮತಗಳನ್ನ ಪಡೆದು ಸೋಲು

ಚಿಕ್ಕಬಳ್ಳಾಫುರ: ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್ ಅವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಡಾ.ಕೆ ಸುಧಾಕರ್ ಗೆಲುವು ಪಡೆದ ಹಿನ್ನೆಲೆಯಲ್ಲಿ ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರ ನಿವಾಸ ನಗರದ ಕಂದವಾರದಲ್ಲಿದೆ. ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಬಂದು ಮನೆ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದ ಶಾಸಕರ ಮನೆಯ ಕಿಟಕಿಗಳ ಗಾಜುಗಳು ಒಡೆದು ಹೋಗಿವೆ. ಸದ್ಯ ಚಿಕ್ಕಬಳ್ಳಾಪುರ ನಗರದ ಠಾಣೆ ಪೊಲೀಸರು ಶಾಸಕರ ಮನೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಸಿಎಂ ಜಗನ್ ಸಾಮ್ರಾಜ್ಯಕ್ಕೆ ಚಂದ್ರಬಾಬು ನಾಯ್ಡು ಡಿಚ್ಚಿ.. ಪವರ್ ಸ್ಟಾರ್​​ಗೆ ಒಲಿಯುತ್ತಾ ಡಿಸಿಎಂ ಹುದ್ದೆ?

ನಿನ್ನೆ ಇಡೀ ದೇಶದ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದ್ದು ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದರೇ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ ಕೂಡ 9 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ. ಇದರಲ್ಲಿ ಚಿಕ್ಕಬಳ್ಳಾಪುರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಡಾ.ಕೆ ಸುಧಾಕರ್ 95 ಸಾವಿರ ಮತಗಳಿಂದ ಭರ್ಜರಿ ಗೆಲುವು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಮನೆಯ ಮೇಲೆ ಕಲ್ಲು ತೂರಾಟ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಅಟ್ಯಾಕ್.. ಮಧ್ಯರಾತ್ರಿ ಭಯಾನಕ ಕೃತ್ಯ..

https://newsfirstlive.com/wp-content/uploads/2024/06/PRADEEP_ESHWAR_MLA.jpg

Load More